ಭಾರೀ ಬಹುಮತ ನೀಡಿ ಗೆಲ್ಲಿಸಿರುವ ಯುಪಿ ಜನತೆಗೆ ಬಿಜೆಪಿ 'ರಿಟರ್ನ್ ಗಿಫ್ಟ್'..!

ಉತ್ತರ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯಾದ ತಕ್ಷಣ ಸಾರ್ವಜನಿಕರಿಗೆ ರಿಟರ್ನ್ ಗಿಫ್ಟ್ ಸಿಗಲಿದೆ. ಇದಕ್ಕಾಗಿ ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಹೊಸ ಸರ್ಕಾರ ಜಾರಿಗೆ ಬಂದ ತಕ್ಷಣ ಬಡವರ ಪಿಂಚಣಿ ಹೆಚ್ಚಿಸಲಾಗುವುದು. 

Written by - Ranjitha R K | Last Updated : Mar 17, 2022, 09:04 AM IST
  • ಬಿಜೆಪಿ ಸರಕಾರ ಬಡವರ ಪಿಂಚಣಿ ಹೆಚ್ಚಿಸಲಿದೆ
  • ಪ್ರತಿ ವರ್ಷ 18 ಸಾವಿರ ಕೋಟಿ ಖರ್ಚು ಮಾಡಲಾಗುವುದು
  • ಸಂಕಲ್ಪ ಪತ್ರದ ಭರವಸೆಗಳನ್ನು ಈಡೇರಿಸಲು ಒತ್ತು
ಭಾರೀ ಬಹುಮತ ನೀಡಿ ಗೆಲ್ಲಿಸಿರುವ ಯುಪಿ ಜನತೆಗೆ ಬಿಜೆಪಿ 'ರಿಟರ್ನ್ ಗಿಫ್ಟ್'..!   title=
ಬಿಜೆಪಿ ಸರಕಾರ ಬಡವರ ಪಿಂಚಣಿ ಹೆಚ್ಚಿಸಲಿದೆ (file photo)

ಲಖನೌ: ಭಾರೀ ಬಹುಮತ ನೀಡಿರುವ ಉತ್ತರ ಪ್ರದೇಶದ ಜನತೆಗೆ ರಿಟರ್ನ್ ಗಿಫ್ಟ್ ನೀಡಲು ಬಿಜೆಪಿ (BJP)ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ತಕ್ಷಣ ಬಡವರ ಪಿಂಚಣಿ (Pension) ಹೆಚ್ಚಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಇದರಲ್ಲಿ ಸುಮಾರು ಒಂದು ಕೋಟಿ ವೃದ್ಧಾಪ್ಯ, ನಿರ್ಗತಿಕ ಮಹಿಳೆಯರು ಮತ್ತು ದಿವ್ಯಾಂಗ ಪಿಂಚಣಿ ಫಲಾನುಭವಿಗಳು ಸೇರಿದ್ದಾರೆ. ಸರಕಾರ ಅವರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಬದಲಾಗಿ 1500 ರೂಪಾಯಿ ಪಿಂಚಣಿ ನೀಡಲಿದೆ. ಇದಕ್ಕಾಗಿ ಸರಕಾರ ಪ್ರತಿ ವರ್ಷ ಸುಮಾರು 18 ಸಾವಿರ ಕೋಟಿ ರೂ. ಖರ್ಚು ಮಾಡಲಿದೆ. 

ಬಡ ಹುಡುಗಿಯರ ಆರೈಕೆ :
ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹಕ್ಕೆ ಖರ್ಚು ಮಾಡುವ ಮೊತ್ತವನ್ನೂ ಸರ್ಕಾರ ಹೆಚ್ಚಿಸಲಿದೆ. ಈ ಮೊತ್ತವನ್ನು  51 ಸಾವಿರದ ಬದಲು ಒಂದು ಲಕ್ಷ ರೂಪಾಯಿಗೆ ಏರಿಸಲಾಗುವುದು. ಉತ್ತರ ಪ್ರದೇಶದಲ್ಲಿ ಸರ್ಕಾರ (UP Government) ರಚನೆಯಾದರೆ ವೃದ್ಧಾಪ್ಯ, ಅಂಗವಿಕಲ ಮತ್ತು ನಿರ್ಗತಿಕ ಮಹಿಳೆಯರ ಪಿಂಚಣಿಯನ್ನು 1500 ರೂ.ಗೆ ಹೆಚ್ಚಿಸುವುದಾಗಿ ಬಿಜೆಪಿ (BJP) ತನ್ನ ಸಂಕಲ್ಪ ಪತ್ರದಲ್ಲಿ ಭರವಸೆ ನೀಡಿದೆ. ರಾಜ್ಯದಲ್ಲಿ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು, ಯೋಗಿ ಆದಿತ್ಯನಾಥ್ (Yogi Aadityanath) ಸರ್ಕಾರವು ಈ  ಪಿಂಚಣಿ ಮೊತ್ತವನ್ನು 500 ರೂ.ನಿಂದ 1000 ರೂ.ಗೆ ಹೆಚ್ಚಿಸಿತ್ತು. ಈಗ ಹೊಸ ಸರ್ಕಾರ ರಚನೆಯಾದ ನಂತರ ಮತ್ತೆ ಪಿಂಚಣಿ ಮೊತ್ತ ಏರಿಕೆಯಾಗಲಿದೆ. 

ಇದನ್ನೂ ಓದಿ  :  Corona ನಾಲ್ಕನೇ ಅಲೆಯ ಆತಂಕ! ತುರ್ತು ಸಭೆ ಕರೆದ ಆರೋಗ್ಯ ಸಚಿವಾಲಯ ಹೇಳಿದ್ದೇನು?

ಒಂದು ಕೋಟಿ ಜನರಿಗೆ ಸಿಗಲಿದೆ ಲಾಭ : 
ಸರ್ಕಾರದ ಈ ನಿರ್ಧಾರದಿಂದ ಸುಮಾರು ಒಂದು ಕೋಟಿ ಫಲಾನುಭವಿಗಳು ಪ್ರಯೋಜನ ಪಡೆಯಲಿದ್ದಾರೆ. ಇವರಲ್ಲಿ 56 ಸಾವಿರ ವೃದ್ಧರು, 11 ಲಕ್ಷ ಅಂಗವಿಕಲರು, 31 ಲಕ್ಷಕ್ಕೂ ಹೆಚ್ಚು ನಿರ್ಗತಿಕ ಮಹಿಳೆಯರು ಪಿಂಚಣಿ (Pension) ಫಲಾನುಭವಿಗಳಾಗಿದ್ದಾರೆ. 

200ಕ್ಕೂ ಹೆಚ್ಚು ವಿವಿಐಪಿಗಳ ಪಟ್ಟಿ ಸಿದ್ಧವಾಗಿದೆ :
ಮತ್ತೊಂದೆಡೆ ಹೋಳಿ (Holi 2022) ನಂತರ ನಡೆಯಲಿರುವ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಇಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ 45 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ, 200ಕ್ಕೂ ಹೆಚ್ಚು ವಿವಿಐಪಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರಮಾಣ ವಚನ ಸಮಾರಂಭಕ್ಕೆ ಪ್ರತಿಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗುವುದು. ಸೋನಿಯಾ ಗಾಂಧಿ (Sonia Gandhi), ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ (Rahul Gandhi), ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಮಾಯಾವತಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಲಾಗುವುದು ಎನ್ನಲಾಗಿದೆ.   

ಇದನ್ನೂ ಓದಿ  :   'ಆಟ ಇನ್ನೂ ಮುಗಿದಿಲ್ಲ' ಎಂದು ಮಮತಾ ಬಿಜೆಪಿಗೆ ಹೇಳಿದ್ದೇಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News