ಸೀತಮಾರ್ಹಿ: ಬಿಹಾರದ ಸೀತಮಾರ್ಹಿಯ ಸೋನ್ಬರ್ಸಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಲಾಲ್ಬಂಡಿ ಗಡಿ ಬಳಿ ನೇಪಾಳಿ ಪೊಲೀಸರು ಮತ್ತು ಸ್ಥಳೀಯ ಭಾರತೀಯ ನಾಗರಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ನೇಪಾಳ (Nepal) ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ವಿವಾದಿತ ನಕ್ಷೆ ಅನುಮೋದಿಸಿ ಭಾರತದ ಈ ಪ್ರದೇಶಗಳನ್ನು ತನ್ನ ಪಾಲು ಎಂದ ನೇಪಾಳ
ಅದೇ ಸಮಯದಲ್ಲಿ ಈ ಗುಂಡಿನ ದಾಳಿಯಲ್ಲಿ ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ ನೇಪಾಳದ ಪೊಲೀಸರು ಗಾಯಗೊಂಡವರನ್ನು ಅವರೊಂದಿಗೆ ಕರೆದೊಯ್ದಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಹಸ್ಥ ಗಡಿ ಪ್ರದೇಶದ ಸೇನಾ ತಂಡವೂ ಘಟನಾ ಸ್ಥಳಕ್ಕೆ ತೆರಳಿದೆ.
ಭಾರತ-ನೇಪಾಳಕ್ಕೆ ಹೊಸ ಚೆಕ್ ಪೋಸ್ಟ್!
ಈ ಸಂದರ್ಭದಲ್ಲಿ ಎಸ್ಎಸ್ಬಿಯ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಆದರೆ ಈ ಗುಂಡಿನ ದಾಳಿಯನ್ನು ನೇಪಾಳ ಪೊಲೀಸರು ಏಕೆ ಮಾಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಈ ಸಮಯದಲ್ಲಿ ಬಹಿರಂಗವಾಗಿಲ್ಲ.
ಇಂಡೋ-ನೇಪಾಳ ಗಡಿಯಲ್ಲಿ ಉದ್ವಿಗ್ನ ಸನ್ನಿವೇಶಗಳು ನಿರಂತರವಾಗಿ ನಡೆಯುತ್ತಿವೆ. ನೇಪಾಳದ ಹೊಸ ನಕ್ಷೆಗೆ ಸಂಬಂಧಿಸಿದಂತೆ ಪ್ರಸ್ತುತ ಉಭಯ ದೇಶಗಳ ನಡುವೆ ವಿವಾದವಿದೆ. ಭಾರತದ ಭಾಗವಾಗಿರುವ ಕಲಾಪಾನಿ ಮತ್ತು ಲಿಪುಲೆಕ್ ಪ್ರದೇಶಗಳನ್ನು ನೇಪಾಳದ ಹೊಸ ನಕ್ಷೆಯಲ್ಲಿ ಸೇರಿಸಿದ ನಂತರ, ಉಭಯ ದೇಶಗಳ ಗಡಿ ವಿವಾದದ ಕುರಿತು ಮಾತುಕತೆ ನಡೆಸುವ ಬಗ್ಗೆ ಅನುಮಾನಗಳಿವೆ.
ನೇಪಾಳ: ಮೌಂಟ್ ಎವರೆಸ್ಟ್ನಲ್ಲಿ ಸ್ವಚ್ಛತಾ ಅಭಿಯಾನ!
ಈ ಹೊಸ ನಕ್ಷೆಯಲ್ಲಿ ನೇಪಾಳ ಒಟ್ಟು 395 ಚದರ ಕಿ.ಮೀ ವಿಸ್ತೀರ್ಣವನ್ನು ತೋರಿಸಿದೆ. ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಲಾಪಾನಿ ಹೊರತುಪಡಿಸಿ, ಗುಂಜಿ, ನಭಿ ಮತ್ತು ಕಾಟಿ ಗ್ರಾಮಗಳನ್ನು ಸಹ ನೇಪಾಳ ತನ್ನ ಭೂಪ್ರದೇಶ ಎಂದು ತೋರಿಸಿಕೊಂಡಿದೆ.