ಈ ವೈಶಿಷ್ಟ್ಯಗಳನ್ನು ಬಳಸಿ ನಿಮ್ಮ WhatsApp ಖಾತೆ ಭದ್ರಗೊಳಿಸಿ

ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ಅನ್ನು ವಿಶ್ವಾದ್ಯಂತ ಸುಮಾರು ಎರಡು ಬಿಲಿಯನ್ ಗೂ ಅಧಿಕ  ಜನರು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಇಂದು ಇದು ಪ್ರಪಂಚದ ಅತ್ಯಂತ ಪಾಪ್ಯುಲರ್ ಆಪ್ ಗಳಲ್ಲಿ ಒಂದಾಗಿದೆ.

Last Updated : Feb 18, 2020, 06:10 PM IST
ಈ ವೈಶಿಷ್ಟ್ಯಗಳನ್ನು ಬಳಸಿ ನಿಮ್ಮ WhatsApp ಖಾತೆ ಭದ್ರಗೊಳಿಸಿ title=

ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ಅನ್ನು ವಿಶ್ವಾದ್ಯಂತ ಸುಮಾರು ಎರಡು ಬಿಲಿಯನ್ ಗೂ ಅಧಿಕ  ಜನರು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಇಂದು ಇದು ಪ್ರಪಂಚದ ಅತ್ಯಂತ ಪಾಪ್ಯುಲರ್ ಆಪ್ ಗಳಲ್ಲಿ ಒಂದಾಗಿದೆ. ಇತ್ತೀಚೆಗಷ್ಟೇ ವಾಟ್ಸ್ ಆಪ್ ತನ್ನ ಸೆಕ್ಯೂರಿಟಿ ವೈಶಿಷ್ಟ್ಯಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಇದರಿಂದ ಬಳಕೆದಾರರ ಮಾಹಿತಿ ಇನ್ನಷ್ಟು ಸುಭದ್ರವಾಗಿದೆ. ನೀವು ಕೂಡ ಈ ವೈಶಿಷ್ಟ್ಯಗಳನ್ನು ಬಳಸಿ ನಿಮ್ಮ ಡೇಟಾ ಅನ್ನು ಸುರಕ್ಷಿತವಾಗಿ ಇರಿಸಬಹುದು.

ಟೂ ಸ್ಟೆಪ್ ವೆರಿಫಿಕೇಶನ್
ದತ್ತಾಂಶ ಸುರಕ್ಷತೆಯ ದೃಷ್ಟಿಯಿಂದ ಇದು ವಾಟ್ಸ್ ಆಪ್ ನ ಅತ್ಯಂತ ದೊಡ್ಡ ವೈಶಿಷ್ಟ್ಯವಾಗಿದೆ. ಈ ವೈಶಿಷ್ಟ್ಯವನ್ನು ಸಕ್ರೀಯಗೊಳಿಸಲು ನಿಮ್ಮ ವಾಟ್ಸ್ ಆಪ್ ನ ಸೆಟ್ಟಿಂಗ್ಸ್ ಗೆ ಮೊದಲು ಭೇಟಿ ನೀಡಿ. ಅಲ್ಲಿ ನಿಮಗೆ ಅಕೌಂಟ್ ಆಪ್ಶನ್ ಸಿಗಲಿದೆ. ಬಳಿಕ ಅಲ್ಲಿ ನೀವು ನಿಮ್ಮ 6 ಅಂಕಿಗಳ ಪಾಸ್ ಕೋಡ್ ತಯಾರಿಸಬೇಕು. ಯಾವುದೇ ಸಂದರ್ಭದಲ್ಲಿ ನೀವು ನಿಮ್ಮ ಮೊಬೈಲ್ ಅನ್ನು ರಿಸೆಟ್ ಮಾಡಿದಾಗ ಎರಡನೇ ಬಾರಿಗೆ ಲಾಗಿನ್ ಆಗಲು ನಿಮಗೆ ಈ ಆರು ಸಂಖ್ಯೆಗಳ ಪಾಸ್ ಕೋಡ್ ನಮೂದಿಸುವುದು ಅನಿವಾರ್ಯವಾಗಲಿದೆ.

ಫೇಸ್ ಐಡಿ ಲಾಕ್/ ಟಚ್ ಐಡಿ ಉಪಯೋಗಿಸಿ
ಇಂದು ಬಹುತೇಕ ಸ್ಮಾರ್ಟ್ ಫೋನ್ ಗಳಲ್ಲಿ ಫೇಸ್ ಐಡಿ ಲಾಕ್/ಟಚ್ ಐಡಿ ಲಾಕ್ ವೈಶಿಷ್ಟ್ಯಗಳನ್ನು ಬಳಸಲಾಗುತ್ತದೆ. ನೀವು ಈ ವೈಶಿಷ್ಟ್ಯದ ಬಳಕೆಯನ್ನು ವಾಟ್ಸ್ ಆಪ್ ಲಾಕ್ ಮಾಡಲೂ ಸಹ ಬಳಸಬಹುದಾಗಿದೆ. ಈ ವೈಶಿಷ್ಟ್ಯದ ಸಹಾಯದಿಂದ ನೀವು ಎಲ್ಲಿಯವರೆಗೆ ಬಯಸುವುದಿಲ್ಲವೂ ಅಲ್ಲಿಯವರೆಗೆ ಇತರರನ್ನು ನಿಮ್ಮ ಖಾತೆಯಿಂದ ದೂರವಿಡಬಹುದು. ಈ ವೈಶಿಷ್ಟ್ಯ ಸಕ್ರೀಯಗೊಳಿಸಲು ನಿಮ್ಮ ವಾಟ್ಸ್ ಆಪ್ ಖಾತೆಯ ಸೆಟ್ಟಿಂಗ್ಸ್ ವಿಭಾಗದಲ್ಲಿರುವ ಅಕೌಂಟ್ಸ್ ಆಪ್ಶನ್ ಕ್ಲಿಕ್ಕಿಸಿ. ಬಳಿಕ ಪ್ರೈವೆಸಿ ಆಪ್ಸನ್ ಮೇಲೆ ಕ್ಲಿಕ್ಕಿಸಿ. ಅಲ್ಲಿ ನೀವು ಈ ಆಯ್ಕೆಯನ್ನು ಆಯ್ದುಕೊಳ್ಳಬಹುದು.

ಪ್ರೊಫೈಲ್ ಫೋಟೋ ಹಾಗೂ ಲಾಸ್ಟ್ ಸೀನ್ ಗಳನ್ನು ಹೀಗೆ ಮರೆಮಾಚಿ
ನೀವು ನಿಮ್ಮ ವಾಟ್ಸ್ ಆಪ್ ನಲ್ಲಿ ಪ್ರೊಫೈಲ್ ಫೋಟೋ ಹಾಗೂ ಲಾಸ್ಟ್ ಸೀನ್ ಸ್ಟೇಟಸ್ ಅನ್ನು ಸಹ ಮರೆಮಾಚಬಹುದು. ಈ ವೈಶಿಷ್ಟ್ಯವನ್ನು ಬಳಸಿ ನೀವು ಎಲ್ಲಿಯವರೆಗೆ ಬಯಸುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಪ್ರೊಫೈಲ್ ಫೋಟೋ ಹಾಗೂ ಸ್ಟೇಟಸ್ ಗಳನ್ನು ಇತರರು ನೋಡದಂತೆ ತಡೆಯಬಹುದು. ಜೊತೆಗೆ ಕೊನೆಯ ಬಾರಿಗೆ ನೀವು ನಿಮ್ಮ ಖಾತೆಯಲ್ಲಿ ಯಾವಾಗ ಆಕ್ಟಿವ್ ಆಗಿದ್ದೀರಿ ಎಂಬುದನ್ನೂ ಸಹ ಮರೆಮಾಚಬಹುದು. ಈ ವೈಶಿಷ್ಟ್ಯ ಅಳವಡಿಸಲು ಸೆಟ್ಟಿಂಗ್ಸ್ ವಿಭಾಗದ ಅಕೌಂಟ್ಸ್ ಮೇಲೆ ಕ್ಲಿಕ್ಕಿಸಿ, ಅಲ್ಲಿರುವ ಪ್ರೈವೆಸಿ ಆಪ್ಶನ್ ಆಯ್ಕೆ ಮಾಡಿ. ಬಳಿಕ ಅಲ್ಲಿ ನಿಮಗೆ ಲಾಸ್ಟ್ ಸೀನ್ ಆಪ್ಶನ್ ಸಿಗಲಿದೆ. ಲಾಸ್ಟ್ ಸೀನ್ ಆಪ್ಶನ್ ನಲ್ಲಿ 'ನೋ ಬಡಿ' ಗುಂಡಿಯನ್ನು ಕ್ಲಿಕ್ಕಿಸಿ.

ನಿಮ್ಮ ವಾಟ್ಸ್ ಆಪ್ ಅನ್ನು ಯಾವಾಗಲೂ ಅಪ್ಡೇಟ್ ಆಗಿ ಇರಿಸಿ
ಈ ಎಲ್ಲ ಆಪ್ಶನ್ ಗಳ ಹೊರತಾಗಿ ನೀವು ನಿಮ್ಮ ವಾಟ್ಸ್ ಆಪ್ ಖಾತೆಯನ್ನು ಯಾವಾಗಲೂ ಕೂಡ ಅಪ್ಡೇಟ್ ಆಗಿ ಇರಿಸಬಹುದು. ಹೀಗೆ ಮಾಡುವುದರಿಂದ ವಾಟ್ಸ್ ಆಪ್ ನ ಎಲ್ಲ ಲೇಟೆಸ್ಟ್ ಅಪ್ಡೇಟ್ ಗಳು ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್ ಆಗಲಿವೆ. ಇಲ್ಲಿ ನೀವು ಅಟೋಮ್ಯಾಟಿಕ್ ಅಪ್ಡೇಟ್ ಆಪ್ಶನ್ ಅನ್ನು ಸಹ ಆನ್ ಇಡಬಹುದು.

Trending News