ವಿದ್ಯುತ್ ಕಳುವಿನಲ್ಲಿ ಈ ರಾಜ್ಯ ನಂ.1

ಕೇಂದ್ರದ ರಾಜ್ಯ ಇಂಧನ ಸಚಿವ ಆರ್.ಕೆ. ಸಿನ್ಹಾ ಮುಖ್ಯ ಕಾರ್ಯದರ್ಶಿಯೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಸಂದರ್ಭದಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಕೆಂಡಾಮಂಡಲರಾದರು. 

Last Updated : Apr 6, 2018, 01:21 PM IST
ವಿದ್ಯುತ್ ಕಳುವಿನಲ್ಲಿ ಈ ರಾಜ್ಯ ನಂ.1  title=

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಕಳ್ಳರದ್ದೆ ಹಾವಳಿ. ಅದಕ್ಕೆ ವಿದ್ಯುತ್ ಏನೂ ಹೊರತಾಗಿಲ್ಲ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ದೇಶದಲ್ಲೇ ವಿದ್ಯುತ್ ಕಳ್ಳತನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯ ಸರ್ಕಾರದ ಪ್ರಯತ್ನಗಳ ಹೊರತಾಗಿಯೂ, ರಾಜ್ಯದ 14 ಕ್ಷೇತ್ರಗಳಲ್ಲಿ, ವಿದ್ಯುತ್ ಕದಿಯುವಿಕೆಯು ನಿರಂತರವಾಗಿ ನಡೆಯುತ್ತಿದೆ. ಕೇಂದ್ರದ ರಾಜ್ಯ ಇಂಧನ ಸಚಿವ ಆರ್.ಕೆ. ಸಿನ್ಹಾ ಮುಖ್ಯ ಕಾರ್ಯದರ್ಶಿಯೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಸಂದರ್ಭದಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಕೆಂಡಾಮಂಡಲರಾದರು. ಜೊತೆಗೆ  ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಈ ವಿದ್ಯುತ್ ಕಳ್ಳತನವನ್ನು ತಡೆಗಟ್ಟಲು ರಾಜ್ಯ ಕೈಗೊಂಡಿರುವ ಕ್ರಮಗಳನ್ನು ಪ್ರಶ್ನಿಸಿದರು.

150 ನಗರಗಳಲ್ಲಿ ಉತ್ತರಪ್ರದೇಶದ 48 ನಗರಗಳು
ಇತ್ತೀಚಿಗೆ ನಡೆಸಿದ ಸಮೀಕ್ಷೆ ಪ್ರಕಾರ, ದೇಶದಲ್ಲಿ 150 ನಗರಗಳಲ್ಲಿ 40% ಕ್ಕಿಂತ ಹೆಚ್ಚು ವಿದ್ಯುತ್ ನಷ್ಟ  ಕಂಡು ಬಂದಿದೆ. ಇದರಲ್ಲಿ ಉತ್ತರಪ್ರದೇಶದ ಒಂದರಲ್ಲೇ 48 ಜಿಲ್ಲೆಗಳು ಸೇರಿವೆ.

ಇಂಧನ ಸಚಿವರ ತವರು ಜಿಲ್ಲೆ ಸಹ ಶಾಮೀಲು
ಮಾಹಿತಿ ಪ್ರಕಾರ, ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಮಥುರಾ ಜಿಲ್ಲೆಯವರಾಗಿದ್ದು, ವಿದ್ಯುತ್ ಕಳ್ಳತನದ ಪ್ರಕರಣದಲ್ಲಿ ಮಥುರಾ ಎರಡನೆಯದಾಗಿದೆ. ಕೇಂದ್ರ ರಾಜ್ಯ ಸಚಿವ ಆರ್.ಕೆ. ಸಿನ್ಹಾ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಈ ಪ್ರಕರಣಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಸುಧಾರಣಾ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ.

ಅಧಿಕಾರಿಗಳಿಗೆ ಫುಲ್ ಕ್ಲಾಸ್
ಕೇಂದ್ರ ಸಚಿವ ಯುಪಿಯಲ್ಲಿ ನಡೆಯುತ್ತಿರುವ ಈ ಹಾವಳಿಗೆ ಸುಧಾರಣಾ ಪ್ರಕ್ರಿಯೆಯನ್ನು ಕಾನ್ಫರೆನ್ಸ್ ನಲ್ಲಿ ಪ್ರಶ್ನಿಸಿದ ನಂತರ, ಮುಖ್ಯ ಕಾರ್ಯದರ್ಶಿ ಇಂಧನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರನ್ನು ಆಹ್ವಾನಿಸಿ ಈ ಬಗ್ಗೆ ಸೂಕ್ತ ಕ್ರಮತೆಗೆದುಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.

ವಿದ್ಯುತ್ ಕಳವಿನ ಹಾವಳಿ ಕಡಿಮೆಯಾಗದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಎಚ್ಚರಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಮಾಹಿತಿ ಪ್ರಕಾರ, ಸಿದ್ಧಾರ್ಥ್ನಗರ 79% ಮತ್ತು ಶಾಮ್ಲಿ ಕುಟುಂಬದ 66% ಇನ್ನೂ ಬಿಜ್ಲಾ ಮೀಟರ್ ತಲುಪಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ, ವಿದ್ಯುಚ್ಛಕ್ತಿ ಕಳ್ಳತನ ನಿಲ್ಲಿಸಲು ವಿದ್ಯುತ್ ಇಲಾಖೆ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.

Trending News