Viral News: ಈ ಕುದುರೆಯ ಬೆಲೆಯಲ್ಲಿ ಎರಡು ಮರ್ಸಿಡಿಸ್ ಬೆಂಜ್ ಕಾರ್ ಖರೀದಿಸಬಹುದಂತೆ, ಅಂತದ್ದೇನಿದೆ ಇದರಲ್ಲಿ ವಿಶೇಷತೆ?

Most Expensive Horse - ಸಾಮಾನ್ಯವಾಗಿ ಕುದುರೆ ಮಾರುಕಟ್ಟೆಯಲ್ಲಿ ಬಹಳಷ್ಟು ವೈವಿಧ್ಯತೆಯನ್ನುನೀವು  ಕಾಣಬಹುದು. ಅವುಗಳ ಬೆಲೆಯಲ್ಲಿ ಲಕ್ಷಾಂತರ ಮತ್ತು ಕೋಟಿ ರೂಪಾಯಿಯ ವ್ಯತ್ಯಾಸ ಇರುತ್ತದೆ. ಇಂದು ನಾವು ನಿಮಗೆ ಅಲೆಕ್ಸ್ ಹೆಸರಿನ ಕುದುರೆಯ ಬಗ್ಗೆ ಮಾಹಿತಿ ನೀಡಲಿದ್ದು, ಅವನ ಬೆಲೆ 1 ಕೋಟಿ 25 ಲಕ್ಷ ಎಂದರೆ ನಂಬುತ್ತೀರಾ? 

Written by - Nitin Tabib | Last Updated : Dec 21, 2021, 09:26 PM IST
  • 1.25 ಕೋಟಿ ಬೆಲೆ ಬಾಳುವ ಕುದುರೆ.
  • ಈ ಕುದುರೆಯ ವೈಶಿಷ್ಟ್ಯ ತಿಳಿದು ನೀವು ನಿಬ್ಬೇರಗಾಗುವಿರಿ.
  • ಈ ಕುದುರೆ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
Viral News: ಈ ಕುದುರೆಯ ಬೆಲೆಯಲ್ಲಿ ಎರಡು ಮರ್ಸಿಡಿಸ್ ಬೆಂಜ್ ಕಾರ್ ಖರೀದಿಸಬಹುದಂತೆ, ಅಂತದ್ದೇನಿದೆ ಇದರಲ್ಲಿ ವಿಶೇಷತೆ? title=
Most Expensive Horse (File Photo)

ಮುಂಬೈ: Marwar Horse Species - ನೀವು ಅನೇಕ ಕುದುರೆಗಳನ್ನು ನೋಡಿರಬಹುದು. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ಕುದುರೆ ವಿಷಯ ತುಂಬಾ ವಿಶೇಷವಾಗಿದೆ. ಇದನ್ನು ಮಹಾರಾಣಾ ಪ್ರತಾಪ್ (Maharana Pratap) ಅವರ ಚೇತಕ್‌ಗೆ (Chetak) ಹೋಲಿಸಲಾಗುತ್ತಿರುವುದು ಮತ್ತೊಂದು ವಿಶೇಷತೆ. 2 ಮರ್ಸಿಡಿಸ್ ಬೆಂಜ್ (Mercedes Benz) ಕಾರುಗಳು ಅಥವಾ ಬಿಎಂಡಬ್ಲ್ಯು (BMW) ಖರೀದಿಸುವ ಬೆಲೆಗೆ ಜನರು ಇದನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಈ ಕುದುರೆಯ ಬೆಲೆ 1.25 ಕೋಟಿ. ಈ ಕುದುರೆ ಇಷ್ಟೊಂದು ದುಬಾರಿ ಇರಲು ಕಾರಣವೇನು ತಿಳಿಯೋಣ ಬನ್ನಿ.

ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯು ಕೂಡ ಕುದುರೆಯ ಮುಂದೆ  ಫೇಲಾಗುತ್ತವೆ
ಈ ಕುದುರೆಯ ಬೆಲೆಯಲ್ಲಿ  ನೀವು ಕನಿಷ್ಟ ಸಿ ಅಥವಾ ಎ ದರ್ಜೆಯ ಎರಡು ಮರ್ಸಿಡಿಸ್ ಬೆಂಜ್ ಕಾರುಗಳನ್ನು ಖರೀದಿಸಬಹುದು. ಅಂದರೆ ಈ ಕುದುರೆ ಬಿಎಂಡಬ್ಲ್ಯು ಕಾರಿಗಿಂತ ದುಬಾರಿಯಾಗಿದೆ.

ಪ್ರತಿಯೊಬ್ಬರೂ ಈ ಕುದುರೆಯ ಮಾಲೀಕರಾಗಲು ಬಯಸುತ್ತಿದ್ದಾರೆ
ಎರಡೂ ವೇಗದಲ್ಲಿ ಬಾಜೀಗರ್ ಗಳಾಗಿವೆ, ಆದರೆ ಬೆಲೆಯಲ್ಲಿ ನೆಲ ಮತ್ತು ಆಕಾಶದ ವ್ಯತ್ಯಾಸವಿದೆ. ನೀವು ಈ ಕುದುರೆಯನ್ನು ಖರೀದಿಸುವ ಬೆಲೆಯನ್ನು ಪಾವತಿಸುವ ಮೂಲಕ, ನೀವು ಎರಡು ಐಷಾರಾಮಿ ಕಾರುಗಳ ಮಾಲೀಕರಾಗಬಹುದು. ಆದರೆ ಈ ಕುದುರೆಯ ವಿಶೇಷತೆ ಏನೆಂದರೆ ಎಲ್ಲರೂ ಮರ್ಸಿಡಿಸ್ ಕಾರನ್ನು ಬಿಟ್ಟು ಅದರ ಮಾಲೀಕರಾಗಲು ಬಯಸುತ್ತಿರುವುದು.

ಕುದುರೆಯ ಬಗ್ಗೆ ಸಂಪೂರ್ಣ ಪರಿಚಯ (Viral News)
ಹೆಸರು - ಅಲೆಕ್ಸ್
ವಯಸ್ಸು - ಸುಮಾರು 5 ವರ್ಷಗಳು
ಎತ್ತರ - 65 ಇಂಚುಗಳು
ಮಸುಕು ರೇಖೆ
ಬೆಲೆ - 1.25 ಕೋಟಿ

ಅಲೆಕ್ಸ್ ಮಾರವಾಡ  ಪ್ರಜಾತಿಯ ಕುದುರೆ
ಅಲೆಕ್ಸ್‌ನ (Alex Horse) ಎತ್ತರ ಎಷ್ಟಿದೆಯೆಂದರೆ ಅತ್ಯುತ್ತಮ ತಳಿಯ ಕುದುರೆಗಳು ಅವನ ಮುಂದೆ ನಿಲ್ಲಲಾರವು. ಮಹಾರಾಷ್ಟ್ರದ ನಂದುರ್ಬಾರ್‌ನ ಸಾರಂಖೇಡಾದಲ್ಲಿ ಪ್ರಸ್ತುತ ಕುದುರೆ ಮೇಳ ನಡೆಯುತ್ತಿದೆ. ಅಲ್ಲಿ ಅಲೆಕ್ಸ್‌ನನ್ನೂ ಅವನ ಮಾಲೀಕರು ಕರೆದುಕೊಂಡು ಬಂದಿದ್ದಾರೆ ಅಲೆಕ್ಸ್ ಮಾರ್ವಾಡ್ ಜಾತಿಗೆ ಸೇರಿದ್ದು, ಈ ಜಾತಿಯ ಕುದುರೆಯನ್ನು ಸಂತಾನಾಭಿವೃದ್ಧಿಗೆ ಹೆಚ್ಚು ಬಳಸಲಾಗುತ್ತದೆ. ಇದೇ ಕಾರಣಕ್ಕೆ ಅವುಗಳ ಬೇಡಿಕೆ ಮತ್ತು ಬೆಲೆ ಹೆಚ್ಚಾಗಿರುತ್ತದೆ. 

ಕುದುರೆಯ ಆರೈಕೆಗೆ ದೊಡ್ಡ ಮೊತ್ತವನ್ನೇ ಮೀಸಲಿರಿಸಬೇಕು
ಅಲೆಕ್ಸ್‌ನ ಮಾಲೀಕ ಅಬ್ದುಲ್ ಮಜೀದ್ ಸೌದಾಗರ್ ಈ ಕುದುರೆಯ ದುಬಾರಿ ಬೆಲೆಗೆ ಮತ್ತೊಂದು ಕಾರಣವನ್ನು ನೀಡಿದ್ದಾರೆ. ಅಲೆಕ್ಸ್ ಆರೈಕೆಗಾಗಿ ಖರ್ಚು ಮಾಡಿದ ಮೊತ್ತವು ದೊಡ್ಡದಾಗಿದೆ ಎಂದು ಅವರು ಹೇಳಿದ್ದಾರೆ. ಅಲೆಕ್ಸ್‌ನನ್ನು ನೋಡಿಕೊಳ್ಳಲು ಇಬ್ಬರು ಪುರುಷರು ದಿನದ 24 ಗಂಟೆಗಳ ಕಾಲ ತೊಡಗಿಸಿಕೊಂಡಿದ್ದಾರೆ. ಇದು ಆರೋಗ್ಯಕರ ಮತ್ತು ಕಠಿಣವಾಗಿ ಉಳಿಯಲು ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಕೇವಲ ಅಲೆಕ್ಷ್ ಬೆಲೆಯೇ ಇಷ್ಟೊಂದು ಜಾಸ್ತಿಯಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ .

ಅಲೆಕ್ಸ್ ಅವರ ತಾತ-ತಂದೆ ಕೂಡ  ಅವನಿಗಿಂತ ಹೆಚ್ಚು ದುಬಾರಿ
ಅಲೆಕ್ಸ್‌ನ ತಂದೆ ದೇವ್ಲಿ ಬೆಲೆ ಕೂಡ 1.26 ಕೋಟಿ ರೂ. ನಿಗದಿಪಡಿಸಲಾಗಿತ್ತು ಆದರೆ ಅಲೆಕ್ಸ್ ಅಜ್ಜನ ಬೆಲೆ ಬೆಲೆ ಮಾತ್ರ 10 ಕೋಟಿ ರೂ.ತಲುಪಿತ್ತು ಎಂದು ಹೇಳಿದರೆ ನೀವೂ ನಿಬ್ಬೇರಗಾಗುವಿರಿ.

ಇದನ್ನೂ ಓದಿ-Horrible Video: ಹಾವಿನಿಂದ ಸ್ಕಿಪ್ಪಿಂಗ್​ ಆಡಿದ ಯುವಕ.. ಸ್ವಲ್ಪ ಯಾಮಾರಿದ್ರೂ ಇತ್ತು ಪ್ರಾಣಕ್ಕೆ ಕಂಟಕ!

ಮಾರ್ವಾಡಿ ಕುದುರೆಗಳ ಕುರಿತು ಸಂಶೋಧನೆ
ಮಾರ್ವಾಡಿ ಕುದುರೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಸಂಶೋಧನೆ ನಡೆಯುತ್ತಿದೆ. ಮಹಾರಾಣಾ ಪ್ರತಾಪ್‌ನ ಚೇತಕ್ ಕುದುರೆಯೂ ಮಾರ್ವಾಡ್ ಜಾತಿಯದ್ದು ಎಂಬುದು ಇಲ್ಲಿ ಉಲ್ಲೇಖನೀಯ. ಈ ಕುದುರೆಗಳ ಶೌರ್ಯ-ಪರಾಕ್ರಮದ ಕಥೆಗಳು ಎಲ್ಲರಿಗೂ ತಿಳಿದಿವೆ. ಮಾರ್ವಾಡ್ ತಳಿಯ ಕುದುರೆಗಳು ಬಹಳ ಚುರುಕು,ಬುದ್ಧಿವಂತ ಮತ್ತು ವೇಗವಾಗಿ ಓಡುತ್ತವೆ.ಈ ಕುದುರೆಗಳ ಪ್ರಮುಖ ವಿಷಯವೆಂದರೆ ಅವು ಬೇಗನೆ ಸುಸ್ತಾಗುವುದಿಲ್ಲ.

ಇದನ್ನೂ ಓದಿ-Crocodile Fish Viral Video: ಬೇಟೆಯಾಡಿದ ಹಸಿದ ಮೊಸಳೆಗೆ 860 ವೋಲ್ಟ್‌ಗಳ ಶಾಕ್ ನೀಡಿದ ಮೀನು! ವಾಚ್ ವೈರಲ್ ವಿಡಿಯೋ

ಜಾಕ್ವೆಲಿನ್ ಕುದುರೆಗಿಂತ ಅಲೆಕ್ಸ್ ಹೆಚ್ಚು ದುಬಾರಿಯಾಗಿದೆ
ಇತ್ತೀಚಿನ ದಿನಗಳಲ್ಲಿ ಖ್ಯಾತ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ (Jacqueline Fernandis Horse) ಉಡುಗೊರೆಯಾಗಿ ಬಂದ  ಕುದುರೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಜಾಕ್ವೆಲಿನ್ ಅವರ ಕುದುರೆಯ ಬೆಲೆ 50 ಲಕ್ಷ ರೂಪಾಯಿ ಎನ್ನಲಾಗಿದೆ. ಆದರೆ ಅಲೆಕ್ಸ್ ಜಾಕ್ವೆಲಿನ್ ಕುದುರೆಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಮೌಲ್ಯಯುತವಾಗಿದೆ.

ಇದನ್ನೂ ಓದಿ-Viral video:ಈ ಬೀದಿ ಬದಿ ವ್ಯಾಪಾರಿ ತಯಾರಿಸುತ್ತಾರೆ ಮಿರಿಂಡಾ ಗೊಲ್ಗಪ್ಪಾ! ನೀವು ಎಂದಾದರೂ ಸವಿದಿದ್ದೀರಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News