ಸಂಸ್ಕೃತ ಕ್ರಿಕೆಟ್ ಕಾಮೆಂಟರಿಗೆ ಮನಸೋತ ಪ್ರಧಾನಿ ಮೋದಿ..!

ಗಲ್ಲಿ ಕ್ರಿಕೆಟ್ ಆಟದ ಬಗ್ಗೆ ವ್ಯಕ್ತಿಯೊಬ್ಬರು ಸಂಸ್ಕೃತದಲ್ಲಿ ಕಾಮೆಂಟರಿ ನೀಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ.

Written by - Krishna N K | Last Updated : Oct 5, 2022, 01:40 PM IST
  • ಗಲ್ಲಿ ಕ್ರಿಕೆಟ್ ಆಟಕ್ಕೆ ಸಂಸ್ಕೃತದಲ್ಲಿ ಕಾಮೆಂಟರಿ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌
  • ಸಂಸ್ಕೃತ ಕ್ರಿಕೆಟ್ ಕಾಮೆಂಟರಿಗೆ ಮನಸೋತ ಪ್ರಧಾನಿ ಮೋದಿ
 ಸಂಸ್ಕೃತ ಕ್ರಿಕೆಟ್ ಕಾಮೆಂಟರಿಗೆ ಮನಸೋತ ಪ್ರಧಾನಿ ಮೋದಿ..! title=

ನವದೆಹಲಿ : ಗಲ್ಲಿ ಕ್ರಿಕೆಟ್ ಆಟದ ಬಗ್ಗೆ ವ್ಯಕ್ತಿಯೊಬ್ಬರು ಸಂಸ್ಕೃತದಲ್ಲಿ ಕಾಮೆಂಟರಿ ನೀಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. 

ಲಕ್ಷ್ಮೀನಾರಾಯಣ ಬಿಎಸ್‌ ಎಂಬುವರು ತಮ್ಮ ಟ್ವಿಟರ್‌ ಖಾತೆಯಲ್ಲಿ 44 ಸೆಕೆಂಡುಗಳ ಸುದೀರ್ಘ ಕ್ಲಿಪ್‌ನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಯುವಕರ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದೆ, ಅಲ್ಲಿರುವ ವ್ಯಕ್ತಿಯೊಬ್ಬರು ನಿರರ್ಗಳವಾಗಿ ಸಂಸ್ಕೃತದಲ್ಲಿ ಕಾಮೆಂಟ್ ಮಾಡುವುದನ್ನು ಕೇಳಬಹುದು. ಇನ್ನು ವೀಡಿಯೊವನ್ನು 6.5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ ಮತ್ತು 21,000 ಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ.

ವೈರಲ್ ಆಗಿರುವ ವಿಡಿಯೋ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಗಿದೆ. ʼಇದು ನೋಡಲು ಹೃದಯವಂತವಾಗಿದೆ... ಈ ಪ್ರಯತ್ನವನ್ನು ಕೈಗೊಂಡವರಿಗೆ ಅಭಿನಂದನೆಗಳುʼ ಎಂದು ಮೋದಿ ಮರುಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News