Viral Video: ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಕುರ್ಚಿಯೇರಿ ಕುಳಿತ ‘ಮಂಗನಾಟ’ ನೋಡಿ…

ಶಾಲೆಗೆ ಬಂದಿದ್ದ ನೂತನ ಪ್ರಾಂಶುಪಾಲರನ್ನು ನೋಡಿ ಒಂದು ಕ್ಷಣ ಟೀಚರ್​ಗಳೇ ಅವಾಕ್ಕಾಗಿದ್ದರು.

Written by - Puttaraj K Alur | Last Updated : Aug 1, 2021, 05:01 PM IST
  • ಮಧ್ಯಪ್ರದೇಶದ ಗ್ವಾಲಿಯರ್ ನ ಸರ್ಕಾರಿ ಶಾಲೆಗೆ ನುಗ್ಗಿದ ಕೋತಿಯೊಂದು ಮಂಗನಾಟ ಮಾಡಿದೆ
  • ಪ್ರಿನ್ಸಿಪಾಲ್ ಚೇರ್ ಮೇಲೆ ಕುಳಿತು ತುಂಟಾಟ ಮಾಡುತ್ತಿದ್ದ ಕೋತಿ ಓಡಿಸಲು ಶಿಕ್ಷಕರ ಹರಸಾಹಸ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಮಂಗಣ್ಣನ ಮಂಗನಾಟ
Viral Video: ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಕುರ್ಚಿಯೇರಿ ಕುಳಿತ ‘ಮಂಗನಾಟ’ ನೋಡಿ… title=
ಪ್ರಿನ್ಸಿಪಾಲ್ ಚೇರ್ ಮೇಲೆ ಕುಳಿತು ಮಂಗಣ್ಣನ ತುಂಟಾಟ

ಮಧ್ಯಪ್ರದೇಶ: ಕೋತಿಗಳು ಮಾಡುವ ಕುಚೇಷ್ಟೆಗಳು ಒಂದೆರಡಲ್ಲ. ತುಂಟಾಟಕ್ಕೆ ಹೆಸರಾಗಿರುವ ಮಂಗಗಳು ಮಾಡುವ ತಲೆಹರಟೆ(Funny Monkey)ಯನ್ನು ನೀವು ನೋಡೇ ಇರ್ತಿರಿ. ಮಂಗನಾಟ ಪ್ರತಿಯೊಬ್ಬರ ಮೊಗದಲ್ಲೂ ನಗು ತರಿಸುತ್ತದೆ. ದಂಡು ಕಟ್ಟಿಕೊಂಡು ಬರುವ ಕೋತಿಗಳ ಕಾಟಕ್ಕೆ ಕೆಲವರು ಬೇಸತ್ತು ಹೋಗಿರುತ್ತಾರೆ. ಅವುಗಳು ಮಾಡುವ ಸರ್ಕಸ್ ಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕವರೂ ಇದ್ದಾರೆ. ಮಂಗಗಳ ಮಂಗಾಟದ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದೇ ರೀತಿಯ ಒಂದು ಕೋತಿಯ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

ಯಾರಿಗೂ ಹೆದರದೆ, ಬೆದರಿಗೆ ಸೀದಾ ಶಾಲೆಗೆ ನುಗ್ಗಿದ ಕೋತಿಯೊಂದು ಪಿನ್ಸಿಪಾಲ್ ಕುರ್ಚಿ ಏರಿ ಕುಳಿತಿದೆ. ಶಾಲೆಗೆ ಬಂದಿದ್ದ ನೂತನ ಪ್ರಾಂಶುಪಾಲರನ್ನು ನೋಡಿ ಒಂದು ಕ್ಷಣ ಟೀಚರ್​ಗಳೇ ಅವಾಕ್ಕಾಗಿದ್ದಾರೆ. ಹೌದು, ಮಧ್ಯಪ್ರದೇಶ(Madhya Pradesh)ದ ಗ್ವಾಲಿಯರ್ ನ ಶಾಲೆಗೆ ನುಗ್ಗಿದ ಕೋತಿಯೊಂದು ಮಂಗನಾಟ ಮಾಡಿರುವ ತಾಮಾಷೆಯ ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿನ ಸರ್ಕಾರಿ ಶಾಲೆಯ ಸುತ್ತಮುತ್ತ ದಟ್ಟ ಅರಣ್ಯವಿರುವುದರಿಂದ ಶಾಲಾ ಆವರಣದಲ್ಲಿ ಆಗಾಗ ಮಂಗಗಳು ಬಂದು ಹೋಗುತ್ತಿದ್ದವು. ಶಾಲೆಯ ಪ್ರಾಂಶುಪಾಲರು, ಟೀಚರ್ ಗಳು ಮತ್ತು ಮಕ್ಕಳು ಮಂಗಗಳ ತುಂಟಾಟ(Funny Monkey) ನೋಡಿ ಖುಷಿ ಪಡುತ್ತಿದ್ದರು. ಮಂಗಗಳಲ್ವೆ.. ಅಂತಾ ಅವುಗಳ ತಲೆಹರಟೆ ನೋಡಿ ಸುಮ್ಮನಾಗುತ್ತಿದ್ದರು. ಆದರೆ ಈ ಕೋತಿ ಮಾತ್ರ ಸೀದಾ ಪ್ರಿನ್ಸಿಪಾಲ್ ಚೇಂಬರ್ ಪ್ರವೇಶಿಸಿ ಕುರ್ಚಿಯ ಮೇಲೆಯೇ ಕುಳಿತುಕೊಂಡಿದೆ.

ಇದನ್ನೂ ಓದಿ: Viral Video : ಮದುವೆ ಮಂಟಪದಲ್ಲಿ ತೂಕಡಿಸುತ್ತಿದ್ದ ವಧು ; ಹಿಂದೆ ಕುಳಿತಿದ್ದ ವ್ಯಕ್ತಿ ಮಾಡಿದ ಕೆಲಸ ನೋಡಿ

ಮೊದಲು ಶಾಲೆಗೆ ನುಗ್ಗಿದ ಕೋತಿ(Monkey) ಸೀದಾ ಪ್ರಿನ್ಸಿಪಾಲ್ ಚೇಂಬರ್ ಪ್ರವೇಶಿಸಿದೆ. ಅಲ್ಲಿ ತನಗೆ ತಿನ್ನಲು ಏನಾದರೂ ಸಿಗಬಹುದೇ ಎಂದು ಹುಡುಕಾಟ ನಡೆಸಿದೆ. ಆದರೆ ಅದಕ್ಕೆ ತಿನ್ನಲು ಏನೂ ಸಿಕ್ಕಿಲ್ಲ. ಹೀಗಾಗಿ ಮೇಜಿನ ಮೇಲೆ ಹತ್ತಿ ಅಲ್ಲಿದ್ದ ವಸ್ತುಗಳನ್ನು ಕಳೆಕ್ಕೆ ಎಸೆದಿದೆ. ಹೀಗೆ ತುಂಟಾಟ ಮಾಡುತ್ತಾ ಪ್ರಿನ್ಸಿಪಾಲ್ ಚೇರ್ ಮೇಲೆ ಕುಳಿತಿದೆ. ಚೇರ್ ಮೇಲೆ ಕುಳಿತು ಕುಚೇಷ್ಟೆ ಮಾಡುತ್ತಿದ್ದ ಕೋತಿಯನ್ನುಓಡಿಸಲು ಶಿಕ್ಷಕರು ಪ್ರಯತ್ನಿಸಿದ್ದಾರೆ. ಆದರೆ ಕೋತಿ ಮಾತ್ರ ಚೇರ್ ಬಿಟ್ಟು ಕದಲದೆ ಜಪ್ಪಯ್ಯ ಎಂದರೂ ಹೋಗುವುದಿಲ್ಲವೆಂದು ಹಠ ಹಿಡಿದಿದೆ. ವೀಲಿಂಗ್ ಇರುವ ಚೇರ್ ಸುತ್ತಲೂ ಸುತ್ತಿದ್ದ ಪ್ಲಾಸ್ಟಿಕ್ ಅನ್ನು ಕಿತ್ತು ಹಾಕಿದ ಮಂಗವನ್ನು ಓಡಿಸಲು ಹರಸಾಹಸಪಡಬೇಕಾಯಿತು. ಕೊನೆಗೆ ಕೋಲು ತಂದು ಕೋತಿಯನ್ನು ಓಡಿಸಬೇಕಾಯಿತು.

ಇದನ್ನೂ ಓದಿ: New RBI Rules : ಇಂದಿನಿಂದ ಬದಲಾಗಲಿದೆ ವೇತನ, ಪಿಂಚಣಿ, EMI ಪಾವತಿ ನಿಯಮ

ಕೆಲವರು ಕೋತಿಯ ತುಂಟಾಟದ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾ(Social Media)ದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಕೋತಿಯ ತುಂಟಾಟ ಕಂಡು ಬಿದ್ದು ಬಿದ್ದು ನಕ್ಕಿದ್ದಾರೆ.      

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News