Amul ಖಾತೆಯನ್ನು ಸ್ಥಗಿತಗೊಳಿಸಿದ Twitter, ಕಾರಣ ಏನು?

ಚೀನಾ ವಿರುದ್ಧ ಪೋಸ್ಟ್ ವೊಂದನ್ನು ಹಂಚಿಕೊಂಡ ಕಾರಣಕ್ಕೆ ಟ್ವಿಟ್ಟರ್ ದೇಶದ ಖ್ಯಾತ ಹಾಲು ಉತ್ಪಾದಕ ಕಂಪನಿ ಅಮುಲ್ ಅಧಿಕೃತ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರೀಯಗೊಳಿಸಿದೆ.

Last Updated : Jun 6, 2020, 07:23 PM IST
Amul ಖಾತೆಯನ್ನು ಸ್ಥಗಿತಗೊಳಿಸಿದ Twitter, ಕಾರಣ ಏನು? title=

ನವದೆಹಲಿ:ಚೀನಾ ವಿರುದ್ಧ ಪೋಸ್ಟ್ ವೊಂದನ್ನು ಹಂಚಿಕೊಂಡ ಕಾರಣಕ್ಕೆ ಟ್ವಿಟ್ಟರ್ ದೇಶದ ಖ್ಯಾತ ಹಾಲು ಉತ್ಪಾದಕ ಕಂಪನಿ ಅಮುಲ್ ಅಧಿಕೃತ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರೀಯಗೊಳಿಸಿದೆ. ಆದರೆ, ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕೆ ಭಾರಿ ಪ್ರಮಾಣದ ವಿರೋಧ ವ್ಯಕ್ತವಾದ ಹಿನ್ನೆಲೆ ಸಾಮಾಜಿಕ ಮಾಧ್ಯಮ ಮತ್ತೆ ಅಮುಲ್ ಕಂಪನಿಯ ಖಾತೆಯನ್ನು ಸಕ್ರೀಯಗೊಳಿಸಿದೆ. ಇದೇ ವೇಳೆ ಟ್ವಿಟ್ಟರ್ ನಿಂದ ಅಧಿಕೃತವಾಗಿ ತನ್ನ ಖಾತೆ ನಿಷ್ಕ್ರೀಯಗೊಂಡ ಬಳಿಕ ಅಮುಲ್ ತನ್ನ ತೀವ್ರ ಆಕ್ಷೇಪಣೆಯನ್ನು ದಾಖಲಿಸಿದೆ.

ಅಮೂಲ್ ದಾಖಲಿಸಿತ್ತು ಈ ಜಾಹೀರಾತು
ಚೀನಾವನ್ನು ಉಲ್ಲೇಖಿಸಿ ಅಮುಲ್ ಟ್ವಿಟ್ಟರ್ ನಲ್ಲಿ ಎಕ್ಸಿಟ್ ದಿ ಡ್ರ್ಯಾಗನ್ ಎಂಬ ಸೃಜನಾತ್ಮಕ ಪೋಸ್ಟ್ ಹಂಚಿಕೊಂದಿತ್ತು ಜೊತೆಗೆ  ಈ ಸೃಜನಾತ್ಮಕ ಪೋಸ್ಟ್ ಶೀರ್ಷಿಕೆಯಲ್ಲಿ, ಅಮುಲ್ 'ಚೀನಾದ ವಸ್ತುಗಳನ್ನುವಿರೋಧಿಸಬೇಕು' ಎಂದು ಬರೆದುಕೊಂಡಿತ್ತು. 

ಅಮುಲ್ ಅವರ ಈ ಸೃಜನಶೀಲತೆಯಲ್ಲಿ, ಅಪ್ರತಿಮ ಅಮುಲ್ ಹುಡುಗಿ ಡ್ರ್ಯಾಗನ್ ವಿರುದ್ಧ ಹೋರಾಡುವ ಮೂಲಕ ತನ್ನ ದೇಶವನ್ನು ಉಳಿಸುವುದನ್ನು ತೋರಿಸಲಾಗಿದೆ. ಇದರ ಜೊತೆಗೆ ವಿಡಿಯೋ ಶೇರಿಂಗ್ ಆಪ್ ಟಿಕ್ ಟಾಕ್ ನ ಲೋಗೋ ಅನ್ನು ಸಹ ನೀವು ಕಾಣಬಹುದು. ಇದಲ್ಲದೆ ಈ ಸೃಜನಾತ್ಮಕ ಜಾಹಿರಾತಿನಲ್ಲಿ ದಪ್ಪ ಅಕ್ಷರಗಳಲ್ಲಿ 'ಅಮೂಲ್ Made In India ಬ್ರಾಂಡ್ ಆಗಿದೆ' ಎಂದು ಬರೆಯಲಾಗಿತ್ತು.

Twitterಗೆ ದೂರು ನೀಡಿದ ಅಮೂಲ್
ಈ ಕುರಿತು ಮಾಹಿತಿ ನೀಡಿರುವ ಅಮೂಲ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆರ್. ಎಸ್ ಸೋಧಿ, "ಈ ಕುರಿತು ನಯು ಟ್ವಿಟ್ಟರ್ ಅನ್ನು ಪ್ರಶ್ನಿಸಿದ್ದು, ಈ ರೀತಿ ಬ್ಲಾಕ್ ಮಾಡುವ ಮೊದಲು ನಮ್ಮೊಂದಿಗೆ ಮಾಹಿತಿ ಏಕೆ ಹಂಚಿಕೊಳ್ಳಲಾಗಿಲ್ಲ, ಈ ಕುರಿತು ನಮಗೆ ಮಾಹಿತಿ ನೀಡಬೇಕಾಗಿತ್ತು' ಎಂದು ಹೇಳಿದ್ದಾರೆ. ಸದ್ಯ, ತನಿಖೆಯ ಬಳಿಕ ಟ್ವಿಟ್ಟರ್ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಭುಗಿಲೆದ್ದ ಬಳಕೆದಾರರ ಆಕ್ರೋಶ
ಅಮೂಲ್ ಖಾತೆ ನಿಷ್ಕ್ರೀಯಗೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವಿಟ್ಟರ್ ವಿರುದ್ಧ ಭಾರಿ ಆಕ್ರೋಶ ಭುಗಿಲೆದ್ದಿದೆ. ಸಂಜೆ 5 ರ ವರೆಗೆ ಅಮೂಲ್ ಬೆಂಬಲಿಸಿ ಸುಮಾರು 19 ಸಾವಿರ ಟ್ವೀಟ್ ಗಳನ್ನು ಗಮನಿಸಲಾಗಿದೆ ಹಾಗೂ ಎರಡನೇ ಸ್ಥಾನದಲ್ಲಿ ಇದು ಟ್ರೆಂಡ್ ಮಾಡಲಾರಂಭಿಸಿತ್ತು.

Trending News