Viral Video : ಹಾರ ಬದಲಾಯಿಸುತ್ತಿದ್ದಂತೆಯೇ ವರನ ಕೆನ್ನೆಗೆ ರಪ ರಪನೆ ಬಾರಿಸಿ ಮಂಟಪ ಬಿಟ್ಟು ಕೆಳಗಿಳಿದ ವಧು

Wedding Viral video : ಒಂದು ಹಂತದವರೆಗೆ ಎಲ್ಲವೂ ಸುಗಮವಾಗಿ ನಡೆದಿದೆ. ಆದರೆ ಹಾರ ಬದಲಾಯಿಸುತ್ತಿದ್ದಂತೆಯೇ ವಧುವಿಗೆ ಅದೇನಾಯಿತೋ ಗೊತ್ತಿಲ್ಲ, ವರನ ಕೆನ್ನೆಗೆ ರಪ ರಪನೆ ಬಾರಿಸಲು ಆರಂಭಿಸುತ್ತಾಳೆ.

Written by - Ranjitha R K | Last Updated : Sep 7, 2022, 02:48 PM IST
  • ಮದುವೆ ಮಂಟಪದಲ್ಲಿ ವರನಿಗೆ ಕಪಾಳ ಮೋಕ್ಷ ಮಾಡಿದ ವಧು
  • ಮಂಟಪ ಬಿಟ್ಟು ಹಿಡ ನಡೆದ ಮದುಮಗಳು
  • ವೈರಲ್ ಆಯಿತು ವಿಡಿಯೋ
Viral Video : ಹಾರ ಬದಲಾಯಿಸುತ್ತಿದ್ದಂತೆಯೇ ವರನ ಕೆನ್ನೆಗೆ ರಪ ರಪನೆ ಬಾರಿಸಿ ಮಂಟಪ ಬಿಟ್ಟು ಕೆಳಗಿಳಿದ ವಧು  title=
Bride slapping bridegroom (photo twitter)

Wedding Viral video : ಮದುವೆ ಎನ್ನುವುದು ಅಪೂರ್ವ ಬಂಧ. ಅಲ್ಲಿ ಹೆಣ್ಣು ಗಂಡು ಮಾತ್ರ ಒಂದಾಗುವುದಿಲ್ಲ. ಎರಡು ಕುಟುಂಬಗಳೇ ಒಂದಾಗುತ್ತದೆ.  ಒಂದು ಮದುವೆ ನೆರವೇರಬೇಕಾದರೆ ಹೆತ್ತವರು ಪಡುವ ಪಾಡು ಅಷ್ಟಿಷ್ಟಲ್ಲ. ಮದುವೆಗಾಗಿ ಗಂಡನ್ನೇ  ಆಗಲಿ ಹೆಣ್ಣನ್ನೇ ಆಗಲಿ ಹುಡುಕುವಾಗ ಹತ್ತಾರು ಮಂದಿಯಲ್ಲಿ ವಿಚಾರಿಸುತ್ತಾರೆ. ತಮ್ಮ ಮಕ್ಕಳಿಗೆ ಅತ್ಯುತ್ತಮ ಸಂಗಾತಿ ಸಿಗಬೇಕು ಎನ್ನುವುದು ಎಲ್ಲಾ ಹೆತ್ತವರ ಬಯಕೆಯಾಗಿರುತ್ತದೆ. ಆದರೆ ಒಮ್ಮೊಮ್ಮೆ ಮಂಟಪದವರೆಗೆ ಬಂದ ಮದುವೆ ಅರ್ಧಕ್ಕೆ ನಿಂತು ಹೋಗುತ್ತದೆ. ಹೀಗಾದಾಗ  ಅನೇಕ ಬಾರಿ ಕಾರಣಗಳು ಕೂಡಾ ಬಹಳ ಕ್ಷುಲ್ಲಕ ಅನ್ನಿಸುತ್ತದೆ. 

ವರನಿಗೆ ಕಪಾಳ ಮೋಕ್ಷ : ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಕೂಡಾ ಇಂಥದ್ದೇ ಒಂದು ಘಟನೆ ನಡೆದಿದೆ. ಇಲ್ಲಿ ಒಂದು ಹಂತದವರೆಗೆ ಎಲ್ಲವೂ ಸುಗಮವಾಗಿ ನಡೆದಿದೆ. ಆದರೆ ಹಾರ ಬದಲಾಯಿಸುತ್ತಿದ್ದಂತೆಯೇ ವಧುವಿಗೆ ಅದೇನಾಯಿತೋ ಗೊತ್ತಿಲ್ಲ, ವರನ ಕೆನ್ನೆಗೆ ರಪ ರಪನೆ ಬಾರಿಸಲು ಆರಂಭಿಸುತ್ತಾಳೆ. ಏನಾಗುತ್ತಿದೆ ಎಂದು ತಿಳಿಯಲು ಕೂಡಾ ಅಲ್ಲಿ ವರನಿಗೆ ಅವಕಾಶವೇ ಇಲ್ಲವಾಗುತ್ತದೆ. 

ಇದನ್ನೂ ಓದಿ : Viral Video: ಆಸ್ಪತ್ರೆ ಒಳಗೆ ಪ್ರವೇಶಿಸಿದ ದೈತ್ಯ ಆನೆ, ಮುಂದೆ...

ಮಂಟಪ ಬಿಟ್ಟು ಹೊರ ನಡೆದ ವಧು : ಇಷ್ಟಾದ ಮೇಲೆ ಮಂಟಪದಿಂದ ಸರ ಸರನೆ ಇಳಿದು ಬಂದು ಬಿಡುತ್ತಾಳೆ ವಧು. ಅಲ್ಲಿ ನೆರೆದಿದ್ದ ಅಷ್ಟೂ ಜನಕ್ಕೂ ಏನಾಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಆದರೆ ಮಾಹಿತಿಯ ಪ್ರಕಾರ ವಧುವಿಗೆ ವರ ಇಷ್ಟವಿರಲಿಲ್ಲವಂತೆ. ಹಾರ ಹಾಕಿದ ಮೇಲೆ ಮಾಂಗಲ್ಯ ಧಾರಣೆ, ಸಪ್ತಪದಿ, ಸಿಂಧೂರ ಎಂದು ಎಲ್ಲಾ ಶಾಸ್ತ್ರಗಳೂ ನೆರೆವೇರುತ್ತದೆ. ಹಾಗಾಗಿ ಹಾರ ಬದಲಾಯಿಸುವ ವೇಳೆಯೇ ಮಂಟಪ ಬಿಟ್ಟು ವಧು ಹೊರ ನಡೆದಿದ್ದಾಳೆ ಎನ್ನಲಾಗಿದೆ.  

 

ಪತ್ರಕರ್ತ ಪಿಯೂಷ್ ರೈ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.  ವರದಿಯ ಪ್ರಕಾರ, ನಂತರ ವಧುವನ್ನು ಕೂರಿಸಿ ಮನೆಯವರೆಲ್ಲಾ ಮತ್ತೆ ಮನವೊಲಿಸಿದ್ದಾರೆ ಎನ್ನಲಾಗಿದೆ.ಪೊಲೀಸರು ಹಿರಿಯರ ಮಧ್ಯ ಪ್ರವೇಶದೊಂದಿಗೆ ನಂತರ ಮದುವೆ ಕೂಡಾ ನೆರವೇರಿದೆಯಂತೆ. 

ಇದನ್ನೂ ಓದಿ : Viral Video: ದೇಸಿ ಆಂಟಿಗಳ ಸಖತ್‌ ಡ್ಯಾನ್ಸ್‌! ವಿಡಿಯೋ ಇಲ್ಲಿ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News