Tomato Price: ಗ್ರಾಹಕರಿಗೆ ಸಂತಸದ ಸುದ್ದಿ… ಟೊಮ್ಯಾಟೋ ಬೆಲೆ ಭಾರೀ ಕುಸಿತ! ಕೆಜಿ ಬೆಲೆ ಎಷ್ಟಾಗಿದೆ ಗೊತ್ತಾ?

Tomato Price: ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 300 ರೂ.ವರೆಗೆ ಮಾರಾಟವಾಗುತ್ತಿರುವ ಟೊಮೆಟೊ ಬೆಲೆಯಿಂದ ಕಂಗಾಲಾಗಿರುವ ಜನರಿಗೆ ತಕ್ಷಣದ ಪರಿಹಾರ ನೀಡಲು ದೆಹಲಿ ಸರ್ಕಾರದ ನಿರಂತರ ಪ್ರಯತ್ನದ ಬಳಿಕ ಕೆಲವು ಸ್ಥಳಗಳಲ್ಲಿ ಅಗ್ಗ ಬೆಲೆಗೆ ಟೊಮೆಟೊಗಳು ಲಭ್ಯವಾಗಿದೆ.

Written by - Bhavishya Shetty | Last Updated : Jul 15, 2023, 09:56 AM IST
    • ವಾತಾವರಣದ ವೈಪರೀತ್ಯ ಹಿನ್ನೆಲೆಯಲ್ಲಿ ಟೊಮ್ಯಾಟೋ ಬೆಲೆ ಭಾರೀ ಏರಿಕೆ ಕಂಡಿತ್ತು
    • ಹೆಚ್ಚಿದ ಟೊಮೆಟೊ ಬೆಲೆ ಇಳಿಕೆಯಾಗುವ ಲಕ್ಷಣ ಭಾರೀ ಕಡಿಮೆ ಇದೆ
    • ಅನೇಕ ಜನರು ತಮ್ಮ ತಮ್ಮ ಮನೆಗಳಲ್ಲಿ ಆಲೂಗೆಡ್ಡೆ-ಈರುಳ್ಳಿ ಬಳಸಿ ಅಡುಗೆ ಮಾಡುತ್ತಿದ್ದರು
Tomato Price: ಗ್ರಾಹಕರಿಗೆ ಸಂತಸದ ಸುದ್ದಿ… ಟೊಮ್ಯಾಟೋ ಬೆಲೆ ಭಾರೀ ಕುಸಿತ! ಕೆಜಿ ಬೆಲೆ ಎಷ್ಟಾಗಿದೆ ಗೊತ್ತಾ? title=
Tomato Price

Tomato Price in Delhi: ಉತ್ತರ ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ವಿವಿಧ ಸಂದರ್ಭಗಳಿಂದಾಗಿ ಮತ್ತು ವಾತಾವರಣದ ವೈಪರೀತ್ಯ ಹಿನ್ನೆಲೆಯಲ್ಲಿ ಟೊಮ್ಯಾಟೋ ಬೆಲೆ ಭಾರೀ ಏರಿಕೆ ಕಂಡಿತ್ತು. ಹಲವು ದಿನಗಳಿಂದ ಅನೇಕ ಜನರು ತಮ್ಮ ತಮ್ಮ ಮನೆಗಳಲ್ಲಿ ಆಲೂಗೆಡ್ಡೆ-ಈರುಳ್ಳಿ ಬಳಸಿ ಅಡುಗೆ ಮಾಡುತ್ತಿದ್ದರು. ಹೊರತು ಟೊಮ್ಯಾಟೋ ಖರೀದಿಯ ಸಹವಾಸಕ್ಕೇ ಹೋಗುತ್ತಿರಲಿಲ್ಲ.

ಇದನ್ನೂ ಓದಿ: ಕುಳಿತಲ್ಲಿಂದಲೇ PVC Aadhaar Cardಗೆ ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ

ಟೊಮೇಟೊ ಬೆಲೆ ಏರಿಕೆಯಿಂದ ಎಲ್ಲರೂ ಕಂಗಾಲಾಗಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 300 ರೂ.ವರೆಗೆ ಮಾರಾಟವಾಗುತ್ತಿರುವ ಟೊಮೆಟೊ ಬೆಲೆಯಿಂದ ಕಂಗಾಲಾಗಿರುವ ಜನರಿಗೆ ತಕ್ಷಣದ ಪರಿಹಾರ ನೀಡಲು ದೆಹಲಿ ಸರ್ಕಾರದ ನಿರಂತರ ಪ್ರಯತ್ನದ ಬಳಿಕ ಕೆಲವು ಸ್ಥಳಗಳಲ್ಲಿ ಅಗ್ಗ ಬೆಲೆಗೆ ಟೊಮೆಟೊಗಳು ಲಭ್ಯವಾಗಿದೆ.

ಸರ್ಕಾರದ ಉಪಕ್ರಮದಿಂದಾಗಿ, ದೆಹಲಿ-ಎನ್‌ ಸಿ ಆರ್‌ ನ ಕೆಲವು ಪ್ರದೇಶಗಳಲ್ಲಿ ಟೊಮೆಟೊವನ್ನು ಕೆಜಿಗೆ 90 ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಶುಕ್ರವಾರದಿಂದ ದೆಹಲಿಯಲ್ಲಿ ಅಗ್ಗದ ಟೊಮೆಟೊ ಮಾರಾಟ ಆರಂಭವಾಗಿದೆ. ಜನರಿಗೆ ಪರಿಹಾರ ನೀಡುವ ಸಲುವಾಗಿ, ಗ್ರಾಹಕ ವ್ಯವಹಾರಗಳ ಸಚಿವಾಲಯವು ಕಳೆದ ಬುಧವಾರ ನಾಫೆಡ್ ಮತ್ತು ಎನ್‌ ಸಿ ಸಿ ಎಫ್‌ ಗೆ ಅಗ್ಗದ ಟೊಮೆಟೊಗಳನ್ನು ನೀಡಲು ಈ ವಿಷಯದ ಕುರಿತು ಮಾರ್ಗಸೂಚಿಗಳನ್ನು ನೀಡಿತ್ತು. ತನ್ನ ಆದೇಶದಲ್ಲಿ, ಸಚಿವಾಲಯವು ಇತರ ರಾಜ್ಯಗಳಿಂದ ಟೊಮೆಟೊಗಳನ್ನು ಖರೀದಿಸಲು ಮತ್ತು ದೆಹಲಿ-ಎನ್‌ ಸಿ ಆರ್‌ ನಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡಲು ಸೂಚನೆ ನೀಡಿದೆ.

ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯೂಮರ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್) ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಟೊಮೆಟೊಗಳ ರವಾನೆಗೆ ಆದೇಶ ನೀಡಿದೆ. ಇದರ ನಂತರ, ಓಖ್ಲಾ ಮತ್ತು ನೆಹರು ಪ್ಲೇಸ್‌ನಂತಹ ಪ್ರದೇಶಗಳಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ದೆಹಲಿ-ಎನ್‌ಸಿಆರ್‌ನಲ್ಲಿ ಸುಮಾರು 20 ಮೊಬೈಲ್ ವ್ಯಾನ್‌ ಗಳನ್ನು ಸಹ ನಿಯೋಜಿಸಲಾಗಿದೆ. ಈ ಮೂಲಕ ಹೊರ ರಾಜ್ಯಗಳಿಂದ ತಂದಿರುವ ಟೊಮೆಟೊ ದಾಸ್ತಾನು ಕೆಜಿಗೆ 90 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.

ದೇಶಾದ್ಯಂತ ಬೆಲೆ ಏರಿಕೆ:

ಇತ್ತೀಚಿನ ಬೆಲೆಯ ಬಗ್ಗೆ ಮಾತನಾಡುವುದಾದರೆ, ದೆಹಲಿಯ ಮಂಡಿಗಳಲ್ಲಿ ಕೆಜಿಗೆ 200 ರೂ. ಇದೆ. ಗಾಜಿಯಾಬಾದ್‌ ನಲ್ಲಿ ಕೆಜಿಗೆ 250 ರೂ., ಚಂಡೀಗಢದಲ್ಲಿ ಕೆಜಿಗೆ 300-350 ಮತ್ತು ಲಕ್ನೋದಲ್ಲಿ 160-180 ರೂ.ಗೆ ಮಾರಾಟವಾಗುತ್ತಿದೆ. ಇದೇ ವೇಳೆ ಬೇಳೆಕಾಳು ಮತ್ತಿತರ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ ಎನ್ನುತ್ತಾರೆ ಜನಸಾಮಾನ್ಯರು.

ಇದನ್ನೂ ಓದಿ: ಓಲಾ ಊಬರ್‌ಗೆ ಸೆಡ್ಡು ಹೊಡೆದ‌ ನಮ್ಮ ಯಾತ್ರಿ ಆಟೋ ಆ್ಯಪ್

ಈ ಮಧ್ಯೆ, ಹೆಚ್ಚಿದ ಟೊಮೆಟೊ ಬೆಲೆ ಇಳಿಕೆಯಾಗುವ ಲಕ್ಷಣ ಭಾರೀ ಕಡಿಮೆ ಇದೆ. ಸುಮಾರು 2 ತಿಂಗಳವರೆಗೆ, ಟೊಮ್ಯಾಟೊ ಬೆಲೆ ಈ ರೀತಿ ಹೆಚ್ಚಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ನ್ಯಾಷನಲ್ ಕಮಾಡಿಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್‌ನ ಸಿಇಒ ಸಂಜಯ್ ಗುಪ್ತಾ ಪ್ರಕಾರ, ಟೊಮೆಟೊ ಬೆಲೆ ಇನ್ನೂ ಹೆಚ್ಚಾಗಬಹುದು. ಕೆಜಿಗೆ 300 ರೂ ತಲುಪಬಹುದು ಎಂದು ಅಂದಾಜಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News