ಈ ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಶೀತ ಗಾಳಿಯೊಂದಿಗೆ ಸುರಿಯಲಿದೆ ಮಳೆ

ಹವಾಮಾನ ಇಲಾಖೆ ಪ್ರಕಾರ, ಪಶ್ಚಿಮ ಭಾರತದಲ್ಲಿ  ಡಿಸೆಂಬರ್ 27-28 ರಂದು ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೇ ಡಿಸೆಂಬರ್ 27-29 ರಂದು ಮಧ್ಯ ಭಾರತದಲ್ಲಿ ಮಳೆಯಾಗಬಹುದು. 

Written by - Ranjitha R K | Last Updated : Dec 27, 2021, 02:44 PM IST
  • ಐಎಂಡಿ ನೀಡಿದೆ ಎಚ್ಚರಿಕೆ
  • ಉತ್ತರ ಪ್ರದೇಶದಲ್ಲಿ ಮಳೆ ಸಾಧ್ಯತೆ
  • ದೆಹಲಿಯಲ್ಲಿ ಕುಸಿದಿದೆ ಗಾಳಿಯ ಗುಣಮಟ್ಟ
ಈ ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಶೀತ ಗಾಳಿಯೊಂದಿಗೆ ಸುರಿಯಲಿದೆ ಮಳೆ   title=
ಐಎಂಡಿ ನೀಡಿದೆ ಎಚ್ಚರಿಕೆ (file photo)

ನವದೆಹಲಿ : ಉತ್ತರ ಭಾರತ (North India) ಒಂದೆಡೆ ಚಳಿಗೆ ತತ್ತರಿಸಿದೆ. ಈ ನಡುವೆ, ಮಳೆಯಿಂದಾಗಿ ಜನರ ಸಮಸ್ಯೆ ಇನ್ನೂ ಹೆಚ್ಚಿದೆ. ಮುಂದಿನ ಎರಡು ದಿನಗಳ ಕಾಲ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗಲಿದ್ದು, ತಾಪಮಾನ ಇನ್ನಷ್ಟು ಕುಸಿಯಲಿದೆ ಎಂದು, ಭಾರತೀಯ ಹವಾಮಾನ ಇಲಾಖೆ (India Meteorological Department) ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ (IMD) ಪ್ರಕಾರ, ಪಶ್ಚಿಮ ಭಾರತದಲ್ಲಿ (Western India) ಡಿಸೆಂಬರ್ 27-28 ರಂದು ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೇ ಡಿಸೆಂಬರ್ 27-29 ರಂದು ಮಧ್ಯ ಭಾರತದಲ್ಲಿ (Central India) ಮಳೆಯಾಗಬಹುದು. ಡಿಸೆಂಬರ್ 28 ರಿಂದ 30 ರ ನಡುವೆ ಪೂರ್ವ ಭಾರತದಲ್ಲಿ ಮಳೆಯಾಗುತ್ತದೆ. ಇದಲ್ಲದೇ ಪಂಜಾಬ್, ಹರಿಯಾಣ, ಉತ್ತರ ರಾಜಸ್ಥಾನದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ದಟ್ಟವಾದ ಮಂಜು ಆವರಿಸಲಿದೆ. ಮುಂದಿನ ಎರಡು ದಿನಗಳ ಕಾಲ ಉತ್ತರ ಪ್ರದೇಶ, ಸೌರಾಷ್ಟ್ರ ಮತ್ತು ಕಚ್‌ನಲ್ಲಿಯೂ ಮಂಜು ಮುಸುಕಿದ ವಾತಾವರಣ ಕಂಡುಬರಲಿದೆ.

ಇದನ್ನೂ ಓದಿ : "ಹಿಂದೂ ಧರ್ಮ ತೊರೆದವರನ್ನು ಮರು ಮತಾಂತರಗೊಳಿಸುವುದು ಹಿಂದೂಗಳಿಗೆ ಉಳಿದಿರುವ ಏಕೈಕ ಆಯ್ಕೆ" : ಬಿಜೆಪಿ ಸಂಸದ ತೇಜಸ್ವಿ ಸೂರ್ಯ

ಈ ರಾಜ್ಯಗಳಲ್ಲಿ ಬೀಸಲಿದೆ ಶೀತಗಾಳಿ : 
ಗಮನಾರ್ಹ ಅಂಶವೆಂದರೆ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಡಿಸೆಂಬರ್ 28 ರವರೆಗೆ ಮಳೆಯಾಗಬಹುದು. ಇದಲ್ಲದೆ ಡಿಸೆಂಬರ್ 27 ರಿಂದ 29 ರವರೆಗೆ ಉತ್ತರ ಪ್ರದೇಶದಲ್ಲಿ (Uttar Pradesh) ಮಳೆಯಾಗಬಹುದು. IMD ಪ್ರಕಾರ, ಡಿಸೆಂಬರ್ 31 ರವರೆಗೆ ಪಂಜಾಬ್, ಹರಿಯಾಣ, ಬಿಹಾರ ಮತ್ತು ಚಂಡೀಗಢದಲ್ಲಿ ಶೀತ ಗಾಳಿ (Cold Wave) ಬೀಸಲಿದೆ. 

ದೆಹಲಿಯಲ್ಲಿ ಲಘು ಮಳೆಯಾಗುವ ಸಾಧ್ಯತೆ  : 
ಸೋಮವಾರ ದೆಹಲಿಯಲ್ಲಿ ಲಘು ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಪಶ್ಚಿಮ ಹಿಮಾಲಯದ ಪ್ರದೇಶದಲ್ಲಿ ಡಿಸೆಂಬರ್ 28 ರವರೆಗೆ ಸಾಧಾರಣ ಮಳೆ ಮತ್ತು ಹಿಮಪಾತವಾಗುವ ಸಂಭವ ಹೆಚ್ಚಿದೆ. 

ಇದನ್ನೂ ಓದಿ :  Accident in Ambala: ಭೀಕರ ರಸ್ತೆ ಅಪಘಾತ! 3 ಟೂರಿಸ್ಟ್ ಬಸ್‌ಗಳ ನಡುವೆ ಡಿಕ್ಕಿ, 5 ಪ್ರಯಾಣಿಕರ ಮೃತ್ಯು, 10 ಮಂದಿಗೆ ಗಾಯ

IMD ಪ್ರಕಾರ, ಭಾನುವಾರ ಸಂಜೆ 5.30 ರಿಂದ 8.30 ರವರೆಗೆ ದೆಹಲಿಯ ಸಫ್ದರ್‌ಜಂಗ್‌ನಲ್ಲಿ 1.4 ಮಿಮೀ ಮಳೆ ದಾಖಲಾಗಿದೆ. ಸೋಮವಾರ, ದೆಹಲಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News