Viral Video: ಮದುವೆ ಸ್ಟೇಜ್ ನಲ್ಲಿ ಸಖತ್ ಡ್ಯಾನ್ಸ್ ಮಾಡಿದ ವಧು, ನೋಡುತ್ತಾ ನಿಂತ ವರ..!

ಮದುವೆ ಸಂಭ್ರಮದಲ್ಲಿ ಫುಲ್ ಜೋಶ್ ನಲ್ಲಿದ್ದ ವಧು ಡ್ಯಾನ್ಸ್ ಮಾಡಿದ್ದಾಳೆ.

Written by - Zee Kannada News Desk | Last Updated : Aug 2, 2021, 06:44 PM IST
  • ಮದುವೆ ಸ್ಟೇಜ್ ಮೇಲೆಯೇ ಸಖತ್ ಡ್ಯಾನ್ಸ್ ಮಾಡಿದ ವಧು
  • ಪತ್ನಿಯ ಡ್ಯಾನ್ಸ್ ಕಂಡು ನಾಚಿನೀರಾದ ಪತಿಯಿಂದಲೂ ಡ್ಯಾನ್ಸ್
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ವಿಡಿಯೋ
Viral Video: ಮದುವೆ ಸ್ಟೇಜ್ ನಲ್ಲಿ ಸಖತ್ ಡ್ಯಾನ್ಸ್ ಮಾಡಿದ ವಧು, ನೋಡುತ್ತಾ ನಿಂತ ವರ..! title=
ಮದುವೆ ಸ್ಟೇಜ್ ಮೇಲೆ ವಧು ಸಖತ್ ಡ್ಯಾನ್ಸ್ ಮಾಡಿದ್ದಾಳೆ

ನವದೆಹಲಿ: ಮದುವೆ ಮನೆಗಳಲ್ಲಿ ನಡೆಯುವ ಫನ್ನಿ ಸನ್ನಿವೇಶಗಳ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಮಾಲೆ ಹಾಕುವುದು, ತಾಳಿ ಕಟ್ಟುವುದು, ಪೂಜಾರಿ ಮಂತ್ರ ಹೇಳುವುದು, ವಧು-ವರರಿಗೆ ಸಂಬಂಧಿಕರು ಮಾಡುವ ಕಿಟಲೆ ಹೀಗೆ ಚಿತ್ರ-ವಿಚಿತ್ರ ಹಾಸ್ಯ ಪ್ರಸಂಗಗಳು ಮದುವೆ ಮನೆ(Indian Wedding)ಯಲ್ಲಿ ನಡೆಯುತ್ತಲೇ ಇರುತ್ತವೆ. ವಧು-ವರರ ಡ್ಯಾನ್ಸ್ ಇಲ್ಲದೆ ಯಾವುದೇ ಮದುವೆ ಪೂರ್ಣಗೊಳ್ಳುವುದೇ ಇಲ್ಲ. ಮದುವೆಯಾದ ಹೊಸ ಹುರುಪಿನಲ್ಲಿ ನೂತನ ದಂಪತಿ ಕುಣಿದು ಕುಪ್ಪಳಿಸುತ್ತಾರೆ. ಸಂಬಂಧಿಗಳು ಕೂಡ ಮನಬಂದಂತೆ ಡ್ಯಾನ್ಸ್(Dance) ಮಾಡಿ ಗಮನ ಸೆಳೆಯುತ್ತಾರೆ.

ಸಣ್ಣಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ಸಖತ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಸಾಮಾನ್ಯವಾಗಿ ಮದುವೆಗಳಲ್ಲಿ ಮದುಮಗ ಫುಲ್ ಜೋಶ್​ನಲ್ಲಿ ಇರುತ್ತಾನೆ. ಮದುವೆಯಾದ ಖುಷಿಗೆ ತನ್ನ ಸ್ನೇಹಿತರ ಜೊತೆಗೆ ಒಂದೆರಡು ಸ್ಟೇಪ್ಸ್ ಹಾಕುತ್ತಾನೆ. ಪತಿಯ ಡ್ಯಾನ್ಸ್ ಕಂಡು ಪತ್ನಿ ನಾಚಿ ನೀರಾಗಿರುತ್ತಾಳೆ. ಆದರೆ ಈ ಮದುವೆಯಲ್ಲಿ ಮಾತ್ರ ಮದುಮಗಳೇ ಫುಲ್ ಜೋಶ್​ನಲ್ಲಿದ್ದಳು. ಸದ್ಯ ಈ ವಿಡಿಯೋ(Viral Video) ಸಖತ್ ಸೌಂಡ್ ಮಾಡುತ್ತಿದೆ.

 
 
 
 

 
 
 
 
 
 
 
 
 
 
 

A post shared by Swati Wedding Photography (@swati.wedding.photography)

ಇದನ್ನೂ ಓದಿ: Corona Third Wave ಆತಂಕದ ನಡುವೆಯೂ ಈ ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಓಪನ್

ಮದುವೆ ಸ್ಟೇಜ್ ಮೇಲೆಯೇ ವಧು ಸಖತ್ ಡ್ಯಾನ್ಸ್ ಮಾಡಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಸ್ನೇಹಿತರು, ಬಂಧು-ಬಳಗದವರ ಸಮ್ಮುಖದಲ್ಲಿ ನಗುಮೊಗದಿಂದ ವಧು-ವರರು ಡ್ಯಾನ್ಸ್(Bride Groom) ಮಾಡಿದ್ದಾರೆ. ಮೊದ ಮೊದಲು ಪತ್ನಿಯ ಡ್ಯಾನ್ಸ್ ಕಂಡು ನಾಚಿ ನೀರಾಗುವ ಪತಿ ಬಳಿಕ ಆಕೆಯ ಜೊತೆ ಸೇರಿ ಭರ್ಜರಿ ಸ್ಟೇಪ್ಸ್ ಹಾಕಿದ್ದಾನೆ. ನಗುನಗುತ್ತಲೇ ನೂತನ ದಂಪತಿಗಳು ‘ದುಲ್ಹ ದುಲ್ಹನ್’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.  

ಇದನ್ನೂ ಓದಿ: Jobs in Paytm: ಕೊರೊನಾ ಕಾಲದಲ್ಲಿ ನೌಕರಿ ಕಳೆದುಕೊಂಡಿದ್ದೀರಾ? Paytm ನಿಂದ 20,000 ಹುದ್ದೆಗಳಿಗಾಗಿ ನೇಮಕಾತಿ

‘swati.wedding.photography’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ವಧುವಿನ ಡ್ಯಾಕ್ಸ್ ನೆಟಿಜನ್ ಗಳು ಫಿದಾ ಆಗಿದ್ದಾರೆ. ಸಾವಿರಾರು ಜನರು ಈ ವಿಡಿಯೋ ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News