ಕಾಶ್ಮೀರಿಗಳ ಹಕ್ಕು ದಮನಕ್ಕಿಂತ ದೊಡ್ಡ ದೇಶದ್ರೋಹಿ ಕೆಲಸ ಇನ್ನೊಂದಿಲ್ಲ-ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹೋದರ ರಾಹುಲ್ ಗಾಂಧಿಯನ್ನು ನಿನ್ನೆ ಶ್ರೀನಗರ ವಿಮಾನ ನಿಲ್ದಾಣದಿಂದ ತಡೆ ಹಿಡಿದಿದ್ದಕ್ಕೆ ಇಂದು ಅವರು ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದ್ದಾರೆ.

Last Updated : Aug 25, 2019, 04:46 PM IST
ಕಾಶ್ಮೀರಿಗಳ ಹಕ್ಕು ದಮನಕ್ಕಿಂತ ದೊಡ್ಡ ದೇಶದ್ರೋಹಿ ಕೆಲಸ ಇನ್ನೊಂದಿಲ್ಲ-ಪ್ರಿಯಾಂಕಾ ಗಾಂಧಿ title=
FILE PHOTO

ನವದೆಹಲಿ: ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾ ಸಹೋದರ ರಾಹುಲ್ ಗಾಂಧಿಯನ್ನು ನಿನ್ನೆ ಶ್ರೀನಗರ ವಿಮಾನ ನಿಲ್ದಾಣದಿಂದ ತಡೆ ಹಿಡಿದಿದ್ದಕ್ಕೆ ಇಂದು ಅವರು ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದ್ದಾರೆ. ಕಾಶ್ಮೀರಿಗಳಿಗೆ ಅವರ ಪ್ರಜಾಪ್ರಭುತ್ವ ಹಕ್ಕುಗಳನ್ನು ನಿರಾಕರಿಸುವುದಕ್ಕಿಂತ ಇನ್ನೊಂದು ದೊಡ್ಡ ರಾಜಕೀಯ ಮತ್ತು ರಾಷ್ಟ್ರ ವಿರೋಧಿ ಸಂಗತಿ ಯಾವುದು ಇಲ್ಲ ಎಂದು ಬರೆದುಕೊಂಡಿದ್ದಾರೆ.  

ಪ್ರಿಯಾಂಕಾ ಗಾಂಧಿ ತಮ್ಮ ಟ್ವೀಟ್ ನಲ್ಲಿ ರಾಹುಲ್ ಗಾಂಧಿ ಅವರಿಗೆ ಕಾಶ್ಮೀರಿ ಮಹಿಳೆಯೊಬ್ಬಳು ಅಲ್ಲಿನ ಪರಿಸ್ಥಿತಿ ಹೇಳುತ್ತಾ ಕಣ್ಣೀರಿಡುತ್ತಿರುವ ವಿಡೀಯೋವೊಂದನ್ನು ಹಂಚಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ." ಎಲ್ಲಿಯವರಗೆ ಇದು ಸಾಗುತ್ತೆ? ಇದು ಒಂದು ಮಿಲಿಯನ್ ಜನರಲ್ಲಿ ಈ ಒಬ್ಬರನ್ನು ರಾಷ್ಟ್ರವಾದದ ಹೆಸರಿನಲ್ಲಿ ಅವರನ್ನು ಹತ್ತಿಕ್ಕಲಾಗುತ್ತಿದೆ. ಯಾರು ಈ ವಿಚಾರವನ್ನು ಪ್ರತಿಪಕ್ಷವು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳುತ್ತಾರೋ ಅವರಿಗೆ' ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಮುಂದುವರೆದು ' ಕಾಶ್ಮೀರದಲ್ಲಿನ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಧಮನ ಮಾಡುವುದಕ್ಕಿಂತ ದೊಡ್ಡ ರಾಜಕೀಯ ಮತ್ತು ದೇಶ ದ್ರೋಹಿ ಕೆಲಸ ಇನ್ನೊಂದಿಲ್ಲ. ಇದನ್ನು ವಿರೋಧಿಸುವುದು ಪ್ರತಿಯೊಬ್ಬರ ಕರ್ತ್ಯವ್ಯ, ನಾವು ಇದನ್ನು ನಿಲ್ಲಿಸುವುದಿಲ್ಲ "ಎಂದು ಪ್ರಿಯಾಂಕಾ ಗಾಂಧಿ ಬರೆದುಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯವನ್ನು ವಿಭಜಿಸುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು.

 

Trending News