ನವದೆಹಲಿ: ಬುಧವಾರದಂದು ಮಾನ್ಸೂನ್ ಅಧಿವೇಶನ ಪ್ರಾರಂಭವಾದ ನಂತರ ರಾಜ್ಯಸಭಾ ಅಧ್ಯಕ್ಷರಾದ ವೆಂಕಯ್ಯ ನಾಯ್ಡು ಸುಮಾರು 10 ಭಾಷೆಗಳಲ್ಲಿ ಮಾತನಾಡುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದರು.
ಈ ಎಲ್ಲ ವಿವಿಧ 10 ಭಾಷೆಗಳಲ್ಲಿನ ಭಾಷಣವು ಸಂಕ್ಷಿಪ್ತವಾಗಿದ್ದರೂ ಸಹಿತ ಸದನದ ಸದಸ್ಯರಿಗೆ ಹಲವು ಭಾಷೆಗಳಲ್ಲಿ ಮಾತನಾಡುವ ಅವಕಾಶವಿದೆ ಎನ್ನುವುದನ್ನು ಸೂಚಿಸಲು ಕನ್ನಡ ಬಂಗಾಳಿ, ಗುಜರಾತಿ, ಮಲಯಾಳಂ,ಮರಾಠಿ, ನೇಪಾಳಿ,ಒರಿಯಾ, ಪಂಜಾಬಿ,ತೆಲುಗು, ತಮಿಳು ಭಾಷೆಗಳಲ್ಲಿ ಸಾಂಕೇತಿಕವಾಗಿ ಮಾತನಾಡಿದರು.
ಈ ಮಾನ್ಸೂನ್ ಅಧಿವೆಶನ್ ಅಗಸ್ಟ್ 10 ರಂದು ಕೊನೆಗೊಳ್ಳಲಿದ್ದು ಈ ವೇಳೆ ಅದು ಒಟ್ಟು 18 ಬಾರಿ ಸೇರಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಪ್ರತಿಪಕ್ಷಗಳು ಅವಿಶ್ವಾಸ ಮತಯಾಚನೆ ಮಂಡಿಸುತ್ತಿರುವುದರಿಂದ ಸದನ ಹಲವು ನಾಟಕೀಯ ಬೆಳವಣಿಗೆಗೆ ಕಾರಣವಾಗಲಿದೆ ಎಂದು ತಿಳಿದುಬಂದಿದೆ.
ಒಂದು ಕಡೆ ಪ್ರತಿಪಕ್ಷಗಳು ಅವಿಶ್ವಾಸ ಚಾಟಿಯೊಂದಿಗೆ ಸಿದ್ದರಾಗಿದ್ದಾರೆ,ಇನ್ನೊಂದೆಡೆ ಮೋದಿ ಸರ್ಕಾರವು ಈ ಬಾರಿ ಹಲವಾರು ಮಹತ್ವದ ಬಿಲ್ ಗಳನ್ನೂ ಜಾರಿಗೆ ತರಲು ಪ್ರಯತ್ನಿಸುತ್ತಿದೆ.ಇದಕ್ಕಾಗಿ ಪ್ರಧಾನಿ ಮೋದಿ ಮಂಗಳವಾರದಂದು ಸರ್ವ ಪಕ್ಷಗಳ ಸಭೆಯನ್ನು ಕರೆದು ಅಧಿವೇಶನ ಸುಗಮವಾಗಿ ಸಾಗಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.