ಉತ್ತರಪ್ರದೇಶ: ಸಿಡಿಲು ಬಡಿದು ವಿವಿಧೆಡೆ 17 ಮಂದಿ ದುರ್ಮರಣ

ಹರ್ದೋಯಿಯಲ್ಲಿ 3, ಅಮೇಥಿ, ಸಿತಾಪುರ, ಬಲರಾಮಪುರ, ಗಾಜಿಪುರ ಮತ್ತು ಜಾಲೌನ್ ನಲ್ಲಿ ತಲಾ 2, ಫತೇಪುರ್, ಉನ್ನಾವ್, ಬದಾಯೂ ಮತ್ತು ಗೊಂಡಾದಲ್ಲಿ ತಲಾ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

Last Updated : Jun 25, 2019, 10:08 AM IST
ಉತ್ತರಪ್ರದೇಶ: ಸಿಡಿಲು ಬಡಿದು ವಿವಿಧೆಡೆ 17 ಮಂದಿ ದುರ್ಮರಣ title=

ಲಕ್ನೋ: ಪ್ರತ್ಯೇಕ ಪ್ರಕರಣಗಳಲ್ಲಿ ಇದುವರೆಗೆ ಸಿಡಿಲು ಬಡಿದು 17 ಮಂದಿ ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 

ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ನೈಸರ್ಗಿಕ ವಿಕೋಪಗಳಿಂದ ಜಿಲ್ಲೆಯಲ್ಲಿ ಹಲವರು ಸಾವನ್ನಪ್ಪಿದ್ದು, ಅದರಲ್ಲಿ ಹರ್ದೋಯಿಯಲ್ಲಿ 3, ಅಮೇಥಿ, ಸಿತಾಪುರ, ಬಲರಾಮಪುರ, ಗಾಜಿಪುರ ಮತ್ತು ಜಾಲೌನ್ ನಲ್ಲಿ ತಲಾ 2, ಫತೇಪುರ್, ಉನ್ನಾವ್, ಬದಾಯೂ ಮತ್ತು ಗೊಂಡಾದಲ್ಲಿ ತಲಾ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಉಳಿದಂತೆ ಹರ್ದೋಯಿಯಲ್ಲಿ 11, ಜಾಲೌನ್ ನಲ್ಲಿ 3, ಸೀತಾಪುರದಲ್ಲಿ 2, ಅಮೇಥಿ, ಮುರಾದಾಬಾದ್ ಮತ್ತು ಬದಾಯೂನಲ್ಲಿ ತಲಾ ಒಬ್ಬರು ಗಾಯಗೊಂಡಿದ್ದಾರೆ.

ರಾಜ್ಯದಲ್ಲಿ ಸಿಡಿಲು ಬಡಿದು 17 ಮಂದಿ ಸಾವನ್ನಪ್ಪಿರುವ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರದ ವಕ್ತಾರರು, ಈ ಕೂಡಲೇ ಮೃತ ವ್ಯಕ್ತಿಗಳ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಹಣವನ್ನು ಒದಗಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. 

Trending News