ಮತ ಚಲಾಯಿಸುವುದಕ್ಕೂ ಮುನ್ನ ಯೋಚಿಸಿ: ಪಶ್ಚಿಮ ಬಂಗಾಳದ ಮುಸ್ಲಿಮರಿಗೆ ಕಳುಹಿಸಿದ ಇಮಾಮ್‌ಗಳಿಂದ 10,000 ಪತ್ರ

ಮುಸ್ಲಿಂ ನಾಯಕರು ಹಾಗೂ ಇಮಾಮ್ ಗಳು ತಮ್ಮ ಸಮುದಾಯದ ಮತದಾರರಿಗೆ 10,000 ಪತ್ರಗಳನ್ನು ಕಳುಹಿಸುವ ಮೂಲಕ ಜಾತ್ಯಾತೀತ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

Last Updated : Apr 27, 2019, 08:40 AM IST
ಮತ ಚಲಾಯಿಸುವುದಕ್ಕೂ ಮುನ್ನ ಯೋಚಿಸಿ: ಪಶ್ಚಿಮ ಬಂಗಾಳದ ಮುಸ್ಲಿಮರಿಗೆ ಕಳುಹಿಸಿದ ಇಮಾಮ್‌ಗಳಿಂದ 10,000 ಪತ್ರ  title=

ಕೋಲ್ಕತ್ತಾ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮುಸ್ಲಿಂ ನಾಯಕರು ಹಾಗೂ ಇಮಾಮ್ ಗಳು ತಮ್ಮ ಸಮುದಾಯದ ಮತದಾರರಿಗೆ 10,000 ಪತ್ರಗಳನ್ನು ಕಳುಹಿಸುವ ಮೂಲಕ ಜಾತ್ಯಾತೀತ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ ಎಂದು ಡಿಎನ್ಎ ಪತ್ರಿಕೆ ವರದಿ ಮಾಡಿದೆ.

ಉರ್ದು ಅಥವಾ ಬಂಗಾಳಿ ಭಾಷೆಗಳಲ್ಲಿ ಬರೆಯಲಾಗಿರುವ ಪತ್ರಗಳಿಗೆ ಖರಿ ಫಾಜ್ಲೂರ್ ರಹಮಾನ್ ಸಹಿ ಹಾಕಿದ್ದು, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಕಳುಹಿಸಿದೆ.  ಕೋಲ್ಕತ್ತಾ ರೆಡ್ ರೋಡ್ ನಲ್ಲಿರುವ ಈದ್ ನಮಾಜ್ ನ ಇಮಾಮ್ ಆಗಿದ್ದಾರೆ. 

"ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಯಾವುದೇ ಪರ್ಯಾಯವಿಲ್ಲ, ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶವನ್ನು ನಾವು ಪಡೆಯುತ್ತೇವೆ. ನೀವು ಮಾಡುವ ಒಂದು ತಪ್ಪನ್ನು ಸರಿಪಡಿಸಲು  ಐದು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಆದ್ದರಿಂದ ನೀವು ನಿಮ್ಮ ಮತ ಚಲಾಯಿಸುವ ಮುನ್ನ ಸರಿಯಾಗಿ ಆಲೋಚಿಸಿ ಮತ ಹಾಕುವ ಅಗತ್ಯವಿದೆ" ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಡಿಎನ್ಎ ವರದಿ ಮಾಡಿದೆ.

"ನಾವು ಮುಸ್ಲಿಮರಿಗೆ ಎಚ್ಚರಿಕೆಯಿಂದ ಮತ ಚಲಾಯಿಸಲು ಮನವಿ ಮಾಡಿದ್ದೇವೆ. ಈ ಮೂಲಕ ದೇಶದಲ್ಲಿ ಯಾವುದೇ ಕೋಮು ಶಕ್ತಿ ತನ್ನ ತಲೆ ಎತ್ತದಂತೆ ಮತ್ತು ಜಾತ್ಯತೀತ ಶಕ್ತಿಯನ್ನು ಅಧಿಕಾರಕ್ಕೆ ತರುವ ಪ್ರಯತ್ನ ನಮ್ಮದಾಗಿದೆ" ಎಂದು ರೆಹಮಾನ್ ಡಿಎನ್ಎಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ  42 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆಯ ಎಲ್ಲಾ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮುಂದಿನ ಹಂತದ ಮತದಾನ  ಏಪ್ರಿಲ್ 29 ರದು ನಡೆಯಲಿದ್ದು, ಕೊಲ್ಕತ್ತಾದಲ್ಲಿ ಮೇ 19 ರಂದು ಚುನಾವಣೆ ನಡೆಯಲಿದೆ.

ಮುಸ್ಲಿಮರಿಗೆ ನೀಡಿದ ಸಂದೇಶದಲ್ಲಿ, ಸಮುದಾಯವು ಒಂದು ಪಕ್ಷಕ್ಕೆ ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಮತ್ತು ಅವರ ಮತಗಳು ವಿಭಜನೆಯಾಗಬಾರದು ಎಂದು ಹೇಳಲಾಗಿದೆ. 

Trending News