ಚಾರ್ಟ್ ರೆಡಿ ಆದ ನಂತರವೂ ಸಿಗುತ್ತೆ ಟಿಕೆಟ್; ಏನಿದು ರೈಲ್ವೆಯ ಹೊಸ ಪ್ಲಾನ್!

ಚಾರ್ಟ್ ಸಿದ್ಧಪಡಿಸಿದ ಬಳಿಕವೂ ಈಗ ನೀವು ರೈಲಿನಲ್ಲಿ ಸೀಟ್ ಪಡೆಯಲು ಸಾಧ್ಯವಾಗುತ್ತದೆ.

Last Updated : Jan 13, 2020, 09:57 AM IST
ಚಾರ್ಟ್ ರೆಡಿ ಆದ ನಂತರವೂ ಸಿಗುತ್ತೆ ಟಿಕೆಟ್; ಏನಿದು ರೈಲ್ವೆಯ ಹೊಸ ಪ್ಲಾನ್! title=

ನವದೆಹಲಿ: ಹಲವು ಬಾರಿ ನಾವು ಯೋಚಿಸಿಯೂ ಇರುವುದಿಲ್ಲ ಆದರೆ ತಕ್ಷಣ ಎಲ್ಲಾದರು ಹೋಗಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಕೆಲವೊಮ್ಮೆ ಅಂತೂ ನಾವು ಹೊರಡಬೇಕು ಎಂದು ಕೊಳ್ಳುವ ರೈಲಿನ ಚಾರ್ಟ್ ಕೂಡ ರೆಡಿ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ಹೊರಡಬೇಕಾದ ಸ್ಥಿತಿ ಉಂಟಾಗುತ್ತದೆ. ಇನ್ಮುಂದೆ ಈ ರೀತಿಯ ಪರಿಸ್ಥಿತಿಗಳನ್ನೂ ನಿಭಾಯಿಸಲು ಕಷ್ಟ ಪಡುವ ಅಗತ್ಯವಿಲ್ಲ.

ಹೌದು, ನೀವು ಇದ್ದಕ್ಕಿದ್ದಂತೆ ರೈಲು ಮೂಲಕ ಎಲ್ಲೋ ಹೋಗಲು ಬಯಸಿದರೆ ಮತ್ತು ಪ್ರಯಾಣಿಕರ ಪಟ್ಟಿಯ ಚಾರ್ಟ್ ಸಿದ್ಧವಾಗಿದ್ದರೆ, ಅಯ್ಯೋ ಏನ್ ಮಾಡೋದು ಎಂದು ಯೋಚಿಸಬೇಡಿ. ಚಾರ್ಟ್ ಸಿದ್ಧಪಡಿಸಿದ ನಂತರ, ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಲಭ್ಯವಿಲ್ಲ ಮತ್ತು ಆನ್‌ಲೈನ್‌ನಲ್ಲಿ ಲಭ್ಯತೆಯಿರುವುದಿಲ್ಲ. ಆದರೆ ಈಗ ಅಂತಹ ಹತಾಶೆಯಿಂದ ನಿಮ್ಮನ್ನು ರಕ್ಷಿಸಲು, ಭಾರತೀಯ ರೈಲ್ವೆ ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿದೆ. ಚಾರ್ಟ್ ಸಿದ್ಧಪಡಿಸಿದರೂ ಈಗ ನೀವು ರೈಲಿನಲ್ಲಿ ಸೀಟ್ ಪಡೆಯಲು ಸಾಧ್ಯವಾಗುತ್ತದೆ. ಭಾರತೀಯ ರೈಲ್ವೆ - ಭಾರತೀಯ ರೈಲ್ವೆ ಆನ್‌ಲೈನ್‌ನಲ್ಲಿ ಮೀಸಲಾತಿ ಪಟ್ಟಿಯನ್ನು ತೋರಿಸಲಾರಂಭಿಸಿದೆ. ಇದರರ್ಥ ಆಸನಗಳ ಬಗ್ಗೆ ಮಾಹಿತಿ ಪಡೆದ ಬಳಿಕ ನೀವು ಖಾಲಿ ಸೀಟ್ ಗಳಿಗೆ ಟಿಕೆಟ್ ಖರೀದಿಸಲು ಸಾಧ್ಯವಾಗುತ್ತದೆ.

ಖಾಲಿ, ಬುಕ್ ಮಾಡಿದ ಮತ್ತು ಭಾಗಶಃ ಬುಕ್ ಮಾಡಿದ ಬೆರ್ತ್ ಮಾಹಿತಿ:
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಪ್ರಯಾಣಿಕರಿಗೆ ಈಗ ಖಾಲಿ, ಬುಕ್ ಮಾಡಿದ ಮತ್ತು ಭಾಗಶಃ ಬುಕ್ ಮಾಡಿದ ಬೆರ್ತ್‌ಗಳ ಬಗ್ಗೆ ಮೀಸಲಾತಿ ಪಟ್ಟಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕಾಗಿ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಐಆರ್‌ಸಿಟಿಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರ ಸಹಾಯದಿಂದ, ಆನ್‌ಲೈನ್ ಆಸನಗಳ ಲಭ್ಯತೆಯನ್ನು ಈಗ ಕಾಣಬಹುದು. ಚಾರ್ಟ್ ತಯಾರಿಸಿದ ನಂತರವೂ ಪ್ರಯಾಣಿಕರು ಲಭ್ಯವಿರುವ ಸೀಟ್ ಗಳಿಗೆ ಟಿಕೆಟ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

ಈ ರೀತಿಯಾಗಿ ನೀವು ಸೌಲಭ್ಯವನ್ನು ಪಡೆಯುತ್ತೀರಿ:
ರೈಲ್ವೆ ಅಧಿಕಾರಿಯ ಪ್ರಕಾರ, ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಮೀಸಲಾತಿ ಪಟ್ಟಿಯಲ್ಲಿ ಕಾಣಿಸುತ್ತದೆ. ಹೊಸ ಸೇವೆಯಡಿಯಲ್ಲಿ, ಈಗ ರೈಲ್ವೆ ಅಪ್ಲಿಕೇಶನ್‌ನಲ್ಲಿ, ರೈಲು ಹೊರಡುವ ಅರ್ಧ ಘಂಟೆಯ ಮುಂಚೆಯೇ ಆನ್‌ಲೈನ್ ಆಸನಗಳ ಲಭ್ಯತೆಯನ್ನು ನೀವು ನೋಡಬಹುದು. ಹೊಸ ವೈಶಿಷ್ಟ್ಯವು ಐಆರ್‌ಸಿಟಿಸಿಯ ಇ-ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್‌ನ ವೆಬ್ ಮತ್ತು ಮೊಬೈಲ್ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ. ಹೊಸ ಇಂಟರ್ಫೇಸ್ನಲ್ಲಿ, ಭಾರತೀಯ ರೈಲ್ವೆಯ ಕಾಯ್ದಿರಿಸಿದ ರೈಲುಗಳಲ್ಲಿ ಬಳಸಲಾಗುವ ಎಲ್ಲಾ ಒಂಬತ್ತು ವಿಭಾಗಗಳ ವಿನ್ಯಾಸವನ್ನು ಕಾಣಬಹುದು ಎಂದು ಮಾಹಿತಿ ನೀಡಿದ್ದಾರೆ.
 

Trending News