Vistara ವ್ಯಾಲೆಂಟೈನ್ಸ್ ಡೇ ಸೇಲ್: ವಿಮಾನ ಟಿಕೆಟ್ ದರದಲ್ಲಿ 80% ರಿಯಾಯಿತಿ!

ಈ ವಿಶೇಷ ಸೇಲ್ ನಲ್ಲಿ ಫೆಬ್ರವರಿ 27 ರಿಂದ ಸೆಪ್ಟೆಂಬರ್ 18ರ ನಡುವಿನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಬಹುದಾಗಿದೆ. 

Last Updated : Feb 12, 2019, 12:40 PM IST
Vistara ವ್ಯಾಲೆಂಟೈನ್ಸ್ ಡೇ ಸೇಲ್: ವಿಮಾನ ಟಿಕೆಟ್ ದರದಲ್ಲಿ 80% ರಿಯಾಯಿತಿ! title=

ನವದೆಹಲಿ: ಪ್ರೇಮಿಗಳ ದಿನದ ಅಂಗವಾಗಿ ದೇಶದ ಪ್ರತಿಷ್ಟಿತ ವಿಮಾನಯಾನ ಸಂಸ್ಥೆ Vistara 48 ಗಂಟೆಗಳ ವಿಶೇಷ ಸೇಲ್ ಘೋಷಣೆ ಮಾಡಿದ್ದು, ಎಕಾನಮಿ, ಪ್ರೀಮಿಯಂ ಮತ್ತು ಬಿಸಿನೆಸ್ ಕ್ಲಾಸ್ ಟಿಕೆಟ್'ಗಳ ಮೇಲೆ ಶೇ.80 ರಷ್ಟು ರಿಯಾಯಿತಿ ನೀಡಲಿದೆ.

ಅದರಂತೆ ಎಲ್ಲಾ ತೆರಿಗೆ ಮತ್ತು ಶುಲ್ಕಗಳೂ ಸೇರಿದಂತೆ ಎಕಾನಮಿ ಕ್ಲಾಸ್ ಟಿಕೆಟ್ ದರ 899 ರೂ., ಪ್ರೀಮಿಯಂ ಎಕಾನಮಿ ದರ 1499 ರೂ. ಮತ್ತು ಬಿಸಿನೆಸ್ ಕ್ಲಾಸ್ ಟಿಕೆಟ್ ದರ 5499ರೂ.ಗಳಿಂದ ಆರಂಭವಾಗಲಿದೆ.

ಈ ಸೇಲ್ ಕೇವಲ 48 ಗಂಟೆಗಳ ಅವಧಿಗೆ ಸಿಮಿತವಾಗಿದ್ದು, ಫೆಬ್ರವರಿ 12ರಿಂದ ಫೆಬ್ರವರಿ 13ರ ಮಧ್ಯರಾತ್ರಿ ವರೆಗೆ ಚಾಲ್ತಿಯಲ್ಲಿರಲಿದೆ. ಈ ಸೇಲ್ ನಲ್ಲಿ ಫೆಬ್ರವರಿ 27 ರಿಂದ ಸೆಪ್ಟೆಂಬರ್ 18ರ ನಡುವಿನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಬಹುದಾಗಿದೆ. ಜೊತೆಗೆ ಎಕಾನಮಿ ಮತ್ತು ಪ್ರೀಮಿಯಂ ಎಕಾನಮಿ ಕ್ಲಾಸ್ ಟಿಕೆಟ್ ಗಳನ್ನು 15 ದಿನಗಳ ಮುಂಚಿತವಾಗಿ ಮತ್ತು ಬಿಸಿನೆಸ್ ಕ್ಲಾಸ್ ಟಿಕೆಟ್ ಗಳನ್ನು 7 ದಿನಗಳ ಮುಂಚಿತವಾಗಿ ಬುಕ್ ಮಾಡಬಹುದು ಎಂದು ವಿಸ್ತಾರ ಏರ್ಲೈನ್ಸ್ ಸಂಸ್ಥೆ ತಿಳಿಸಿದೆ. 
 

Trending News