Viral Video: ಪ್ರಾಣಿಗಳು ಮನುಷ್ಯರಿಗಿಂತ ವಿಭಿನ್ನ ಪ್ರಪಂಚದಲ್ಲಿ ವಾಸಿಸುತ್ತವೆ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ. ಇನ್ನು ಕಾಡುಪ್ರಾಣಿಗಳಿಂದ ಮನುಷ್ಯರು ಅಂತರ ಕಾಯ್ದುಕೊಳ್ಳುತ್ತಾರೆ. ಅವುಗಳ ಬಳಿ ಹೋಗುವುದೂ ಕೂಡ ಅಪಾಯ ಎಂದು ದೂರವಿರುತ್ತಾರೆ. ಇಂದು ನಾವು ನಿಮಗೆ ಎರಡು ಸರೀಸೃಪಗಳು ಪರಸ್ಪರ ಜಗಳವಾಡುತ್ತಿರುವ ವೀಡಿಯೊವನ್ನು ತೋರಿಸಲಿದ್ದೇವೆ. ಜನರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಜನರಲ್ಲಿ ಭಯ ಹುಟ್ಟಿಸಿದೆ.
ಇದನ್ನೂ ಓದಿ: Girl Shocking Video: ಚಲಿಸುವ ರೈಲಿನಲ್ಲಿ ಹುಡುಗಿಯ 'ಗಂಧಿ ಬಾತ್', ವಿಡಿಯೋ ವೈರಲ್!
ವೀಡಿಯೊದಲ್ಲಿ, ಎರಡೂ ಸರೀಸೃಪಗಳು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಇಲ್ಲಿ ಮಾನಿಟರ್ ಲಿಜರ್ಡ್ ಅಥವಾ ಉಡದ ಬಗ್ಗೆ ಮಾತನಾಡುತ್ತಿದ್ದೇವೆ. ಉಡಗಳ ನಡುವಿನ ಜಗಳವನ್ನು ನೀವು ಎಂದಾದರೂ ಕಂಡಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ.
Learning to manage conflicts🤔
Early morning scene from IIM Kolkata…
( As received in WA) pic.twitter.com/6jXGYkWQyA— Susanta Nanda (@susantananda3) March 1, 2023
ಎರಡು ಸರೀಸೃಪಗಳ ನಡುವಿನ ಭೀಕರ ಕಾಳಗದ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ್ ನಂದಾ ಪೋಸ್ಟ್ ಮಾಡಿದ್ದಾರೆ.
ವೀಡಿಯೊದಲ್ಲಿ, ಐಐಎಂ ಕೋಲ್ಕತ್ತಾ ಕ್ಯಾಂಪಸ್‌ನಲ್ಲಿ ಎರಡು ಸರೀಸೃಪಗಳು ಪರಸ್ಪರ ಕಾದಾಡುತ್ತಿರುವುದನ್ನು ತೋರಿಸಲಾಗಿದೆ.
ಟ್ವಿಟರ್‌ನಲ್ಲಿ ಈ ವಿಡಿಯೋವನ್ನು 8,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವೀಡಿಯೊಗೆ ಇದುವರೆಗೆ 613 ಲೈಕ್‌ಗಳು ಬಂದಿವೆ. ಇನ್ನು ಈ ವಿಡಿಯೋದಲ್ಲಿ ಕಾಣಿಸುತ್ತಿರುವ ಸರೀಸೃಪಗಳು ಮೊಸಳೆಯೇ ಅಥವಾ ಉಡಗಳೇ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಗೊಂದಲಕ್ಕೊಳಗಾಗಿದ್ದರು.
ಒಬ್ಬ ಬಳಕೆದಾರ, " ಮೊಸಳೆ ವಿರುದ್ಧ ಕೊಮೊಡೊ ಡ್ರ್ಯಾಗನ್...ಯಾರು ಗೆದ್ದರು" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, "ಫೆಬ್ರವರಿ ಮುಗಿದಿರಬಹುದು ಆದರೆ ಪ್ರೀತಿ ಇನ್ನೂ ಎಲ್ಲೆಲ್ಲೂ ತೇಲಾಡುತ್ತಿದೆ" ಎಂದು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್’ಗಾಗಿ ಭಾರತಕ್ಕೆ ಬರ್ತಿದ್ದಾರೆ ಈ ಅಮೆರಿಕಾ ಬ್ಯೂಟಿ: ಈಕೆಯ ಅಂದಕ್ಕೆ ಕತ್ರಿನಾ-ಕರೀನಾ ಕೂಡ ಸರಿಸಾಟಿಯಲ್ಲ!
ಈ ಮಧ್ಯೆ, ಐಎಫ್‌ಎಸ್ ನಂದಾ ಕಿಂಗ್ ಕೋಬ್ರಾದ ಭಯಾನಕ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ದೊಡ್ಡ ನಾಗರಹಾವು ನೇರವಾದ ಭಂಗಿಯಲ್ಲಿ ಎದ್ದುನಿಂತಿರುವುದು ಕಂಡುಬರುತ್ತದೆ. ಈ ಭಯಾನಕ ವಿಡಿಯೋ ಎದೆ ಝಲ್ ಎನ್ನುವಂತೆ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.