ಜಮ್ಮು-ಕಾಶ್ಮೀರ: ಸಿಆರ್ಪಿಎಫ್ ಯೋಧರ ಮೇಲೆ ಉಗ್ರರ ಗುಂಡಿನ ದಾಳಿ; ಇಬ್ಬರು ಸಾವು

ಉಗ್ರರು ಗುಂಡು ಹಾರಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅನಂತ್ನಾಗ್'ನ ಶೀರಾ ಪೋರ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.   

Last Updated : Jul 13, 2018, 12:49 PM IST
ಜಮ್ಮು-ಕಾಶ್ಮೀರ: ಸಿಆರ್ಪಿಎಫ್ ಯೋಧರ ಮೇಲೆ ಉಗ್ರರ ಗುಂಡಿನ ದಾಳಿ; ಇಬ್ಬರು ಸಾವು title=
ಪೋಟೋ ಕೃಪೆ: ANI

ಶ್ರೀನಗರ: ಗಸ್ತಿನಲ್ಲಿದ್ದ ಸಿಆರ್ಪಿಎಫ್ ಯೋಧರ ಮೇಲೆ ಉಗ್ರರು ಗುಂಡು ಹಾರಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅನಂತ್ನಾಗ್'ನ ಶೀರಾ ಪೋರ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. 

ದೈನಂದಿನ ಗಸ್ತು ಕೆಲಸದಲ್ಲಿ ನಿರತರಾಗಿದ್ದ ಸಿಆರ್ಪಿಎಫ್ ಯೋಧರ ಗುಂಪಿನ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಂತೆ, ಯೋಧರೂ ಸಹ ಗುಂಡು ಹಾರಿಸಲು ಆರಂಭಿಸಿದ್ದಾರೆ. ಹೀಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ತೀವ್ರವಾಗಿ ಗಾಯಗೊಂಡ ಪರಿಣಾಮ ಸಾವನ್ನಪ್ಪಿದ್ದಾರೆ. 

ಈ ಸಂಬಂಧ ಉಗ್ರರ ಶೋಧ ಕಾರ್ಯ ಪ್ರಗತಿಯಲ್ಲಿದ್ದು, ಕಾರ್ಯಾಚರಣೆಗಳಲ್ಲಿ ನೆರವಾಗಲು ಹೆಚ್ಚುವರಿ ಸೇನಾಪಡೆಗಳು ಸ್ಥಳಕ್ಕೆ ಧಾವಿಸಿವೆ. 

ಇದು ಕಳೆದ ಒಂದು ವಾರದಲ್ಲಿ ಸಿಆರ್ಪಿಎಫ್ ತಂಡಗಳನ್ನು ಗುರಿಯಾಗಿಸುವ ಮೂರನೇ ಭಯೋತ್ಪಾದಕರ ಘಟನೆಯಾಗಿದೆ. ಕಳೆದ ಶುಕ್ರವಾರ ಪುಲ್ವಾಮಾದ ತಾಹಾಬ್ನಲ್ಲಿ ಸಿಆರ್ಪಿಎಫ್-ರಾಷ್ಟ್ರೀಯ ರೈಫಲ್ಸ್ ಶಿಬಿರವನ್ನು ಉಗ್ರರು ಗುರಿಯಾಗಿರಿಸಿಕೊಂಡಿದ್ದರು. 

Trending News