ಉತ್ತರಪ್ರದೇಶ: ಸಿಎಂ, ಸಚಿವರ ಆದಾಯ ತೆರಿಗೆ ಪಾವತಿಸದಿರಲು ಸರ್ಕಾರ ನಿರ್ಧಾರ!

ಉತ್ತರಪ್ರದೇಶದ ಸಚಿವರ ಸಂಬಳ ಮತ್ತು ವಿವಿಧ ಕಾಯ್ದೆ -1981ರ ಅಡಿಯಲ್ಲಿ ಎಲ್ಲ ಸಚಿವರ ಆದಾಯ ತೆರಿಗೆಯನ್ನು ರಾಜ್ಯ ಸರ್ಕಾರದ ನಿಧಿಯಿಂದ ಈವರೆಗೆ ಪಾವತಿಸಲಾಗುತ್ತಿತ್ತು. ಆದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯಂತೆ ಈಗ ಎಲ್ಲ ಸಚಿವರು ತಮ್ಮ ಆದಾಯ ತೆರಿಗೆಯನ್ನು ತಾವೇ ಪಾವತಿಸಲು ನಿರ್ಧರಿಸಲಾಗಿದೆ. 

Last Updated : Sep 14, 2019, 09:01 AM IST
ಉತ್ತರಪ್ರದೇಶ: ಸಿಎಂ, ಸಚಿವರ ಆದಾಯ ತೆರಿಗೆ ಪಾವತಿಸದಿರಲು ಸರ್ಕಾರ ನಿರ್ಧಾರ! title=

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಸೇರಿದಂತೆ ಎಲ್ಲಾ ಸಚಿವರು ಇನ್ಮುಂದೆ ತಮ್ಮ ಆದಾಯ ತೆರಿಗೆಯನ್ನು ತಾವೇ ಪಾವತಿಸಲಿದ್ದಾರೆ. ಈ ಬಗ್ಗೆ ಉತ್ತರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಈ ಮಾಹಿತಿ ನೀಡಿದ್ದಾರೆ. 

ಉತ್ತರಪ್ರದೇಶದ ಸಚಿವರ ಸಂಬಳ ಮತ್ತು ವಿವಿಧ ಕಾಯ್ದೆ -1981ರ ಅಡಿಯಲ್ಲಿ ಎಲ್ಲ ಸಚಿವರ ಆದಾಯ ತೆರಿಗೆಯನ್ನು ರಾಜ್ಯ ಸರ್ಕಾರದ ನಿಧಿಯಿಂದ ಈವರೆಗೆ ಪಾವತಿಸಲಾಗುತ್ತಿತ್ತು. ಆದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯಂತೆ ಈಗ ಎಲ್ಲ ಸಚಿವರು ತಮ್ಮ ಆದಾಯ ತೆರಿಗೆಯನ್ನು ತಾವೇ ಪಾವತಿಸಲು ನಿರ್ಧರಿಸಲಾಗಿದೆ. ಹೀಗಾಗಿ ಕಾಯಿದೆಯ ಈ ನಿಬಂಧನೆಯನ್ನು ರದ್ದುಗೊಳಿಸಲು ಸಿಎಂ ನಿರ್ಧರಿಸಿರುವುದಾಗಿ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಸುಮಾರು ನಾಲ್ಕು ದಶಕಗಳಷ್ಟು ಹಳೆಯದಾದ ನಿಯಮದಡಿಯಲ್ಲಿ ಮಂತ್ರಿಗಳ ಆದಾಯ ತೆರಿಗೆಯನ್ನು ಸರ್ಕಾರದ ಖಜಾನೆಯಿಂದಲೇ ಈವರೆಗೆ ಪಾವತಿಸಲಾಗುತ್ತಿತ್ತು. ಆದರೀಗ ಸಿಎಂ ಯೋಗಿಆದಿತ್ಯನಾಥ್ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಾರೆ.
 

Trending News