ನವದೆಹಲಿ: ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕರೆಯಲಾಗಿದ್ದ ಸಭೆ ಯಾವುದೇ ಅಂತಿಮ ಫಲಿತಾಂಶ ಅಥವಾ ಹೇಳಿಕೆಯಿಲ್ಲದೆ ಕೊನೆಗೊಂಡಿದೆ ಎನ್ನಲಾಗಿದೆ.
ಈ ವಿಷಯವನ್ನು ಅಂತರರಾಷ್ಟ್ರೀಕರಿಸಲು ಪ್ರಯತ್ನಿಸಿದ್ದ ಪಾಕಿಸ್ತಾನ ಮತ್ತು ಚೀನಾಕ್ಕೆ ಭಾರಿ ಮುಖಭಂಗವಾಗಿದೆ ಎನ್ನಲಾಗಿದೆ. ಕಾಶ್ಮೀರ ವಿಚಾರವಾಗಿ ಸಭೆ ಕರೆಯಲು ಚೀನಾ ಆಗ್ರಹಿಸಿದ ಹಿನ್ನಲೆಯಲ್ಲಿ ಶುಕ್ರವಾರದಂದು ಸುಮಾರು ಒಂದು ಘಂಟೆಗಳ ಕಾಲ ಸಭೆ ನಡೆಯಿತು. ಇದಾದ ನಂತರ ಯುಎನ್ನಲ್ಲಿ ಬೀಜಿಂಗ್ ರಾಯಭಾರಿ ಜಾಂಗ್ ಜುನ್ ಮತ್ತು ಪಾಕಿಸ್ತಾನದ ಯುಎನ್ ರಾಯಭಾರಿ ಮಲೀಹಾ ಲೋಧಿ ಮಾಧ್ಯಮಗಳಿಗೆ ಒಂದೊಂದಾಗಿ ಹೇಳಿಕೆ ನೀಡಿದ್ದಾರೆ.ಆದರೆ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ ಎನ್ನಲಾಗಿದೆ.
ಈಗ ಈ ಸಭೆಯ ಕುರಿತಾಗಿ ತಿಳಿಸಿರುವ ಮೂಲಗಳ ಪ್ರಕಾರ ' ಕಾಶ್ಮೀರವನ್ನು ಬೆಳೆಸುವ ಪಾಕಿಸ್ತಾನದ ಪ್ರಸ್ತಾವಕ್ಕೆ ಯಾವುದೇ ಮಾನ್ಯತೆ ಸಿಕ್ಕಿಲ್ಲ.ಈ ಬಾರಿಯೂ ಅದು ಬೆಂಬಲ ಪಡೆಯುವಲ್ಲಿ ವಿಫಲವಾಗಿದೆ ಎನ್ನಲಾಗಿದೆ.ಸಮಾಲೋಚನೆಯ ನಂತರ ಭದ್ರತಾ ಮಂಡಳಿಯ ಅಧ್ಯಕ್ಷರಿಂದ ಯಾವುದೇ ಹೇಳಿಕೆ ಬಂದಿಲ್ಲ ಎಂದು ತಿಳಿದುಬಂದಿದೆ.
ಭಾರತ ಇತ್ತೀಚಿಗೆ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡು ಕಾಶ್ಮೀರವನ್ನು ಲಡಾಖ್ ಮತ್ತು ಜಮ್ಮು ಕಾಶ್ಮೀರಗಳನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಗಿತ್ತು, ಆದರೆ ಇದಕ್ಕೆ ಪಾಕಿಸ್ತಾನ ತಗಾದೆ ತೆಗೆದು ಚೀನಾ ಮೂಲಕ ಈ ವಿಷಯವನ್ನು ಭದ್ರತಾ ಮಂಡಳಿಗೆ ತೆಗೆದುಕೊಂಡುಹೋಗುವುದರ ಮೂಲಕ ಅಂತರಾಷ್ಟ್ರೀಕರಣ ಮಾಡಲು ಮುಂದಾಗಿತ್ತು, ಆದರೆ ಅವರ ವಾದಕ್ಕೆ ಈಗ ಭದ್ರತಾ ಮಂಡಳಿಯಲ್ಲಿ ಸೂಕ್ತ ಮನ್ನಣೆ ದೊರೆತಿಲ್ಲವೆನ್ನಲಾಗಿದೆ.