ಪ್ರಧಾನಿ ಮೋದಿ ಪಾತ್ರದಲ್ಲಿ ನಟಿಸಿದ್ದ ವಿವೇಕ್ ಒಬೆರಾಯ್ ಈಗ ಬಿಜೆಪಿ ಸ್ಟಾರ್ ಕ್ಯಾಂಪೆನರ್ !

ಪ್ರಧಾನಿ ನರೇಂದ್ರ ಮೋದಿ ಜೀವನ ಆಧಾರಿತ ಸಿನಿಮಾದಲ್ಲಿ ಮೋದಿಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ವಿವೇಕ್ ಒಬೆರಾಯ್ ಗೆ ಈಗ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ  ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. 

Last Updated : Apr 5, 2019, 06:29 PM IST
 ಪ್ರಧಾನಿ ಮೋದಿ ಪಾತ್ರದಲ್ಲಿ ನಟಿಸಿದ್ದ ವಿವೇಕ್ ಒಬೆರಾಯ್ ಈಗ ಬಿಜೆಪಿ ಸ್ಟಾರ್ ಕ್ಯಾಂಪೆನರ್ ! title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನ ಆಧಾರಿತ ಸಿನಿಮಾದಲ್ಲಿ ಮೋದಿಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ವಿವೇಕ್ ಒಬೆರಾಯ್ ಗೆ ಈಗ ಲೋಕಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. 

ಇತ್ತೀಚಿಗೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಬಗ್ಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದರು.ಈ  ಹಿನ್ನಲೆಯಲ್ಲಿ ಈಗ ಅವರಿಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ.ಗುಜರಾತ್ ನಲ್ಲಿ ಪ್ರಚಾರ ಮಾಡಬೇಕಾದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವಿವೇಕ್ ಒಬೆರಾಯ್ ಸ್ಥಾನ ಪಡೆದಿದ್ದಾರೆ

ವಿವೇಕ್ ತಂದೆ ಸುರೇಶ ಒಬೆರಾಯ್ ಕೂಡ ಬಿಜೆಪಿ ಬೆಂಬಲಿಗರಾಗಿದ್ದು 2004 ರಿಂದಲೂ ಅವರು ಬಿಜೆಪಿ ಪಕ್ಷದ ಜೊತೆ ಸಂಪರ್ಕವನ್ನು ಹೊಂದಿದ್ದಾರೆ.ಈಗ ವಿವೇಕ್ ಒಬೆರಾಯ್ ಜೊತೆಗೆ ಸ್ಮೃತಿ ಇರಾನಿ, ಹೇಮಾ ಮಾಲಿನಿ, ಪರೇಶ್ ರಾವಲ್ ಕೂಡ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. 

Trending News