Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ...

Viral Video: ಪತಿ ನಡವಳಿಕೆ ಇಂದ ಸಂಶಯ ಹೊಂದಿದ್ದ ಪತ್ನಿ ಒಂದು ದಿನ ಪತಿಯನ್ನು ಹಿಂಬಾಲಿಸಿ ಬಂದಳು. ಆ ದಿನ ಪತಿ ಜೊತೆಗೆ ಆತನ ಗರ್ಲ್ ಫ್ರೆಂಡ್ ಅನ್ನು ಕಣ್ಣೆದುರೇ ಕಂಡಾಗ ಏನಾಯ್ತು.... ಇಲ್ಲಿದೆ ರೋಚಕ ವೈರಲ್ ವಿಡಿಯೋ...

Written by - Yashaswini V | Last Updated : Sep 13, 2021, 10:02 AM IST
  • ಸಾಮಾಜಿಕ ಜಾಲತಾಣದಲ್ಲಿ ಹೆಂಡತಿ ಎದುರೇ ಬೇರೆ ಮಹಿಳೆಯ ಜೊತೆ ಸಿಕ್ಕಿಬಿದ್ದ ಪತಿಯ ವಿಡಿಯೋ ವೈರಲ್
  • ಪತಿಯ ರಾಸಲೀಲೆ ಅನ್ನು ಸಾಕ್ಷಿ ಸಮೇತ ಹಿಡಿದ ಪತ್ನಿ
  • ಸದ್ಯ ಈ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ... title=
Husband caught red-handed with his girlfriend, see Viral Video

ಔರಂಗಾಬಾದ್: Viral Video- ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಗಂಡನ ನಡವಳಿಕೆಯಿಂದ ಆತನ ಮೇಲೆ ಸಂಶಯ ಹೊಂದಿದ್ದ ಹೆಂಡತಿಯು ಒಂದು ದಿನ ಆತನನ್ನು ಹಿಂಬಾಲಿಸಿ ಬಂದಿದ್ದಾಳೆ. ಈ ಸಂದರ್ಭದಲ್ಲಿ ಪತಿಯ ರಾಸಲೀಲೆ ಅನ್ನು ಸಾಕ್ಷಿ ಸಮೇತ ಹಿಡಿದಿದ್ದಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ, ತನ್ನ ಗಂಡನ ಮೇಲೆ ಸಂಶಯ ಹೊಂದಿದ್ದ ಹೆಂಡತಿಯು ಆತನನ್ನು ಹಿಂಬಾಲಿಸಿ ಬಂದಿದ್ದಾಳೆ. ಈ ವೇಳೆ ಹೋಟೆಲ್ ಒಂದರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪತಿ ಮತ್ತು ಆತನ ಗೆಳತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. 

ಇದನ್ನೂ ಓದಿ- Weird Video: ರಸ್ತೆ ದಾಟುತ್ತಿರುವ Anaconda, ನೋಡುತ್ತಲೇ ಸ್ಥಬ್ಧಗೊಂಡ ಟ್ರ್ಯಾಫಿಕ್ ... ನೀವು ನೋಡಿ

ವೀಡಿಯೊದಲ್ಲಿ (Video), ಹೋಟೆಲ್ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರಿನ ಕಡೆಗೆ ಓಡುತ್ತಿರುವ ಮಹಿಳೆಯೊಬ್ಬಳು ಕಾಣಿಸುತ್ತಾಳೆ. ಮಹಿಳೆ ಅಲ್ಲಿಗೆ ಬಂದ ತಕ್ಷಣ, ಅವಳು ಕಾರಿನೊಳಗೆ ಕುಳಿತಿದ್ದ ಮಹಿಳೆಯನ್ನು ಎಳೆದು ಥಳಿಸಲು ಪ್ರಾರಂಭಿಸಿದಳು. ಈ ದೃಶ್ಯದಲ್ಲಿ ಕಾರಿನಲ್ಲಿರುವ ಮಹಿಳೆ ತನ್ನ ಮುಖವನ್ನು ದುಪ್ಪಟ್ಟದಿಂದ ಮುಚ್ಚಿರುವುದನ್ನು ಕಾಣಬಹುದು. ಆ ಪುರುಷನ ಹೆಂಡತಿಯು ತನ್ನ ಪತಿಯೊಂದಿಗೆ ಇದ್ದ ಮಹಿಳೆಯ ಮುಖಕ್ಕೆ ಮುಚ್ಚಿದ್ದ ದುಪ್ಪಟ್ಟವನ್ನು ತೆಗೆಯಲು ಪ್ರಯತ್ನಿಸುತ್ತಾ, 'ಯೇ ಕೌನ್ ಹೇ' (ಇದು ಯಾರು) ಏನು ತನ್ನ ಪತಿಯನ್ನು ಪ್ರಶ್ನಿಸುತ್ತಿದ್ದಾಳೆ. ಏತನ್ಮಧ್ಯೆ, ಪುರುಷನು ತನ್ನ ಹೆಂಡತಿಯ ಕೈ ಯಿಂದ ಪ್ರಿಯತಮೆಯನ್ನು ಬಿಡಿಸಲು ಪ್ರಯತ್ನಿಸುತ್ತಾನೆ. ಈ ದೃಶ್ಯವನ್ನು ಕಂಡ ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. 

ಇದನ್ನೂ ಓದಿ- Viral Video: ನೆಗೆನೆಗೆದು ಅಚ್ಚರಿ ಮೂಡಿಸಿದ ಪಿಂಕ್ ಡಾಲ್ಫಿನ್..!

ವೀಡಿಯೋದಲ್ಲಿನ ದೃಶ್ಯವನ್ನು ನೋಡಿದಾಗ, ಕಾರಿನಲ್ಲಿ ಕುಳಿತಿರುವ ಪುರುಷ ಮತ್ತು ಮಹಿಳೆ ಬಹುಶಃ ಒಂದೇ ಹೋಟೆಲ್‌ಗೆ ಹೋಗಲು ಬಂದಿದ್ದಾರೆ ಎಂದು ತೋರುತ್ತದೆ. ಹೋಟೆಲ್ ಮುಂದೆ ಪತಿ ಜೊತೆಗೆ ಬೇರೊಬ್ಬ ಹೆಣ್ಣನ್ನು ಕಂಡ ಪತ್ನಿಯು ಏನು ಮಾಡಬಹುದು. ಇಲ್ಲಿದೆ ನೋಡಿ ವೈರಲ್ ವಿಡಿಯೋ (Viral Video)....

ಗಿಡ್ಡೆ ವ್ಯಕ್ತಿಯು ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಲವರು ಪತ್ನಿಯ ಸ್ಥಿತಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ ಕೆಲವರು ಮಹಿಳೆಯನ್ನು ಥಳಿಸುವ ಬದಲಿಗೆ ಆಕೆ ಯಾರು ಎಂದು ಪತಿಯನ್ನು ಪ್ರಶ್ನಿಸುವಂತೆ ಸಲಹೆ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News