Viral Video: ಬಾಂಬೆ ಐಐಟಿ ಕಾಲೇಜಿನ ಕ್ಲಾಸ್ ರೂಂಗೆ ಹಸು ಎಂಟ್ರಿ! ಮುಂದೆ...

ವೀಡಿಯೊದಲ್ಲಿ, ಹಸುವೊಂದು ಆಕಸ್ಮಿಕವಾಗಿ ತರಗತಿಯೊಳಗೆ ಪ್ರವೇಶಿಸಿದ್ದು, ಇದರಿಂದ ಭಯಗೊಂಡ ವಿಧ್ಯಾರ್ಥಿಗಳು ಅತ್ತಿತ್ತ ಓಡಿದ ದೃಶ್ಯವನ್ನು ಕಾಣಬಹುದು. 

Last Updated : Jul 29, 2019, 04:14 PM IST
Viral Video: ಬಾಂಬೆ ಐಐಟಿ ಕಾಲೇಜಿನ ಕ್ಲಾಸ್ ರೂಂಗೆ ಹಸು ಎಂಟ್ರಿ! ಮುಂದೆ... title=

ಮುಂಬೈ: ಬಾಂಬೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಹಸುವೊಂದು ಇಂಜಿನಿಯರಿಂಗ್ ತರಗತಿಯೊಳಗೆ ಬಂದು ಪಾಠಪವಚನಗಳಿಗೆ ಅಡ್ಡಿ ಮಾಡಿದ ವೀದಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ವೀಡಿಯೊದಲ್ಲಿ, ಹಸುವೊಂದು ಆಕಸ್ಮಿಕವಾಗಿ ತರಗತಿಯೊಳಗೆ ಪ್ರವೇಶಿಸಿದ್ದು, ಇದರಿಂದ ಭಯಗೊಂಡ ವಿಧ್ಯಾರ್ಥಿಗಳು ಅತ್ತಿತ್ತ ಓಡಿದ ದೃಶ್ಯವನ್ನು ಕಾಣಬಹುದು. ಅಷ್ಟೇ ಅಲ್ಲದೆ, ತರಗತಿ ಪಾಠ ಮಾಡುತ್ತಿದ್ದ ಉಪನ್ಯಾಸಕರಿಗೂ ಸಹ ಹಸು ತರಗತಿ ಒಲಗೇ ಬಂದಿದ್ದು ಕಂಡು ಒಂದು ಕ್ಷಣ ಏನು ಮಾಡುವುದು ಎಂದು ಅರಿಯದೆ ಗೊಂದಲಕ್ಕೀಡಾದ ಘಟನೆ ನಡೆದಿದೆ. ಈ ಘಟನೆ ಐಐಟಿ ಕ್ಯಾಂಪಸ್ ನ ಮೊದಲ ಮಹಡಿಯಲ್ಲಿರೋ ತರಗತಿಯಲ್ಲಿ ಶನಿವಾರ ನಡೆದಿದೆ ಎನ್ನಲಾಗಿದೆ.  

ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದಿರುವ ಕಾಲೇಜಿನ ಅಧಿಕಾರಿಗಳು, ತನಿಖೆ ನಡೆಸುವುದಾಗಿ ಸುದ್ದಿ ಸಂಸ್ಥೆ ಐಎಎನ್ಎಸ್ ಗೆ ಹೇಳಿದ್ದಾರೆ. 

Trending News