ಪ್ರಯಾಗ್ರಾಜ್: ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಕುಂಭ ಮೇಳಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ಯಾತ್ರಾರ್ಥಿಗಳು ಬಂದು ಪಾಲ್ಗೊಂಡಿದ್ದರು. ಅಂತಹ ವಿಶ್ವವಿಖ್ಯಾತವಾಗಿ ನಡೆದ ಕುಂಭಮೇಳ ಪೂರ್ಣಗೊಂಡ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಮತ್ತೊಂದು ದಾಖಲೆ ನಿರ್ಮಿಸಿದೆ.
ಪ್ರಯಾಗ್ ರಾಜ್ ಮೇಳ ಪ್ರಾಧಿಕಾರ ಹಾಗೂ ಉತ್ತರ ಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಕುಂಭಮೇಳದಲ್ಲಿ ಪಾಲ್ಗೊಂಡ ಉತ್ತರಪ್ರದೇಶ ಸಾರಿಗೆಯ 500 ಬಸ್ ಗಳ ಪೆರೇಡ್ ನಡೆಸಿ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಸುಮಾರು 3.2 ಕಿಲೋಮೀಟರ್ನಷ್ಟು ಉದ್ದ, ರಸ್ತೆ ಪಕ್ಕದಲ್ಲಿ ಸಾಲಾಗಿ ಬಸ್ ಗಳನ್ನು ನಿಲ್ಲಿಸುವ ಮೂಲಕ ಗಿನ್ನಿಸ್ ರೆಕಾರ್ಡ್ ನಿರ್ಮಿಸಿದೆ.
Prayagraj Mela Authority, Govt of Uttar Pradesh makes Guinness World Record for the 'largest parade of buses' today. The 500 buses, with the Kumbh logo, covered a stretch of 3.2 km in the district. pic.twitter.com/qmbhD8cEaT
— ANI UP (@ANINewsUP) February 28, 2019
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಸಾರಿಗೆ ಅಧಿಕಾರಿಗಳು, ಈ ಹಿಂದೆ ಅಬುದಾಬಿಯಲ್ಲಿ 390 ಬಸ್ಗಳನ್ನು ನಿಲ್ಲಿಸುವ ಮೂಲಕ ನಿರ್ಮಿಸಿದ್ದ ಗಿನ್ನಿಸ್ ದಾಖಲೆಯನ್ನು ಹಿಮ್ಮೆಟ್ಟಿ, ಕುಂಭಮೇಳದ ಲೋಗೋ ಹೊಂದಿದ್ದ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ(ಯುಪಿಎಸ್ಆರ್ಟಿಸಿ)ದ ಬಸ್ಸುಗಳನ್ನು NH-19ನ ಸಾಝನ್ ಟೋಲ್ ಮತ್ತು ನವಾಬ್ಗಂಜ್ ಟೋಲ್ ಪ್ಲ್ಯಾಝಾ ನಡುವೆ 500 ಬಸ್ಗಳ ಪೆರೇಡ್ ಅನ್ನು ನಡೆಸುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.