Video: ಮುಂಬೈ ಪ್ರವಾಹದಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಿಸಿದ ಸ್ಥಳೀಯರು

ಪ್ರವಾಹದಲ್ಲಿ ಮುಳುಗುತ್ತಿದ್ದ ಕಾರಿನ ಮೇಲೆ ಕುಳಿತಿದ್ದ ಕುಟುಂಬವನ್ನು ಸ್ಥಳೀಯರು ಹಗ್ಗ ನೀಡಿ ರಕ್ಷಿಸಿದ ಅಪರೂಪದ ವೀಡಿಯೋ

Last Updated : Jul 17, 2018, 12:51 PM IST
Video: ಮುಂಬೈ ಪ್ರವಾಹದಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಿಸಿದ ಸ್ಥಳೀಯರು title=

ಮುಂಬೈ: ನವಿ ಮುಂಬೈನ ತಾಲೋಜ ಪ್ರದೇಶದಲ್ಲಿ ಪ್ರವಾಹದಲ್ಲಿ ಮುಳುಗುತ್ತಿದ್ದ ಕಾರಿನ ಮೇಲೆ ಕುಳಿತಿದ್ದ ಕುಟುಂಬವನ್ನು ಸ್ಥಳೀಯರು ಹಗ್ಗ ನೀಡಿ ರಕ್ಷಿಸಿದ ಅಪರೂಪದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

ಈ ವೀಡಿಯೋದಲ್ಲಿ, ಒಂದೇ ಕುಟುಂಬದ ನಾಲ್ವರು ಸದಸ್ಯರು ಸಂಪೂರ್ಣವಾಗಿ ಪ್ರವಾಹದಲ್ಲಿ ಮುಳುಗಿದ್ದ ಕಾರಿನ ಮೇಲೆ ಕುಳಿತು ಸಹಾಯಕ್ಕಾಗಿ ಎದುರುನೋಡುತ್ತಿದ್ದಾರೆ. ಇವರನ್ನು ರಕ್ಷಿಸಲು ಸ್ಥಳಿಯರು ಹಗ್ಗ ನೀಡಿ ಪ್ರಯತ್ನಿಸುತ್ತಿರುವುದು ಚಿತ್ರೀಕರಣವಾಗಿದೆ.

ಎಎನ್ಐ ಸುದ್ದಿ ಸಂಸ್ಥೆ ವರದಿ ಪ್ರಕಾರ, ಮೊದಲು ಮಹಿಳೆಯನ್ನು ರಕ್ಷಿಸಿ ನಂತರ ಉಳಿದ ಪುರುಷರನ್ನು ರಕ್ಷಿಸಲಾಗಿದೆ. 

ಉತ್ತರ ಮತ್ತು ಮಧ್ಯ ಮಹಾರಾಷ್ಟ್ರದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತೀವ್ರ ಮಳೆಯಾದ ಹಿನ್ನೆಲೆಯಲ್ಲಿ ಗಂಗಾಪುರ ಅಣೆಕಟ್ಟೆಯಿಂದ ಗೋದಾವರಿ ನದಿಗೆ ನೀರು ಬಿಡುಗಡೆ ಮಾಡಿದ್ದಾರೆ. ಪರ್ಭಾನಿ, ಅಹಮದಾಬಾದ್, ನಾಸಿಕ್, ಔರಂಗಬಾದ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. 

Trending News