ಈ ATM ಕಾರ್ಡ್ ಧಾರಕರಿಗೆ ಸಿಗಲಿದೆ ಜಬರ್ದಸ್ತ್ ಕ್ಯಾಶ್ ಬ್ಯಾಕ್

ಒಂದು ವೇಳೆ ನೀವೂ ಕೂಡ ರೂಪೇ ಕಾರ್ಡ್ ಧಾರಕರಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ರೂಪೇ ತನ್ನ ಅಂತಾರಾಷ್ಟ್ರೀಯ ಕಾರ್ಡ್ ಧಾರಕರಿಗೆ ಶೇ.40 ಕ್ಯಾಷಬ್ಯಾಕ್ ನೀಡುವುದಾಗಿ ಘೋಷಣೆ ಮಾಡಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ.

Last Updated : Jan 4, 2020, 04:56 PM IST
ಈ  ATM ಕಾರ್ಡ್ ಧಾರಕರಿಗೆ ಸಿಗಲಿದೆ ಜಬರ್ದಸ್ತ್ ಕ್ಯಾಶ್ ಬ್ಯಾಕ್ title=

ನವದೆಹಲಿ:ಒಂದು ವೇಳೆ ನೀವೂ ಕೂಡ ರೂಪೇ ಕಾರ್ಡ್ ಧಾರಕರಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ರೂಪೇ ತನ್ನ ಅಂತಾರಾಷ್ಟ್ರೀಯ ಕಾರ್ಡ್ ಧಾರಕರಿಗೆ ಶೇ.40 ಕ್ಯಾಷಬ್ಯಾಕ್ ನೀಡುವುದಾಗಿ ಘೋಷಣೆ ಮಾಡಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ.

16,000 ರೂ.ಗಳ ವರೆಗೆ ಕ್ಯಾಶ್ ಬ್ಯಾಕ್ ಸಿಗಲಿದೆ
ಸಂಯುಕ್ತ ಅರಬ್ ಎಮಿರೇಟ್ಸ್, ಸಿಂಗಾಪುರ್, ಶ್ರೀಲಂಕಾ, ಬ್ರಿಟನ್, ಅಮೇರಿಕ, ಸ್ಪೇನ್, ಸ್ವಿಟ್ಜರ್ಲ್ಯಾಂಡ್ ಹಾಗೂ ಥೈಲ್ಯಾಂಡ್ ಯಾತ್ರೆ ನಡೆಸುವ ಭಾರತೀಯರ ಇಂಟರ್ನ್ಯಾಷನಲ್ ಕಾರ್ಡ್ ಆಕ್ಟಿವ್ ಮಾಡಿದ ಬಳಿಕ ಅವರಿಗೆ ಮಾಸಿಕ ರೂ.16,000 ರೂ.ಗಳಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ ಎಂದು NPCI ಹೇಳಿದೆ.

ಕೇವಲ ಆಯ್ದ ದೇಶಗಳ ಗ್ರಾಹಕರಿಗೆ ಮಾತ್ರ ಈ ಅವಕಾಶ
ಪ್ರಪಂಚದ ಕೆಲ ಆಯ್ದ ದೇಶಗಳ ಗ್ರಾಹಕರಿಗೆ ಮಾತ್ರ ಈ ಅವಕಾಶ ಸಿಗಲಿದೆ. ಒಂದು ವೇಳೆ ನೀವೂ ಕೂಡ ಈ ಕಾರ್ಡ್ ಹೊಂದಿದ್ದರೆ ಅದನ್ನು ಶೀಘ್ರವೇ ಆಕ್ಟಿವ್ ಗೊಳಿಸಿ. ಈ ಕಾರ್ಡ್ ಆಕ್ಟಿವ್ ಗೊಳಿಸಿದ ಬಳಿಕ ನಿಮಗೆ ತಿಂಗಳಿಗೆ ರೂ.16,000 ಕ್ಯಾಶ್ ಬ್ಯಾಕ್ ದೊರಯಲಿದೆ.

1000 ರೂ.ಗಳ ವ್ಯವಹಾರ ನಡೆಸುವುದು ಕಡ್ಡಾಯ
ಈ ಆಫರ್ ಪಡೆಯಲು ಗ್ರಾಹಕರು ತಿಂಗಳಿಗೆ ನಾಲ್ಕು ಬಾರಿ ರೂಪೇ ಇಂಟರ್ನ್ಯಾಷನಲ್ ಕಾರ್ಡ್ ಬಳಕೆ ಮಾಡಬೇಕು. ಆದರೆ, ಕ್ಯಾಶ್ ಬ್ಯಾಕ್ ಲಾಭ ಪಡೆಯಲು ಗ್ರಾಹಕರು ಮಿನಿಮಮ್ 1000 ರೂ.ಗಳ ವ್ಯವಹಾರ ನಡೆಸಬೇಕು. ಪ್ರತಿ ವ್ಯವಹಾರಕ್ಕೆ ಗರಿಷ್ಠ ರೂ.4000 ಕ್ಯಾಶ್ ಬ್ಯಾಕ್ ಬರಲಿದೆ.

ಹೀಗೆ ಸಿಗಲಿದೆ ಕ್ಯಾಶ್ ಬ್ಯಾಕ್
ರೂಪೇ ಇಂಟರ್ನ್ಯಾಷನಲ್ ಕಾರ್ಡ್, JCB, ಡಿಸ್ಕವರ್ ಹಾಗೂ ಡೈನರ್ಸ್ ಕ್ಲಬ್ ಸೇರಿದಂತೆ ಇತರೆ ಕೆಲವು ಕಾರ್ಡ್ ಬಳಸುವ ಗ್ರಾಹಕರಿಗೆ ರೂಪೇ ಟ್ರಾವೆಲ್ ಟೇಲ್ಸ್ ನಿಯಮದ ಅಡಿ ಅಧಿಕ ಕ್ಯಾಶ್ ಬ್ಯಾಕ್ ಸಿಗಲಿದೆ.

ಕಾರ್ಡ್ ಆಕ್ಟಿವ್ ಮಾಡಲು ಇಲ್ಲಿಗೆ ಭೇಟಿ ನೀಡಿ
ವಿದೇಶ ಯಾತ್ರೆ ಕೈಗೊಳ್ಳುವ ಭಾರತೀಯ ಪ್ರವಾಸಿಗರು ಈ ಕಾರ್ಡ್ ನ ಲಾಭ ಪಡೆಯಬಹುದಾಗಿದೆ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ಸಂಬಂಧಿತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಈ ಕಾರ್ಡನ್ನು ಆಕ್ಟಿವ್ ಮಾಡಿಸಬಹುದು.

Trending News