ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಆಕ್ಸಿಜಿನ್ ಟ್ಯಾಂಕರ್ ಸೋರಿಕೆ, 22 ಕೊರೊನಾ ರೋಗಿಗಳ ಸಾವು

 ಆಮ್ಲಜನಕದ ಕೊರತೆಯಿಂದಾಗಿ ಇಪ್ಪತ್ತೆರಡು ಕೊರೊನಾ ರೋಗಿಗಳು ಇಂದು ಸಾವನ್ನಪ್ಪಿದ್ದಾರೆ ಎಂದು ನಾಸಿಕ್ ನ ಜಿಲ್ಲಾಧಿಕಾರಿ ಹೇಳಿದ್ದಾರೆ.ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕರ್ ಸೋರಿಕೆಯಾದ ನಂತರ ಸುಮಾರು 30 ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದೆ ಎನ್ನಲಾಗಿದೆ.

Last Updated : Apr 21, 2021, 03:48 PM IST
  • ಆಮ್ಲಜನಕದ ಕೊರತೆಯಿಂದಾಗಿ ಇಪ್ಪತ್ತೆರಡು ಕೊರೊನಾ ರೋಗಿಗಳು ಇಂದು ಸಾವನ್ನಪ್ಪಿದ್ದಾರೆ ಎಂದು ನಾಸಿಕ್ ನ ಜಿಲ್ಲಾಧಿಕಾರಿ ಹೇಳಿದ್ದಾರೆ.
  • ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕರ್ ಸೋರಿಕೆಯಾದ ನಂತರ ಸುಮಾರು 30 ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಆಕ್ಸಿಜಿನ್ ಟ್ಯಾಂಕರ್ ಸೋರಿಕೆ, 22 ಕೊರೊನಾ ರೋಗಿಗಳ ಸಾವು  title=

ನವದೆಹಲಿ: ಆಮ್ಲಜನಕದ ಕೊರತೆಯಿಂದಾಗಿ ಇಪ್ಪತ್ತೆರಡು ಕೊರೊನಾ ರೋಗಿಗಳು ಇಂದು ಸಾವನ್ನಪ್ಪಿದ್ದಾರೆ ಎಂದು ನಾಸಿಕ್ ನ ಜಿಲ್ಲಾಧಿಕಾರಿ ಹೇಳಿದ್ದಾರೆ.ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕರ್ ಸೋರಿಕೆಯಾದ ನಂತರ ಸುಮಾರು 30 ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: Coronavirus: ಈವರೆಗಿನ ಎಲ್ಲಾ ದಾಖಲೆ ಮುರಿದ ಕರೋನಾ ಸುನಾಮಿ

ಮೃತಪಟ್ಟಿರುವವರೆಲ್ಲರೂ ವೆಂಟಿಲೇಟರ್‌ಗಳಲ್ಲಿದ್ದರು ಮತ್ತು ನಿರಂತರ ಆಮ್ಲಜನಕದ ಪೂರೈಕೆಯ ಅಗತ್ಯವಿತ್ತು. ನಗರದ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಇದು ಕೋವಿಡ್ ಮೀಸಲಾದ ಆಸ್ಪತ್ರೆಯಾಗಿದ್ದು ಸುಮಾರು 150 ಕೊರೊನಾ (COVID-19) ರೋಗಿಗಳು ವೆಂಟಿಲೇಟರ್‌ಗಳ ಮೇಲೆ ಇದ್ದರು.

ಇದನ್ನೂ ಓದಿ: Corona Vaccine- Covishield ಲಸಿಕೆಯ ದರ ನಿಗದಿಗೊಳಿಸಿದ ಸೀರಮ್ ಇನ್ಸ್ಟಿಟ್ಯೂಟ್

ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಅವರು ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದು, "'ನಮ್ಮೊಂದಿಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ನಾಸಿಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದ 11 ರೋಗಿಗಳು ಸಾವನ್ನಪ್ಪಿದ್ದಾರೆ. ಈ ರೋಗಿಗಳಿಗೆ ಆಮ್ಲಜನಕವನ್ನು ಪೂರೈಸುತ್ತಿದ್ದ ಆಮ್ಲಜನಕ ತೊಟ್ಟಿಯಲ್ಲಿ ಸೋರಿಕೆ ಕಂಡುಬಂದಿದೆ. ತನಿಖೆ ಮುಗಿದ ನಂತರ ನಾವು ಹೇಳಿಕೆ ನೀಡುತ್ತೇವೆ" ಎಂದು ಟೊಪೆ ಹೇಳಿದರು.

ಇದನ್ನೂ ಓದಿ: Coronavirus : ದೆಹಲಿ ಬಳಿಕ ಸಂಪೂರ್ಣ ಲಾಕ್ ಡೌನ್ ನತ್ತ ಮಹಾರಾಷ್ಟ್ರ.!

ಆಸ್ಪತ್ರೆಯ ದೃಶ್ಯಗಳು ಟ್ಯಾಂಕರ್‌ನಿಂದ ವೇಗವಾಗಿ ಅನಿಲ ಸೋರಿಕೆಯಾಗುವುದನ್ನು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಬಿಳಿ ಹೊಗೆಯಲ್ಲಿ ಆವರಿಸುವುದನ್ನು ತೋರಿಸುತ್ತವೆ.ಆಮ್ಲಜನಕ ಅಗತ್ಯವಿರುವ 80 ರಲ್ಲಿ 31 ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.ಇದೇ ವೇಳೆ ಟ್ಯಾಂಕರ್ ಸೋರಿಕೆಗೆ ಕಾರಣರಾದ ಜನರಿಗೆ ಶಿಕ್ಷೆಯಾಗಬೇಕು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮಜೀದ್ ಮೆಮನ್ ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News