ಯುಪಿಎಸ್ಸಿ ಫಲಿತಾಂಶ ಪ್ರಕಟ: ಹೈದರಾಬಾದಿನ ಅನುದೀಪ್ ದುರಿಶೆಟ್ಟಿ ದೇಶಕ್ಕೆ ಪ್ರಥಮ

    

Last Updated : Apr 27, 2018, 10:00 PM IST
ಯುಪಿಎಸ್ಸಿ ಫಲಿತಾಂಶ ಪ್ರಕಟ: ಹೈದರಾಬಾದಿನ ಅನುದೀಪ್ ದುರಿಶೆಟ್ಟಿ ದೇಶಕ್ಕೆ ಪ್ರಥಮ   title=

ನವದೆಹಲಿ: ನಾಗರಿಕ ಸೇವಾ ಪರೀಕ್ಷೆ  2017 ರ ಅಂತಿಮ ಫಲಿತಾಂಶವನ್ನು ಕೇಂದ್ರ ಲೋಕ ಸೇವಾ ಆಯೋಗ   ಶುಕ್ರವಾರ ಸಂಜೆ ಬಿಡುಗಡೆ ಮಾಡಿದೆ.

ಈ ದೇಶದ ಪ್ರತಿಷ್ಟಿತ ಪರೀಕ್ಷೆಯಲ್ಲಿ ಹೈದರಾಬಾದಿನ ಅನುದೀಪ್ ದುರಿಶೆಟ್ಟಿ ನಾಗರಿಕ ಸೇವಾಪರೀಕ್ಷೆ 2017 ರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅನುಕುಮಾರಿ, ಸಚಿನ್ ಗುಪ್ತಾ ಕ್ರಮವಾಗಿ ಎರಡು ಮತ್ತು  ಮೂರನೇ ಸ್ಥಾನದಲ್ಲಿದ್ದಾರೆ.ವಿವಿಧ ಸೇವೆಗಳಿಗೆ ನೇಮಕಾತಿಗಾಗಿ ಒಟ್ಟು 990 ಅಭ್ಯರ್ಥಿಗಳು (750 ಪುರುಷರು ಮತ್ತು 240 ಮಹಿಳೆಯರು) ಈ ಪ್ರತಿಷ್ಟಿತ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದಾರೆ.

2017 ರ ಅಕ್ಟೋಬರ್-ನವೆಂಬರ್ ನಲ್ಲಿ ಕೇಂದ್ರ ಲೋಕಸೇವಾ ಆಯೋಗವು ನಡೆಸಿದ ಲಿಖಿತ ಪರೀಕ್ಷೆಯನ್ನು ಮತ್ತು 2018 ರ ಫೆಬ್ರುವರಿ-ಏಪ್ರಿಲ್ನಲ್ಲಿ ಸಂದರ್ಶನ ವನ್ನು ನಡೆಸಿತ್ತು ಈಗ ಇದರ  ಆಧಾರದ ಮೇಲೆ, 990 ಅಭ್ಯರ್ಥಿಗಳಿಗೆ ಭಾರತೀಯ ಆಡಳಿತಾತ್ಮಕ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳು, ಗುಂಪು 'ಎ' ಮತ್ತು ಗುಂಪು 'ಬಿ'. ಹುದ್ದೆ ಗಳನ್ನು ನೀಡಲಾಗುವುದು

Trending News