ನವದೆಹಲಿ: ಭಾನುವಾರದಂದು ಹಂಪಿ ಎಕ್ಸ್ ಪ್ರೆಸ್ ಪ್ರಯಾಣದಲ್ಲಿ ವಿಳಂಬವಾದ ಕಾರಣ ಪರೀಕ್ಷೆ ತಪ್ಪಿಸಿಕೊಂಡಿದ್ದ ಸುಮಾರು 500 ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಘೋಷಿಸಿದ್ದಾರೆ.
ಬೆಂಗಳೂರಿಗೆ ಹಂಪಿ ಎಕ್ಸ್ಪ್ರೆಸ್ 2:30 ಕ್ಕೆ ತಲುಪಿದ ಹಿನ್ನಲೆಯಲ್ಲಿ ಆದರೆ ನೀಟ್ ಪರೀಕ್ಷೆ ನಿಗದಿತ ವೇಳೆಯನ್ವಯ 1.30ಕ್ಕೆ ಹಾಜರಾಗಬೇಕಾಗಿದ್ದ ಸುಮಾರು 500 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಿದ್ದರು.ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವರು ಖಂಡಿಸಿದ್ದಲ್ಲದೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಮತ್ತೊಂದು ಅವಕಾಶ ನೀಡಬೇಕೆಂದು ಹೇಳಿದ್ದರು.
Happy to announce that #Karnataka Students who missed #NEET exam , due to railway delay will get another chance.@MoHFW_INDIA @HRDMinistry @PIB_India @MIB_India @DG_NTA @cbseindia29 @ciet_ncert @DDNewsLive @airnewsalerts @DVSBJP@CMofKarnataka
— Chowkidar Prakash Javadekar (@PrakashJavdekar) May 6, 2019
ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಪ್ರಕಾಶ್ ಜಾವಡೆಕರ್ ಟ್ವೀಟ್ ಮಾಡಿ " ರೈಲಿನ ವಿಳಂಬ ಸಂಚಾರದಿಂದ ನೀಟ್ ಪರೀಕ್ಷೆ ತಪ್ಪಿಸಿಕೊಂಡ ಕರ್ನಾಟಕದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಮತ್ತೊಂದು ಅವಕಾಶ ನೀಡಲಾಗುವುದು ಎಂದು ಘೋಶಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ರೈಲು ವಿಳಂಬವಾಗಿದ್ದಕ್ಕೆ ಟ್ವೀಟ್ ಮಾಡಿ "ನರೇಂದ್ರ ಮೋದಿಯವರೇ, ನೀವು ಇತರರ ಸಾಧನೆಗಳಿಗೆ ನಿಮ್ಮ ಬೆನ್ನನ್ನು ತಟ್ಟಿಕೊಂಡು ತೃಪ್ತಿಪಡುತ್ತೀರಿ.ಈಗ ನಿಮ್ಮ ಕ್ಯಾಬಿನೆಟ್ ಸಚಿವರ ಅಸಮರ್ಥತೆಗಳಿಗೆ ನೀವು ಜವಾಬ್ದಾರಿ ತೆಗೆದುಕೊಳ್ಳಿ. ರೈಲಿನ ಸೇವೆಗಳ ವಿಳಂಬದ ಕಾರಣ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. "ಎಂದು ಟ್ವೀಟ್ ಮಾಡಿದ್ದರು.