Pension Scheme : ಈ ಯೋಜನೆಯಲ್ಲಿ 210 ರೂ. ಹೂಡಿಕೆ ಮಾಡಿ ತಿಂಗಳಿಗೆ 5,000 ರೂ. ಪಿಂಚಣಿ ಪಡೆಯಿರಿ!

ಅಟಲ್ ಪಿಂಚಣಿ ಯೋಜನೆ, ಹಿಂದೆ ಸ್ವವಲಂಬನ್ ಯೋಜನೆ ಎಂದು ಕರೆಯಲಾಗುತ್ತಿತ್ತು, ಇದು ಸರ್ಕಾರಿ ಬೆಂಬಲಿತ ಪಿಂಚಣಿ ಯೋಜನೆಯಾಗಿದ್ದು, ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 9 ಮೇ 2015 ರಂದು ಕೋಲ್ಕತ್ತಾದಲ್ಲಿ ಪ್ರಾರಂಭಿಸಿದರು.

Written by - Channabasava A Kashinakunti | Last Updated : Aug 15, 2021, 04:46 PM IST
  • ಅಟಲ್ ಪಿಂಚಣಿ ಯೋಜನೆ, ಹಿಂದೆ ಸ್ವವಲಂಬನ್ ಯೋಜನೆ
  • ಹೂಡಿಕೆದಾರರು ನಿವೃತ್ತಿಯ ನಂತರ 5,000 ರೂ. ಪಿಂಚಣಿ
  • 60 ವರ್ಷಕ್ಕಿಂತ ಮೇಲ್ಪಟ್ಟವರು ಸಾಯುವವರೆಗೆ ಮಾಸಿಕ ಪಿಂಚಣಿ
Pension Scheme : ಈ ಯೋಜನೆಯಲ್ಲಿ 210 ರೂ. ಹೂಡಿಕೆ ಮಾಡಿ ತಿಂಗಳಿಗೆ 5,000 ರೂ. ಪಿಂಚಣಿ ಪಡೆಯಿರಿ! title=

ನವದೆಹಲಿ : ಸ್ಥಿರ ಆದಾಯ ಹೊಂದಿರುವ ಯಾರಾದರೂ ತಮ್ಮ ನಿವೃತ್ತಿಯ ನಂತರ ಅವರಿಗೆ ಸಹಾಯ ಮಾಡುವ ಯೋಜನೆ ಅಥವಾ ಹಣಕಾಸು ಸಾಧನದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಉತ್ತಮ ಆದಾಯ ನೀಡುವ ಯೋಜನೆಗಳ ಬಗ್ಗೆ ಮಾಹಿತಿ ತಂದಿದ್ದೇವೆ. ನೀವು ಅಂಥದ್ದನ್ನು ಹುಡುಕುತ್ತಿದ್ದರೆ ನೀವು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಅಟಲ್ ಪಿಂಚಣಿ ಯೋಜನೆ(Atal Pension Yojana), ಹಿಂದೆ ಸ್ವವಲಂಬನ್ ಯೋಜನೆ ಎಂದು ಕರೆಯಲಾಗುತ್ತಿತ್ತು, ಇದು ಸರ್ಕಾರಿ ಬೆಂಬಲಿತ ಪಿಂಚಣಿ ಯೋಜನೆಯಾಗಿದ್ದು, ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 9 ಮೇ 2015 ರಂದು ಕೋಲ್ಕತ್ತಾದಲ್ಲಿ ಪ್ರಾರಂಭಿಸಿದರು.

ಇದನ್ನೂ ಓದಿ : ಈಗ ಲಭ್ಯವಿಲ್ಲ ಆಧಾರ್ ಗೆ ಸಂಬಂಧಿಸಿದ ಈ ಸೇವೆ , ಬಳಕೆದಾರರ ಮೇಲೆ ಆಗಲಿದೆ ಪರಿಣಾಮ

ಗಣಿಗಾರಿಕೆ, ಉತ್ಪಾದನೆ, ನಿರ್ಮಾಣ ಮುಂತಾದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮತ್ತು 18-40 ವರ್ಷ ವಯಸ್ಸಿನ ಯಾವುದೇ ಭಾರತೀಯರು ಈ ಯೋಜನೆ(Yojana)ಯ ಪ್ರಯೋಜನಗಳನ್ನು ಪಡೆಯಬಹುದು. ಹೂಡಿಕೆದಾರರು ನಿವೃತ್ತರಾದ ನಂತರ ಅಥವಾ 60 ವರ್ಷದ ತಕ್ಷಣ ಪಿಂಚಣಿ ಪಡೆಯಬಹುದು.

60 ವರ್ಷಕ್ಕಿಂತ ಮೇಲ್ಪಟ್ಟವರು ಸಾಯುವವರೆಗೆ ಮಾಸಿಕ ಪಿಂಚಣಿ ಪಡೆಯಬಹುದು. ಒಂದು ವೇಳೆ, ಹೂಡಿಕೆ(Investment)ದಾರರು ಮರಣ ಹೊಂದಿದರೆ ಮತ್ತು ಪತಿ/ಪತ್ನಿಗೆ ಸಾಯುವವರೆಗೂ ಪಿಂಚಣಿ ಪಡೆಯುತ್ತಾರೆ. ಹೂಡಿಕೆದಾರರು ಜೀವಿತಾವಧಿಯಲ್ಲಿ ಇಡೀ ಮೊತ್ತವನ್ನು ನಾಮಿನಿಗೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ : Viral Video: ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಲಿಫ್ಟ್ ನೊಳಗೆ ಕುಳಿತ ವಧು..!

ತಿಂಗಳಿಗೆ 210 ರೂ. ಹೂಡಿಕೆ ಮಾಡಿ 5,000 ರೂ. ಪಿಂಚಣಿ ಪಡೆಯುವ ಮಾರ್ಗಗಳು

ಹೂಡಿಕೆದಾರರು ತಾವು ನಿವೃತ್ತರಾದ ನಂತರ ಎಷ್ಟು ಪಿಂಚಣಿ(Pension) ಪಡೆಯಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡುವ ಅಟಲ್ ಪಿಂಚಣಿ ಯೋಜನೆಯಡಿ ಒಂದು ಆಯ್ಕೆಯನ್ನು ಪಡೆಯುವ ಮೂಲಕ ಅದು ಕನಿಷ್ಠ 1,000 ಅಥವಾ ಮಾಸಿಕ 5,000 ರೂ. ಆಗಿರುತ್ತದೆ.

ಹೂಡಿಕೆದಾರರು ನಿವೃತ್ತಿಯ ನಂತರ 5,000 ರೂ. ಪಿಂಚಣಿ ಪಡೆಯಲು ಬಯಸಿದರೆ ಅವರು 18 ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ ತಿಂಗಳಿಗೆ 210 ರೂ. ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಅದರಂತೆಯೇ, 20 ಅಥವಾ 25 ರ ಹೂಡಿಕೆದಾರರು  210 ರೂ.ಗಿಂತ  ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ - ಅಂದರೆ ಕ್ರಮವಾಗಿ 248 ರೂ. ಮತ್ತು 376 ರೂ. ಇದರೊಂದಿಗೆ ಮೊತ್ತವು ಹೆಚ್ಚಾಗುತ್ತದೆ.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ಶೇ.28 ರಷ್ಟು DA ಹಣ ಖಾತೆಗೆ ಜಮಾ; ನಿಮ್ಮ ಸ್ಟೇಟಸ್ ಹೀಗೆ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News