ಕರೋನಾ ಸಂಖ್ಯೆಯಲ್ಲಿ ಗಣನೀಯ ಇಳಿಮುಖ..!ಅನ್ ಲಾಕ್ ನತ್ತ ಭಾರತ

Unlock: ಭಾರತ ಇದೀಗ ಅನ್ ಲಾಕ್ ನತ್ತ ಹೊರಳುತ್ತಿದೆ.  ಕರೋನಾ ಕೇಸ್ ಗಳು ಕಡಿಮೆಯಾಗುತ್ತಿರುವಂತೆಯೇ ಮತ್ತೆ ಯಥಾಸ್ಥಿತಿಯತ್ತ ಹೊರಳಲು ರಾಜ್ಯಗಳು ನಿರ್ಧರಿಸಿವೆ.

Written by - Ranjitha R K | Last Updated : Jun 7, 2021, 09:48 AM IST
  • ಕರೋನಾ ಸೋಂಕಿನ ಪ್ರಮಾಣದಲ್ಲಿ ಗಣನೀಯ ಇಳಿಕೆ
  • ದೆಹಲಿ, ಉ.ಪ್ರ, ಮಹಾರಾಷ್ಟ್ರ ಅನ್ ಲಾಕ್ ನತ್ತ
  • ಕರ್ನಾಟಕದಲ್ಲಿ ಲಾಕ್ ಡೌನ್ ಮುಂದುವರಿಕೆ
ಕರೋನಾ ಸಂಖ್ಯೆಯಲ್ಲಿ ಗಣನೀಯ  ಇಳಿಮುಖ..!ಅನ್ ಲಾಕ್ ನತ್ತ ಭಾರತ title=
ದೆಹಲಿ, ಉ.ಪ್ರ, ಮಹಾರಾಷ್ಟ್ರ ಅನ್ ಲಾಕ್ ನತ್ತ (photo zee news)

ನವದೆಹಲಿ : ಭಾರತ ಇದೀಗ ಅನ್ ಲಾಕ್ ನತ್ತ (unlock) ಹೊರಳುತ್ತಿದೆ.  ಕರೋನಾ ಕೇಸ್ ಗಳು ಕಡಿಮೆಯಾಗುತ್ತಿರುವಂತೆಯೇ ಮತ್ತೆ ಯಥಾಸ್ಥಿತಿಯತ್ತ ಹೊರಳಲು ರಾಜ್ಯಗಳು ನಿರ್ಧರಿಸಿವೆ. ಯಾವ ರಾಜ್ಯದಲ್ಲಿ ಏನು ಸ್ಥಿತಿ ಇದೆ ಎಂಬುದನ್ನು ತಿಳಿಯೋಣ.

ದೆಹಲಿ :
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (delhi) ಇಂದಿನಿಂದ ಮೆಟ್ರೋ ರೈಲುಗಳು ಆರಂಭವಾಗಿವೆ. ಶೇ. 50 ರಷ್ಟು ಸಾಮರ್ಥ್ಯದಲ್ಲಿ ಮಾತ್ರ ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ಇದೆ.  ಮಾಲ್ ಮಾರುಕಟ್ಟೆಗಳು ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯ ತನಕ ತೆರೆಯಲಿವೆ.  ಇವು ಸಮ-ಬೆಸ ಸಂಖ್ಯೆಯ ಮಾನದಂಡದಲ್ಲಿ ತೆರೆಯಲಿವೆ. ಅಂದರೆ ದಿನದಲ್ಲಿ ಶೇ 50 ರಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗಳು (Market) ವಹಿವಾಟು ನಡೆಸಲಿವೆ. ಖಾಸಗೀ ಸಂಸ್ಥೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ : Income Tax New Portal ಇಂದಿನಿಂದ ಆರಂಭ, ತೆರಿಗೆದಾರರಿಗೆ ಲಭ್ಯವಾಗಲಿದೆ 7 ಹೊಸ ವೈಶಿಷ್ಟ್ಯ

ಮಹಾರಾಷ್ಟ್ರ :
ಮಹಾರಾಷ್ಟ್ರದಲ್ಲಿ 5 ಸ್ತರದ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. 36 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ಸಂಪೂರ್ಣ  ಅನ್ ಲಾಕ್ ನತ್ತ  ಹೊರಳಲಿವೆ. ಮುಂಬಯಿನಲ್ಲಿ (Mumbai) ಬಸ್ ಸಂಚಾರ ಮರಳಿ ಆರಂಭವಾಗಲಿದೆ.  ಆದರೆ, ಲೋಕಲ್ ರೈಲು (Mumbai Local train) ಸಂಚಾರಕ್ಕೆ ಇನ್ನೂ ಅನುಮತಿ ನೀಡಲಾಗಿಲ್ಲ.

ಉತ್ತರ ಪ್ರದೇಶ :
ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ 71 ಜಿಲ್ಲೆಗಳು ಅನ್ ಲಾಕ್ ಆಗಲಿವೆ. ರಾಜಧಾನಿ ಲಕ್ನೋ (Lucknow), ಮೀರತ್, ಸಹರಾನ್ ಪುರ, ಘೋರಖ್ ಪುರ ಹೊರತು ಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿಗೊಳಿಸಲಾಗಿದೆ. 

ಇದನ್ನೂ ಓದಿ Covaxin, Covishield ಇವೆರಡರಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ? ಸಂಶೋಧನೆ ಹೇಳಿದ್ದೇನು?

ಉಳಿದ ರಾಜ್ಯಗಳ ಸ್ಥಿತಿ:
ಕರ್ನಾಟಕದಲ್ಲಿ (Karnataka) ಜೂನ್ 14ರ ತನಕ ಲಾಕ್ ಡೌನ್ ಮುಂದುವರಿಯಲಿದೆ. ತಮಿಳುನಾಡಿನಲ್ಲೂ ಜೂ. 14 ರ ತನಕ ಲಾಕ್ ಡೌನ್ ಇದೆ. ಆದರೆ, ಕೆಲವು ವಿನಾಯಿತಿಗಳನ್ನೂ ನೀಡಲಾಗಿದೆ. ಹರಿಯಾಣ ರಾಜ್ಯವೂ ಜೂ. 14ರ ತನಕ ಲಾಕ್ ಡೌನ್ (Lockdown) ವಿಸ್ತರಿಸಿದೆ. ಪಂಜಾಬ್ ಕೂಡಾ ಜೂ. 10 ರ ತನಕ ಲಾಕ್ ಡೌನ್ ವಿಸ್ತರಿಸಿದೆ.  ಸಿಕ್ಕಿಂ ಕೂಡಾ ಜೂನ್ 14ರ ತನಕ ಲಾಕ್ ಡೌನ್ ವಿಸ್ತರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News