ಮುಂಜಾನೆ 3 ರಿಂದ 4 ಗಂಟೆಯ ಸಮಯದಲ್ಲೇ ಸಂಭವಿಸುತ್ತದೆ ಹೆಚ್ಚಿನ ಸಾವು..! ಏನಿದರ ಹಿಂದಿನ ಕಾರಣ ?

ಈ ಸಮಯವನ್ನು ಸುಮ್ಮನೆ ಸಾವಿನ ಸಮಯ ಎಂದು ಕರೆಯುವುದಿಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ತತ್ವಗಳ ಆಧಾರದ ಮೇಲೆ, ವಿಜ್ಞಾನ ಮತ್ತು ಧರ್ಮ ಎರಡೂ ಬಹುತೇಕ ಒಂದು ತೀರ್ಮಾನಕ್ಕೆ ಬಂದಂತೆ ತೋರುತ್ತದೆ.  ಅಂದರೆ, ಬೆಳಿಗ್ಗೆ 3 ರಿಂದ 4 ರ ಸಮಯವು ತುಂಬಾ ಅಪಾಯಕಾರಿ.

Written by - Ranjitha R K | Last Updated : Nov 25, 2021, 03:43 PM IST
  • 3 ರಿಂದ 4 ಗಂಟೆಯ ನಡುವಿನ ಸಮಯವನ್ನು 'ಸಾವಿನ ಸಮಯ' ಎಂದು ಪರಿಗಣಿಸಲಾಗುತ್ತದೆ.
  • ಈ ಸಮಯದಲ್ಲಿ ಹೆಚ್ಚಿನ ಜನರು ದುಃಸ್ವಪ್ನಗಳನ್ನುಕಾಣುತ್ತಾರೆ
  • ಈ ಸಮಯದಲ್ಲೇ ಅಟಾಕ್ ಆಗುವ ಸಂಭವ ಹೆಚ್ಚು
ಮುಂಜಾನೆ 3 ರಿಂದ 4 ಗಂಟೆಯ  ಸಮಯದಲ್ಲೇ ಸಂಭವಿಸುತ್ತದೆ ಹೆಚ್ಚಿನ ಸಾವು..! ಏನಿದರ ಹಿಂದಿನ ಕಾರಣ ?    title=
3 ರಿಂದ 4 ಗಂಟೆಯ ನಡುವಿನ ಸಮಯವನ್ನು 'ಸಾವಿನ ಸಮಯ' ಎಂದು ಪರಿಗಣಿಸಲಾಗುತ್ತದೆ. (file photo)

ನವದೆಹಲಿ : ಗಡಿಯಾರದ ಮೂರನೇ ಹಂತ ಅತ್ಯಂತ ಅಶುಭ ಎಂದು ಹೇಳುವುದನ್ನು ನೀವು ಕೇಳಿರಬಹುದು. ಪ್ರಪಂಚದ ಹೆಚ್ಚಿನ ಧರ್ಮಗಳು ಮತ್ತು ಸಂಸ್ಕೃತಿಗಳಲ್ಲಿ, ಮೂರನೇ ಹಂತವನ್ನು ಅಪಾಯಕಾರಿ ಎಂದು ಕರೆಯಲಾಗುತ್ತದೆ. ರಾತ್ರಿ 3 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವಿನ ಸಮಯವನ್ನು  ಗಡಿಯಾರದ ಮೂರನೇ ಹಂತ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ 3 ರಿಂದ 4 ಗಂಟೆಯ ನಡುವಿನ ಸಮಯವನ್ನು ‘ಸಾವಿನ ಸಮಯ’ (Dead time) ಎಂದೇ ಹೇಳಲಾಗುತ್ತದೆ. ಮುಂಜಾನೆ 3 ಗಂಟೆಯ ಸಮಯವನ್ನು ಅತ್ಯಂತ  ಅಶುಭವೆಂದು ಪರಿಗಣಿಸಲಾಗಿದೆ. ಕೆಲವೊಮ್ಮೆ ಗಮನಿಸಿರಬಹುದು ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗಿ ಬಿಡುತ್ತದೆ. ಭಾರೀ ಬೆವರಲು ಆರಂಭವಾಗುತ್ತದೆ. ಹೃದಯ ಬಡಿತ (Heart beat) ಹೆಚ್ಚುತ್ತದೆ . 

ವೈದ್ಯಕೀಯ ವಿಜ್ಞಾನವೂ ಇದನ್ನು ಒಪ್ಪಿಕೊಳ್ಳುತ್ತದೆ :
ಈ ಸಮಯವನ್ನು ಸುಮ್ಮನೆ ಸಾವಿನ ಸಮಯ ಎಂದು ಕರೆಯುವುದಿಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ತತ್ವಗಳ ಆಧಾರದ ಮೇಲೆ, ವಿಜ್ಞಾನ (Science) ಮತ್ತು ಧರ್ಮ (Religion) ಎರಡೂ ಬಹುತೇಕ ಒಂದು ತೀರ್ಮಾನಕ್ಕೆ ಬಂದಂತೆ ತೋರುತ್ತದೆ.  ಅಂದರೆ, ಬೆಳಿಗ್ಗೆ 3 ರಿಂದ 4 ರ ಸಮಯವು ತುಂಬಾ ಅಪಾಯಕಾರಿ. ವೈದ್ಯಕೀಯ ವಿಜ್ಞಾನದ ಪ್ರಕಾರ, ಮಧ್ಯಾಹ್ನ 3 ರಿಂದ 4 ಗಂಟೆಯ ನಡುವೆ ಅಸ್ತಮಾ ಅಟಾಕ್ ಸಾಧ್ಯತೆ 300 ಪಟ್ಟು ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಈ ಸಮಯದಲ್ಲಿ ದೇಹದಲ್ಲಿ ಅಡ್ರಿನಾಲಿನ್ ಮತ್ತು ಆಂಟಿ ಇಂಫ್ಲಮೆಟರಿ  ಹಾರ್ಮೋನುಗಳ (hormone releasing) ಬಿಡುಗಡೆ ಬಹಳವಾಗಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ದೇಹದಲ್ಲಿನ ಉಸಿರಾಟದ ವ್ಯವಸ್ಥೆಯು (Breathing system) ಸಾಕಷ್ಟು ಕುಗ್ಗುತ್ತದೆ. ದಿನಕ್ಕೆ ಹೋಲಿಸಿದರೆ ಈ ಸಮಯದಲ್ಲಿ ರಕ್ತದೊತ್ತಡವೂ ಕಡಿಮೆ ಇರುತ್ತದೆ.

ಇದನ್ನೂ ಓದಿ : Asia's Biggest International Airport : ದೇಶದಲ್ಲಿ ನಿರ್ಮಾಣವಾಗುತ್ತಿದೆ ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣ! ಎಲ್ಲಿ? 

14% ಜನರು ತಮ್ಮ ಹುಟ್ಟುಹಬ್ಬದ ದಿನದಂದು ಸಾಯುವ ಸಾಧ್ಯತೆ  :
ಬೆಳಿಗ್ಗೆ 6 ಗಂಟೆಗೆ ಕಾರ್ಟಿಸೋಲ್ ಹಾರ್ಮೋನ್ ವೇಗವಾಗಿ ಬಿಡುಗಡೆಯಾಗುವುದರಿಂದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅಟಾಕ್ ಅಪಾಯವು ಹೆಚ್ಚು ಎಂದು ವೈದ್ಯಕೀಯ ತಜ್ಞರು ನಂಬುತ್ತಾರೆ. ಆದರೆ ಅಧಿಕ ರಕ್ತದೊತ್ತಡವು ರಾತ್ರಿ 9 ಗಂಟೆಗೆ ಸಂಭವಿಸುತ್ತದೆ. ಇದು ಕೂಡಾ ಸಾವಿಗೆ ಕಾರಣವಾಗಬಹುದು. ಮತ್ತೊಂದೆಡೆ, 14 ರಷ್ಟು ಜನರು ತಮ್ಮ ಹುಟ್ಟುಹಬ್ಬದ ದಿನದಂದು (Death on birth day) ಸಾಯುವ ಸಾಧ್ಯತೆಯಿದೆ ಎಂದು ಸಂಶೋಧನೆಯೊಂದರಲ್ಲಿ ಕಂಡುಬಂದಿದೆ.

3 ರಿಂದ 4 ರ ನಡುವೆ ನಿದ್ರೆಯಿಂದ ಎಚ್ಚರ, ದುಃಸ್ವಪ್ನಗಳು :
ಇಷ್ಟು ಮಾತ್ರವಲ್ಲದೆ ಮುಂಜಾನೆಯ ಹೊತ್ತಿನಲ್ಲಿ ಬಹುತೇಕ ದುಃಸ್ವಪ್ನಗಳು ಬರುತ್ತವೆ.  ಸಂಶೋಧಕರು ಮುಂಜಾನೆ 3 ಗಂಟೆಯಿಂದ 4 ಗಂಟೆಯ ನಡುವಿನ ಸಮಯವನ್ನು ಡೆವಿಲ್ಸ್ ಅವರ್  ಅಥವಾ ' ಡೆಡ್ ಟೈಮ್ ' (Dead time) ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ಪೈಶಾಚಿಕ ಅಥವಾ ಪ್ರೇತಗಳ ಚಟುವಟಿಕೆಗಳು ಅತ್ಯಧಿಕವಾಗಿರುತ್ತವೆ ಎಂದು ನಂಬುವವರೂ ಇದ್ದಾರೆ. ಹೆಚ್ಚಿನ ಜನರು ಈ ಸಮಯದಲ್ಲಿ ದುಃಸ್ವಪ್ನಗಳನ್ನು ಜನ ಕಾಣುತ್ತಾರೆ. ಹೀಗಾಗಿ ಬೆಚ್ಚಿ ಬಿದ್ದು ಎಚ್ಚರಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಟಾಕ್ ಆಗುವ ಸಾಧ್ಯತೆ ಕೂಡಾ ಹೆಚ್ಚಿರುತ್ತದೆ. 

ಇದನ್ನೂ ಓದಿ : ನಿಮ್ಮ ಬಳಿ 5 ರೂಪಾಯಿ ನೋಟು ಇದ್ದರೆ ಸುಲಭವಾಗಿ ಪಡೆಯಿರಿ 2 ಲಕ್ಷ ರೂಪಾಯಿ, ಇಲ್ಲಿದೆ ಮಾರಾಟದ ಸರಿಯಾದ ವಿಧಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News