ಭಿಂಡ್: ವಿಚಾರಣಾಧಿನ ಖೈದಿಯೊಬ್ಬ ಇಬ್ಬರು ಪೋಲಿಸ್ ಪೇದೆಗಳ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡಿ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಭಿಂಡ್ ಪೋಲಿಸ್ ಠಾಣೆಯಲ್ಲಿ ನಡೆದಿದೆ.
ಪೊಲೀಸ್ ಠಾಣೆಯಲ್ಲಿ ಇಬ್ಬರು ಪೋಲಿಸ್ ಪೇದೆಗಳು ಕುಳಿತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಹಿಂದಿನಿಂದ ಬಂದು ದಾಳಿ ನಡೆಸಿದ ವಿಚಾರಣಾಧೀನ ಖೈದಿಯೊಬ್ಬ ಪೇದೆಗಳ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಓರ್ವ ಪೇದೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮತ್ತೋರ್ವ ಪೇದೆ ಭಿಂಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಸೆಪ್ಟೆಂಬರ್ 9 ರಂದು ನಡೆದಿದ್ದು, ಪೊಲೀಸ್ ಠಾಣೆಯ ಸಿಸಿಟಿವಿಯಲ್ಲಿ ಈ ದೃಶ್ಯಾವಳಿ ದಾಖಲಾಗಿದೆ. ಇದನ್ನು ಎಎನ್ಐ ಬಿಡುಗಡೆ ಮಾಡಿದ್ದು, ಪೋಲಿಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
#WATCH Dramatic visuals of an undertrial prisoner viciously attacking two prison guards at a police station in Bhind on 9th September. One police personnel has been referred to Delhi for treatment, another is under treatment at a district hospital in Bhind (Source: CCTV footage) pic.twitter.com/eXEQ5eH51y
— ANI (@ANI) September 11, 2018