Schools Reopen: ಬಿಹಾರದಲ್ಲಿ ಅನ್ಲಾಕ್ -4.0, ಇಂದಿನಿಂದ ಶಾಲಾ-ಕಾಲೇಜುಗಳು ಓಪನ್, ಮಾರ್ಗಸೂಚಿ ಏನ್ ಹೇಳುತ್ತೆ?

Schools Reopen: ಕರೋನಾವೈರಸ್ ಪ್ರಕರಣಗಳು ಕಡಿಮೆಯಾಗಿರುವ ಹಿನ್ನಲೆಯಲ್ಲಿ ಬಿಹಾರದಲ್ಲಿ ಇಂದಿನಿಂದ ಶಾಲಾ-ಕಾಲೇಜುಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕರೋನಾ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.

Written by - Zee Kannada News Desk | Last Updated : Jul 12, 2021, 01:25 PM IST
  • ಸುಮಾರು 98 ದಿನಗಳ ನಂತರ ಶಾಲಾ-ಕಾಲೇಜುಗಳನ್ನು ತೆರೆಯಲು ಸಿಎಂ ನಿತೀಶ್ ಕುಮಾರ್ ಸರ್ಕಾರದ ಆದೇಶ
  • ಬಿಹಾರದಲ್ಲಿ ಅನ್ಲಾಕ್ -4.0 ಅಡಿಯಲ್ಲಿ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ಇಂದಿನಿಂದ ತೆರೆದಿವೆ
  • ಈ ಸಮಯದಲ್ಲಿ, ಶಾಲಾ-ಕಾಲೇಜುಗಳಲ್ಲಿ ಕರೋನಾ ಮಾರ್ಗಸೂಚಿಗಳ ಪಾಲನೆ ಕಡ್ಡಾಯ

Trending Photos

Schools Reopen: ಬಿಹಾರದಲ್ಲಿ ಅನ್ಲಾಕ್ -4.0, ಇಂದಿನಿಂದ ಶಾಲಾ-ಕಾಲೇಜುಗಳು ಓಪನ್, ಮಾರ್ಗಸೂಚಿ ಏನ್ ಹೇಳುತ್ತೆ? title=
ಈ ರಾಜ್ಯದಲ್ಲಿ ಸುಮಾರು 98 ದಿನಗಳ ನಂತರ ಶಾಲಾ-ಕಾಲೇಜುಗಳು ಓಪನ್

Schools Reopen: ಕರೋನಾವೈರಸ್ (Coronavirus) ಸೋಂಕಿನ ಪ್ರಕರಣಗಳು ಕಡಿಮೆಯಾಗಿರುವ ಹಿನ್ನಲೆಯಲ್ಲಿ ಬಿಹಾರ ಸರ್ಕಾರವು ಅನ್ಲಾಕ್ ಮಾರ್ಗಸೂಚಿಗಳ ಅಡಿಯಲ್ಲಿ ಶಾಲೆಗಳು (11-12 ನೇ ತರಗತಿಯ), ಎಲ್ಲಾ ಪದವಿ ಕಾಲೇಜುಗಳು, ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ತೆರೆಯಲು ನಿರ್ಧರಿಸಲಾಗಿದೆ. ಬಿಹಾರದಲ್ಲಿ ಅನ್ಲಾಕ್ -4.0 ಅಡಿಯಲ್ಲಿ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ಇಂದಿನಿಂದ ತೆರೆದಿವೆ. ಈ ಸಮಯದಲ್ಲಿ, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕರೋನಾ ಮಾರ್ಗಸೂಚಿಗಳನ್ನು  (Corona Guidelines) ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಕರೋನಾದ ಎರಡನೇ ತರಂಗದಿಂದಾಗಿ (Corona Second Wave) ಉಲ್ಬಣಗೊಂಡ ಹಿನ್ನಲೆಯಲ್ಲಿ ಏಪ್ರಿಲ್ 3 ರಂದು ನಡೆದ ಕ್ರೈಸಿಸ್ ಮ್ಯಾನೇಜ್ಮೆಂಟ್ ಗ್ರೂಪ್ನ ಸಭೆಯಲ್ಲಿ, ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಇದೀಗ ಸುಮಾರು 98 ದಿನಗಳ ನಂತರ ಶಾಲಾ-ಕಾಲೇಜುಗಳನ್ನು (Schools- Colleges) ತೆರೆಯಲು ಸಿಎಂ ನಿತೀಶ್ ಕುಮಾರ್ ಸರ್ಕಾರ ನಿರ್ಧರಿಸಿದೆ. ಆದರೆ ಈ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ.

ಇದನ್ನೂ ಓದಿ- Corona Vaccine New Guidelines: ಗರ್ಭಿಣಿಯರಿಗೆ ಕರೋನ ಲಸಿಕೆ ಸುರಕ್ಷಿತವಾಗಿದೆಯೇ? ಇಲ್ಲಿದೆ ಹೊಸ ಮಾರ್ಗಸೂಚಿ

ಈ ಮಾರ್ಗಸೂಚಿಗಳನ್ನು ಪಾಲಿಸಬೇಕು:-
>> ಶಾಲಾ-ಕಾಲೇಜುಗಳಲ್ಲಿ ಕೇವಲ 50 ಪ್ರತಿಶತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು.

>> ಶಾಲಾ-ಕಾಲೇಜು ಮತ್ತು ಸಂಸ್ಥೆಯ ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಸೌಲಭ್ಯ ಇರಬೇಕು.

>> ಕರೋನಾದ ಲಸಿಕೆ (Corona Vaccine) ತೆಗೆದುಕೊಂಡ ಶಿಕ್ಷಕರು ಮತ್ತು ಉದ್ಯೋಗಿಗಳಿಗೆ ಮಾತ್ರ ಶಾಲಾ-ಕಾಲೇಜಿನ ಪ್ರಾಂಗಣದೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ.

>> ಎಲ್ಲಾ ತರಗತಿಗಳಲ್ಲಿ, ವಿದ್ಯಾರ್ಥಿಗಳ ನಡುವೆ ಕನಿಷ್ಠ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ.

>> ಸ್ಟಾಫ್ ರೂಮ್, ಆಫೀಸ್ ರೂಮ್, ಇನ್‌ಪುಟ್ ರೂಮ್‌ನಲ್ಲೂ ಇದೇ ನಿಯಮ ಅನ್ವಯವಾಗುತ್ತದೆ.

>> ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಶಾಲೆಯ ಮತ್ತು ಸಂಸ್ಥೆಯ ಎಲ್ಲಾ ಗೇಟ್‌ಗಳನ್ನು ತೆರೆದಿಡಬೇಕಾಗುತ್ತದೆ.

>> ಪ್ರವೇಶ ಮತ್ತು ನಿರ್ಗಮನಕ್ಕಾಗಿ ವಿವಿಧ ಗೇಟ್‌ಗಳನ್ನು ನಿಗದಿಪಡಿಸಬೇಕಾಗುತ್ತದೆ.

>> ದಾಖಲಾತಿ ಹೆಚ್ಚಿರುವ ಶಿಕ್ಷಣ ಸಂಸ್ಥೆಗಳು ಅಥವಾ ಶಾಲೆಗಳನ್ನು ಎರಡು ಪಾಳಿಯಲ್ಲಿ ನಡೆಸಲಾಗುತ್ತದೆ.

>> ಶಾಲೆಗಳು ಮತ್ತು ಕಾಲೇಜುಗಳಲ್ಲಿ ಯಾವುದೇ ರೀತಿಯ ಕಾರ್ಯ, ಹಬ್ಬ ಇತ್ಯಾದಿಗಳನ್ನು ಆಯೋಜಿಸಲು ಅವಕಾಶವಿಲ್ಲ.

ಇದನ್ನೂ ಓದಿ-  Indian Railways, IRCTC: ಪ್ರಯಾಣಿಕರು ಈಗ ಈ 44 ರೈಲುಗಳಲ್ಲಿ ರಿಸರ್ವೇಶನ್ ಇಲ್ಲದೆಯೇ ಪ್ರಯಾಣಿಸಬಹುದು

ಇದಕ್ಕೂ ಮುನ್ನ ಕೋವಿಡ್-19 (Covid-19) ಪ್ರಕರಣಗಳು ಕಡಿಮೆಯಾಗಿದ್ದು ಪರಿಸ್ಥಿತಿ ತಹಬದಿಗೆ ಬರುತ್ತಿರುವ ಹಿನ್ನಲೆಯಲ್ಲಿ ಸೋಮವಾರದಿಂದ ಶಿಕ್ಷಣ ಸಂಸ್ಥೆಗಳು ತೆರೆಯುತ್ತಿವೆ ಎಂದು ಬಿಹಾರ ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದರು. ರೋಗ ಮತ್ತು ಸೋಂಕು ಮುಕ್ತ ವಾತಾವರಣದಲ್ಲಿ ಅಧ್ಯಯನ ಕಾರ್ಯವನ್ನು ಕೈಗೊಳ್ಳಬೇಕು ಎಂದು ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಗೆ ಅವರು ಕರೆ ನೀಡಿದ್ದರು. ಎಲ್ಲರೂ ಖಂಡಿತವಾಗಿಯೂ ಕರೋನಾ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಜ್ಯ ಶಿಕ್ಷಣ ಸಚಿವರು, ಕರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಡ್ನು ಉಳಿದ ತರಗತಿಗಳನ್ನು ಕೂಡ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News