ʼಆ ಸತ್ಯʼಗಳನ್ನು ಮರೆಮಾಚಲು ಮೋದಿ & ಕಂಪನಿ ʼಸನಾತನ ಧರ್ಮʼ ಬಳಸುತ್ತಿದೆ : ಉದಯನಿಧಿ ಪ್ರತಿಧ್ವನಿ

Sanatana Dharma row : ಮಣಿಪುರದಲ್ಲಿ ಪ್ರಚೋದಿತ ಗಲಭೆಯಿಂದ 250 ಕ್ಕೂ ಹೆಚ್ಚು ಜನರ ಹತ್ಯೆ ಮತ್ತು 7.5 ಲಕ್ಷ ಕೋಟಿ ಭ್ರಷ್ಟಾಚಾರ ಸೇರಿದಂತೆ ಇತರ ಸತ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿ ಮತ್ತು ಅವರ ಕಂಪನಿಯು ಸನಾತನ ತಂತ್ರವನ್ನು ಬಳಸುತ್ತಿದೆ ಎಂದು ಉದಯನಿಧಿ ಹೇಳಿದರು.

Written by - Krishna N K | Last Updated : Sep 7, 2023, 04:50 PM IST
  • 'ಸನಾತನ ಧರ್ಮ ನಿರ್ಮೂಲನೆ' ಕುರಿತು ಉದಯನಿಧಿ ಹೇಳಿಕೆ
  • ವಿರೋಧಗಳ ನಡುವೆಯೂ ಹಿಂದೆ ಸರಿಯದ ತಮಿಳುನಾಡು ಸಚಿವ
  • ಪ್ರದಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ವಿರುದ್ದ ಗುಡುಗಿದ ಸಿಎಂ ಸ್ಟಾಲಿನ್‌ ಪುತ್ರ
ʼಆ ಸತ್ಯʼಗಳನ್ನು ಮರೆಮಾಚಲು ಮೋದಿ & ಕಂಪನಿ ʼಸನಾತನ ಧರ್ಮʼ ಬಳಸುತ್ತಿದೆ : ಉದಯನಿಧಿ ಪ್ರತಿಧ್ವನಿ title=

Udhayanidhi stalin : 'ಸನಾತನ ಧರ್ಮ ನಿರ್ಮೂಲನೆ' ಹೇಳಿಕೆ ವಿರುದ್ದ ಬಲವಾದ ಟೀಕೆಗಳು ಬಂದರೂ ಸಹ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ. ವಿರೋಧಗಳ ನಡುವೆಯೂ ಧ್ವನಿ ಎತ್ತಿರುವ ಉದಯನಿಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ವಿರುದ್ಧ ಬಿಜೆಪಿ ಮತ್ತು ಕಾನೂನು ಸವಾಲುಗಳ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ, ಇದು ಅವರು ಬದುಕುಳಿಯಲು ಬಳಸುವ ವಿಧಾನವಾಗಿದೆ ಎಂದು ಟೀಕೆ ಮಾಡಿದ್ದಾರೆ. 

ಇದನ್ನೂ ಓದಿ:ʼಸನಾತನ ಧರ್ಮ ಏಡ್ಸ್‌ʼ ಇದ್ದಂತೆ : ಉದಯನಿಧಿ ಬಳಿಕ ತಮಿಳುನಾಡು ಸಚಿವನ ವಿವಾದಾತ್ಮಕ ಹೇಳಿಕೆ

ಅಲ್ಲದೆ, ಮಣಿಪುರದಲ್ಲಿ ಪ್ರಚೋದಿತ ಗಲಭೆಯಿಂದ 250 ಕ್ಕೂ ಹೆಚ್ಚು ಜನರ ಹತ್ಯೆ ಮತ್ತು 7.5 ಲಕ್ಷ ಕೋಟಿ ಭ್ರಷ್ಟಾಚಾರ ಸೇರಿದಂತೆ ಇತರ ಸತ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿ ಮತ್ತು ಅವರ ಕಂಪನಿಯು ಸನಾತನ ತಂತ್ರವನ್ನು ಬಳಸುತ್ತಿದೆ ಎಂದು ಉದಯನಿಧಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಉದಯನಿಧಿ, ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಏನೂ ಮಾಡಿಲ್ಲ,  ನೋಟುಗಳನ್ನು ರದ್ದುಗೊಳಿಸುತ್ತಾರೆ, ಗುಡಿಸಲುಗಳನ್ನು ಮರೆಮಾಡಲು ಗೋಡೆ ನಿರ್ಮಿಸುತ್ತಾರೆ, ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುತ್ತಾರೆ, ಅಲ್ಲಿ ಸೆಂಗೋಲ್ ಅನ್ನು ಪ್ರತಿಷ್ಠಾಪಿಸುತ್ತಾರೆ, ದೇಶದ ಹೆಸರನ್ನು ಬದಲಾಯಿಸುತ್ತಾರೆ, ಗಡಿಯಲ್ಲಿ ನಿಂತು ಬಿಳಿ ಧ್ವಜ ಹಾರಿಸುತ್ತಾರೆ  ಎಂದು ತಮಿಳುನಾಡು ಸಚಿವರು ವ್ಯಂಗ್ಯವಾಡಿದರು.

ಇದನ್ನೂ ಓದಿ:ನನ್ನ ಮಗ ʼಆ ಪದʼ ಬಳಕೆ ಮಾಡಿಲ್ಲ, ಗೊತ್ತಿಲ್ಲದೆ ಮಾತನಾಡಬೇಡಿ : ಪುತ್ರನನ್ನು ಬೆಂಬಲಿಸಿ ಪಿಎಂಗೆ ಸಿಎಂ ಸ್ಟಾಲಿನ್ ಪತ್ರ

ಇನ್ನು ಅಯೋಧ್ಯೆ ಶ್ರೀಗಳ  ತಲೆ ಕತ್ತರಿಸುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಉದಯನಿಧಿ, ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಬೇಡಿ ಮತ್ತು ಅವರ ಪ್ರತಿಕೃತಿಗಳನ್ನು ಸುಡದಂತೆ ಡಿಎಂಕೆ ಕಾರ್ಯಕರ್ತರಿಗೆ ಮನವಿ ಮಾಡಿದರು. ಅಲ್ಲದೆ, ನನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News