ನವದೆಹಲಿ: ದೇಶದಲ್ಲಿ ಮಾತ್ರವಲ್ಲ ಇತರ ದೇಶಗಳ ಜನರು ಸಹ ನೀಮ್ ಕರೋಲಿ ಬಾಬಾರನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಉತ್ತರಾಖಂಡದ ಕೈಂಚಿಯಲ್ಲಿರುವ ಧಾಮಕ್ಕೆ ಅವರ ದರ್ಶನ ಪಡೆಯಲು ಜನರು ದೂರದೂರುಗಳಿಂದ ಬರುತ್ತಾರೆ. ಈ ಬಾಬಾರ ಪವಾಡಗಳು ಇಂದಿಗೂ ಜನಮಾನಸದಲ್ಲಿವೆ. ಇವರ ಕೃಪೆಯಿಂದ ಅನೇಕರು ತಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಂಡಿದ್ದಾರಂತೆ. ಇವರಲ್ಲಿ ನಿಜವಾದ ನಂಬಿಕೆಯಿರುವ ಭಕ್ತರಿಗೆ ಕೆಟ್ಟದ್ದೇನೂ ಆಗಿಲ್ಲವಂತೆ. ಇವರ ಸಲಹೆ ಪಾಲಿಸಿದ ಪ್ರತಿಯೊಬ್ಬರ ಜೀವನ ಸಂತೋಷದಿಂದ ಇದೆಯಂತೆ. ಕರೋಲಿ ಬಾಬಾ ಅವರು ಇತರರಿಗೆ 4 ವಿಷಯಗಳನ್ನು ಅಪ್ಪಿತಪ್ಪಿಯೂ ಹೇಳಬೇಡಿ ಎಂದು ಸಲಹೆ ನೀಡಿದ್ದಾರೆ. ಇವುಗಳ ಬಗ್ಗೆ ತಿಳಿಯಿರಿ.
1. ದಾನದ ಬಗ್ಗೆ ಹೆಮ್ಮೆಪಡಬೇಡಿ
ಅಧ್ಯಾತ್ಮದಲ್ಲಿ ನಂಬಿಕೆ ಇರುವವರು ಸದಾ ದಾನ ಮಾಡುತ್ತಾರೆ. ಆದರೆ ಈ ಜನರಲ್ಲಿ ಕೆಲವರು ತಮ್ಮ ದಾನದ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳುತ್ತಾರೆ. ಆದರೆ ಈ ರೀತಿ ಎಂದಿಗೂ ಮಾಡಬಾರದು. ನೀಮ್ ಕರೋಲಿ ಬಾಬಾರ ಪ್ರಕಾರ, ಇತರರ ಮುಂದೆ ದಾನ ಮತ್ತು ಧರ್ಮದ ಬಗ್ಗೆ ಬಡಾಯಿ ಕೊಚ್ಚಿಕೊಂಡರೆ ನೀವು ನಷ್ಟವನ್ನು ಎದುರಿಸಬಹುದು. ಆಧ್ಯಾತ್ಮಿಕ ಫಲವನ್ನು ಪಡೆಯಲು ನಿಮ್ಮ ದಾನದ ಬಗ್ಗೆ ಯಾರಿಗೂ ಹೇಳಬೇಡಿ. ಇಷ್ಟೇ ಅಲ್ಲ ನೀವು ನಿಮ್ಮ ದಾನದ ಬಗ್ಗೆ ಮಾತನಾಡಿದರೆ, ಅದು ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ಮುಂದೆ ಜೀವನದಲ್ಲಿ ನಕಾರಾತ್ಮಕತೆ ಬರಬಹುದು. ಅಷ್ಟೇ ಅಲ್ಲ ಸಮಾಜದಲ್ಲಿ ಹೀಗೆ ಮಾಡುವವರಿಗೆ ಕೋಪ-ತಾಪಗಳು ಬರಲು ಶುರುವಾಗುತ್ತದಂತೆ.
ಇದನ್ನೂ ಓದಿ: "ಭಾರತ ಮೋದಿಯಂತೆ ನನಗೂ ಸೇರಿದೆ, ಈ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು"
2. ಸಂಬಳ ಅಥವಾ ಆದಾಯ
2ನೇಯ ಪ್ರಮುಖ ವಿಷಯವೆಂದರೆ ಪ್ರತಿಯೊಬ್ಬರೂ ತಮ್ಮ ಆದಾಯದ ಬಗ್ಗೆ ಮೌನಿಯಾಗಿರಬೇಕು. ನಿಮ್ಮ ಸಂಬಳದ ಬಗ್ಗೆ ಯಾರಿಗಾದರೂ ಹೇಳಿದರೆ, ಆ ವ್ಯಕ್ತಿ ನಿಮ್ಮ ಜೀವನ ಮಟ್ಟವನ್ನು ನಿರ್ಣಯಿಸಲು ಪ್ರಾರಂಭಿಸುತ್ತಾನೆ. ದುರಾಸೆಯ ಜನರು ನಿಮ್ಮ ಆದಾಯದ ಮೇಲೆ ಕಣ್ಣಿಡಲು ಪ್ರಾರಂಭಿಸುತ್ತಾರೆ. ಇದು ನಿಮ್ಮ ವ್ಯಾಪಾರ ಅಥವಾ ಉದ್ಯೋಗಕ್ಕೆ ಮಾರಕವಾಗಬಹುದು. ನಿಮ್ಮ ಗಳಿಕೆಯ ಮೇಲೆ ಕೆಟ್ಟ ಕಣ್ಣು ಬೀಳಬಹುದು. ಹೀಗಾಗಿ ನಿಮ್ಮ ಸಂಬಳ ಮತ್ತು ಆದಾಯದ ಬಗ್ಗೆ ಯಾರಿಗೂ ಹೇಳಬೇಡಿ.
3. ನಿಮ್ಮ ದೌರ್ಬಲ್ಯ ಮತ್ತು ಶಕ್ತಿ
ನಿಮ್ಮ ದೌರ್ಬಲ್ಯ ಅಥವಾ ಶಕ್ತಿಯ ಬಗ್ಗೆ ಇತರರು ತಿಳಿದಿರಬಾರದು. ನಿಮ್ಮ ದೌರ್ಬಲ್ಯದ ಬಗ್ಗೆ ಯಾರಾದರೂ ತಿಳಿದುಕೊಂಡರೆ, ಅವರು ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು. ದೌರ್ಬಲ್ಯವನ್ನು ತಿಳಿದುಕೊಂಡರೆ ಶತ್ರುಗಳು ಸಹ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ಅದಕ್ಕಾಗಿಯೇ ಯಾರ ಬಳಿಯೂ ದೌರ್ಬಲ್ಯದ ಬಗ್ಗೆ ಹೇಳಬಾರದು. ನಿಮ್ಮ ಶಕ್ತಿಯ ಬಗ್ಗೆ ಯಾರಿಗೂ ಹೇಳಬಾರದು. ಶಕ್ತಿಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಮೂಲಕ ಶತ್ರುಗಳು ನಿಮ್ಮ ಮೇಲೆ ಆಕ್ರಮಣ ಮಾಡಬಹುದು. ಆ ಸಮಯದಲ್ಲಿ ನೀವು ಶತ್ರುವನ್ನು ಸೋಲಿಸುವಲ್ಲಿ ತೊಂದರೆ ಎದುರಿಸಬೇಕಾಗಬಹುದು.
ಇದನ್ನೂ ಓದಿ: "ನನ್ನ ತಂದೆಯನ್ನು ನೋಡಿಕೊಳ್ಳಿ": ಲಾಲು ಪುತ್ರಿಯ ಭಾವನಾತ್ಮಕ ಪೋಸ್ಟ್
4. ಹಿಂದಿನದನ್ನು ಮರೆತುಬಿಡಿ
ನೀಮ್ ಕರೋಲಿ ಬಾಬಾರ ಪ್ರಕಾರ, ಮನುಷ್ಯ ತನ್ನ ಹಿಂದಿನದನ್ನು ಮರೆಯಬೇಕು. ಹಿಂದಿನ ಕೆಟ್ಟ ವಿಷಯಗಳು ಅಥವಾ ಅಭ್ಯಾಸಗಳನ್ನು ಯಾರಿಗೂ ಹೇಳಬಾರದು. ಹೀಗೆ ಮಾಡುವುದರಿಂದ ನೀವೇ ನಿಮ್ಮ ಹಳ್ಳ ತೋಡಿಕೊಂಡಂತೆ. ಏಕೆಂದರೆ ಕೆಟ್ಟ ಮನಸ್ಥಿತಿಯ ಜನರು ನಿಮ್ಮ ಹಿಂದಿನ ಕೆಟ್ಟ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ನಿಮ್ಮ ಜೀವನವನ್ನೇ ಹಾಳುಮಾಡಬಹುದು. ಜನರು ನಿಮ್ಮ ಕೆಟ್ಟ ಕೆಲಸಗಳನ್ನು ಪ್ರಸ್ತಾಪಿಸಿ ಸಮಾಜದಲ್ಲಿ ನಿಮ್ಮನ್ನು ಮುಜುಗರಕ್ಕೀಡುಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.