ನವದೆಹಲಿ : ಪ್ರಾಣಿಗಳನ್ನು ನೋಡುವುದೆಂದರೆ ಅದೊಂದು ಅದ್ಭುತ ಅನುಭವ. ಆ ಪ್ರಾಣಿಗಳ (Wild Animal) ಆಟ ತುಂಟಾಟ ನೋಡುವುದೇ ಆನಂದ. ಕೆಲವೊಮ್ಮೆ ಈ ಪ್ರಾಣಿಗಳ ವರ್ತನೆ, ಚಟುವಟಿಕೆಗಳು ಆಶ್ಚರ್ಯವನ್ನು ಉಂಟು ಮಾಡುತ್ತದೆ. ಹೌದು, ನೋಡುಗರಿಗೆ ಪರಮಾಶ್ಚರ್ಯವನ್ನು ಉಂಟು ಮಾಡುವ ವೀಡಿಯೊವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿದರೆ ಈ ಪ್ರಕೃತಿ ಅದೆಷ್ಟು ವಿಚಿತ್ರಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ ಎನ್ನುವ ಪ್ರಶ್ನೆ ಮನಸ್ಸಿಗೆ ಬಾರದೆ ಇರದು. ಯಾಕೆಂದರೆ ಜಿಂಕೆಯೊಂದು (Deer Video) ಗಾಳಿಯಲ್ಲಿ ಸುಮಾರು 7 ಅಡಿ ಎತ್ತರಕ್ಕೆ ಜಿಗಿಯುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ವಿಕ್ಷಿಸಿದ (Viral video)ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದೆ. ಜಿಂಕೆಯೊಂದು ರಸ್ತೆ ದಾಟುವ ಪ್ರಯತ್ನದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಉದ್ದ ಮತ್ತು ಅತಿ ಎತ್ತರ ಜಿಗಿದಿದೆ. ಇದನ್ನ ಸ್ಲೋ ಮೋಶನ್ ನಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋ ವೀಕ್ಷಿಸಿದರೆ ಈ ಜಿಂಕೆ ಗಾಳಿಯಲ್ಲಿ ಹಾರುತ್ತಿರುವಂತೆ ಕಾಣುತ್ತದೆ.
ಇದನ್ನೂ ಓದಿ : Monkeys Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್ ಕೊಟ್ಟು ವಿಡಿಯೋ ತೋರಿಸಿದಾಗ ಹೇಗಿರುತ್ತೆ...! ನೋಡಿ ಈ ತಮಾಷೆಯ ವಿಡಿಯೋ
ಇದ್ದಕ್ಕಿದ್ದಂತೆ ಈ ಜಿಂಕೆ (animal video) ಗಾಳಿಯಲ್ಲಿ ಹಾರಲು ಪ್ರಾರಂಭಿಸಿ, ಅಷ್ಟು ಎತ್ತರಕ್ಕೆ ಜಿಗಿದ ತಕ್ಷಣ, ಅದು ಸುರಕ್ಷಿತವಾಗಿ ವಿರುದ್ಧ ದಿಕ್ಕಿನಲ್ಲಿ ಸುರಕ್ಷಿತವಾಗಿ ಇಳಿದು ಕಾಡು ಸೇರಿದೆ. ಇದೇ ವೇಳೆ ಈ ಕ್ರಿಯೆಯನ್ನು ನೇರಪ್ರಸಾರ ವೀಕ್ಷಿಸಿದ ವ್ಯಕ್ತಿಯೊಬ್ಬರು ದಿಗ್ಭ್ರಮೆಗೊಂಡಿದ್ದಾರೆ. ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ (WildLense Eco Foundation) ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ.
And the gold medal for long & high jump goes to.......@ParveenKaswan
Forwarded as received pic.twitter.com/iY8u37KUxB— WildLense® Eco Foundation 🇮🇳 (@WildLense_India) January 15, 2022
ಜಿಂಕೆಯ ಲಾಂಗ್ ಜಂಪ್ ನೋಡಿದವರಿಗೆ ಆಶ್ಚರ್ಯ :
ಈ ವಿಡಿಯೋ ವೈರಲ್ (Viral video) ಆಗಿದ್ದು, ಜಿಂಕೆಯ ಪರಾಕ್ರಮಕ್ಕೆ ಜನರು ಬೆರಗಾಗಿದ್ದಾರೆ. ಕಾಡಿನಲ್ಲಿ ಯಾವುದೇ ಭಯಾನಕ ಪ್ರಾಣಿಗಳಿಗೆ ಬಲಿಯಾಗುವ ಜಿಂಕೆಗಳು ಅಪಾಯವನ್ನು ಎದುರಿಸುತ್ತದೆ. ಆ ಸಂದರ್ಭದಲ್ಲಿ ಜಿಂಕೆಗಳು ಲಾಂಗ್ ಜಂಪ್ ಮಾಡುವಲ್ಲಿ ಮತ್ತು ವೇಗವಾಗಿ ಓಡುವುದರಲ್ಲಿ ಬಹಳ ಪ್ರವೀಣವಾಗಿರುತ್ತವೆ.
ಇದನ್ನೂ ಓದಿ : Viral Video: ‘ಪುಷ್ಪ’ ಸಿನಿಮಾದ ಮತ್ತೊಂದು ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ತಾಂಜಾನಿಯಾದ ಯುವಕ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.