ನವದೆಹಲಿ: ಕಳೆದ ಎರಡು ವರ್ಷದಿಂದ 14 ಜನರನ್ನು ಕೊಂದು ತಿಂದು ಭೀತಿ ಹುಟ್ಟಿಸಿದ್ದ ಹೆಣ್ಣು ಹುಲಿ ಅವ್ನಿ ಕಡೆಗೂ ಅರಣ್ಯಾಧಿಕಾರಿಗಳ ಗುಂಡೇಟಿಗೆ ಬಲಿಯಾಗಿದ್ದಾಳೆ.
ಮಹಾರಾಷ್ಟ್ರದ ಯಾವಟ್ಮಾಲ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಶುಕ್ರವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಹೆಣ್ಣು ಅವ್ನಿ ಗುಂಡೇಟಿಗೆ ಬಲಿಯಾಗಿದ್ದಾಳೆ. ಜೀವಂತವಾಗಿ ಅದನ್ನು ಹಿಡಿದು ರಕ್ಷಿಸಬೇಕು ಎಂಬ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗಿತ್ತಾದರೂ, ವ್ಯಾಘ್ರ ತೋರಿದ ಕ್ರೂರತನಕ್ಕೆ ಅನಿವಾರ್ಯವಾಗಿ ಕೊಲ್ಲಲಾಗಿದೆ.
#FirstVisuals of 'man-eater' tigress Avni (T1) that was killed in Maharashtra's Yavatmal last night. She had allegedly killed 14 people. Her postmortem will be conducted at Nagpur's Gorewada Rescue Centre. #Maharashtra pic.twitter.com/eH1jDLf511
— ANI (@ANI) November 3, 2018
ಈ ಕಾರ್ಯಾಚರಣೆಯಲ್ಲಿ ಮಧ್ಯಪ್ರದೇಶದಿಂದ ನಾಲ್ಕು ಆನೆ ಕರೆಸಲಾಗಿತ್ತು. ಜತೆಗೆ ಐವರು ಶಾರ್ಪ್ ಶೂಟರ್ಗಳು, ಶ್ವಾನಗಳು, ಹ್ಯಾಂಗ್ ಗ್ಲೈಡರ್ ಮೂರು ದೊಡ್ಡ ಬೋನ್ಗಳೊಂದಿಗೆ 500 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ, 7 ಕ್ಯಾಮರಾಮನ್ಗಳು ಸಹ ಹುಲಿಯ ಚಲನವಲನ ಸೆರೆಹಿಡಿಯಲು ಪಾಲ್ಗೊಂಡಿದ್ದರು.
2012ರಲ್ಲಿ ಮೊದಲ ಬಾರಿಗೆ ಯಾವತ್ಮಲ್ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಅವ್ನಿ, 13 ಜನರನ್ನು ಕೊಂಡು ತಿಂದಿದ್ದಳು. ಇದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿತ್ತು. ಹೀಗಾಗಿ ಹತ್ತು ತಿಂಗಳ ಎರಡು ಮರಿಗಳಿದ್ದ ಅವ್ನಿ ಅಥವಾ ಟಿ1 ಹೆಸರಿನ ಈ ಹೆಣ್ಣು ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಿ ಎಂದು ಸೆಪ್ಟೆಂಬರ್ನಲ್ಲಿ ಸುಪ್ರೀಂ ತೀರ್ಪು ನೀಡಿತ್ತು. ಈ ತೀರ್ಪಿಗೆ ಆನ್ಲೈನ್ನಲ್ಲಿ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು.