Viral: ಕುಡಿದ ಅಮಲಿನಲ್ಲಿ ಜೀವಂತ ಹಾವು ನುಂಗಿ ವ್ಯಕ್ತಿ ಸಾವು!

ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಜೀವಂತ ಹಾವನ್ನು ನುಂಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ. 

Last Updated : Sep 13, 2018, 05:46 PM IST
Viral: ಕುಡಿದ ಅಮಲಿನಲ್ಲಿ ಜೀವಂತ ಹಾವು ನುಂಗಿ ವ್ಯಕ್ತಿ ಸಾವು! title=

ಅಮ್ರೋಹ: ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಜೀವಂತ ಹಾವನ್ನು ನುಂಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ. 

ಕುಡಿದ ಅಮಲಿನಲ್ಲಿ ನಡೆದು ಹೋಗುತ್ತಿದ್ದ 40 ವರ್ಷದ ಮಹಿಪಾಲ್ ಸಿಂಗ್ ಎಂಬಾತನಿಗೆ ರಸ್ತೆಯಲ್ಲಿ ಹಾವಿನ ಮರಿಯೊಂದು ಕಂಡಿದೆ. ಅದನ್ನು ಆತ ಮೊದಲು ಎತ್ತಿಕೊಂಡು ಆಟವಾದಿದ್ದಾನೆ. ನಂತರ ಅಲ್ಲಿದ್ದ ಕೆಲವರು ಅದನ್ನು ಕೈಗೆತ್ತಿಕೊಂಡು ಆಟವಾಡಲು ಹೇಳಿ ಪ್ರಚೋದಿಸಿ, ಅದನ್ನು ವೀಡಿಯೋ ಮಾಡಿದ್ದಾರೆ. 

ನಂತರ ಅದನ್ನು ಬಾಯಲ್ಲಿ ಇಟ್ಟುಕೊಳ್ಳುವಂತೆ ಛೇಡಿಸಿ ಪ್ರಚೋದನೆ ನೀಡಿದ ಪರಿಣಾಮ, ಕುಡಿದ ಮತ್ತಿನಲ್ಲಿದ್ದ ಆತ ಅದರಿಂದಾಗುವ ಆಪತ್ತನ್ನು ಅರಿಯದೆ ಬಾಯಿಯ ಬಳಿ ತೆಗದುಕೊಂಡು ಹೋಗಿದ್ದಾನೆ. ಆದರೆ ಹಾವು ಕೈತಪ್ಪಿ ಬಾಯಿಗೆ ಬಿದ್ದಿದೆ. ಅದನ್ನು ನುಂಗಿದ ಆತ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. 

Trending News