OTT platforms ನಿಯಂತ್ರಣ ಕುರಿತ ಅರ್ಜಿ ವಿಚಾರಣೆಗೆ ತಡೆ ನೀಡಿದ ಸುಪ್ರೀಂ

ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಲ್ಲಿನ ವಿಷಯವನ್ನು ನಿಯಂತ್ರಿಸುವಂತೆ ಕೋರಿ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ. ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಈ ಎಲ್ಲಾ ಅರ್ಜಿಗಳನ್ನು ಕ್ಲಬ್ ಮಾಡಲು ಕೇಂದ್ರವು ವರ್ಗಾವಣೆ ಮಾಡಿದ ಮನವಿಯ ಮೇರೆಗೆ ಈ ಆದೇಶ ಬಂದಿದೆ.

Last Updated : Mar 23, 2021, 04:10 PM IST
  • ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಲ್ಲಿನ ವಿಷಯವನ್ನು ನಿಯಂತ್ರಿಸುವಂತೆ ಕೋರಿ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ.
  • ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಈ ಎಲ್ಲಾ ಅರ್ಜಿಗಳನ್ನು ಕ್ಲಬ್ ಮಾಡಲು ಕೇಂದ್ರವು ವರ್ಗಾವಣೆ ಮಾಡಿದ ಮನವಿಯ ಮೇರೆಗೆ ಈ ಆದೇಶ ಬಂದಿದೆ.
OTT platforms ನಿಯಂತ್ರಣ ಕುರಿತ ಅರ್ಜಿ ವಿಚಾರಣೆಗೆ ತಡೆ ನೀಡಿದ ಸುಪ್ರೀಂ  title=

ನವದೆಹಲಿ: ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಲ್ಲಿನ ವಿಷಯವನ್ನು ನಿಯಂತ್ರಿಸುವಂತೆ ಕೋರಿ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ. ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಈ ಎಲ್ಲಾ ಅರ್ಜಿಗಳನ್ನು ಕ್ಲಬ್ ಮಾಡಲು ಕೇಂದ್ರವು ವರ್ಗಾವಣೆ ಮಾಡಿದ ಮನವಿಯ ಮೇರೆಗೆ ಈ ಆದೇಶ ಬಂದಿದೆ.

ಕಾನೂನು ಮತ್ತು ನ್ಯಾಯ,ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಮತ್ತು ಸಚಿವಾಲಯ ಜಂಟಿಯಾಗಿ ಸಲ್ಲಿಸಿದ್ದ ಮನವಿಯ ಹಿನ್ನಲೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಮಧ್ಯಪ್ರದೇಶ ಹೈಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ಎಲ್ಲ ಅರ್ಜಿದಾರರಿಗೆ ಸರ್ವೋಚ್ಚ ನ್ಯಾಯಾಲಯ (Supreme Court) ನೋಟಿಸ್ ನೀಡಿದೆ.

ಇದನ್ನೂ ಓದಿ: BSNL Special OTT Plans: ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ವಿಶೇಷ ಕೊಡುಗೆ 

ಮಂಗಳವಾರದ ಆದೇಶವನ್ನು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಎಂ.ಆರ್.ಶಾ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನ್ಯಾಯಪೀಠ ಅಂಗೀಕರಿಸಿತು. ಎನ್‌ಜಿಒ ಜಸ್ಟಿಸ್ ಫಾರ್ ರೈಟ್ಸ್ ಫೌಂಡೇಶನ್ ಮತ್ತು ಇನ್ನೊಬ್ಬರು ವಕೀಲ ಶಶಾಂಕ್ ಶೇಖರ್ ಜಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳೊಂದಿಗೆ ಸುಪ್ರೀಂಕೋರ್ಟ್ ವರ್ಗಾವಣೆ ಅರ್ಜಿಯನ್ನು ಕೈಗೆತ್ತಿಕೊಂಡಿತು, ಇದರಲ್ಲಿ ಅವರು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ಆನ್ ಲೈನ್ ನಲ್ಲಿ ಬಿಡುಗಡೆ ಮಾಡುವ ಮೊದಲು ಪೂರ್ವ-ಸ್ಕ್ರೀನಿಂಗ್ ಸಮಿತಿಯು ಪರಿಶೀಲನೆಯನ್ನು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 'Tandav' ವಿವಾದದ ಬಳಿಕ ಎಚ್ಚೆತ್ತುಕೊಂಡ ಕೇಂದ್ರ, OTTಗಾಗಿ ನೂತನ ಮಾರ್ಗಸೂಚಿಗಳ ಬಿಡುಗಡೆಗೆ ಸಿದ್ಧತೆ 

ಲೈವ್ ಸ್ಟ್ರೀಮ್ ವಿಷಯವನ್ನು ಹೊಂದಿರುವ 40 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಸರ್ಕಾರ ಪ್ರಸ್ತುತ ಗುರುತಿಸಿದೆ.ಸುಪ್ರೀಂ ಕೋರ್ಟ್ ಪ್ರಕಾರ ನಿಯಂತ್ರಣದ  ಕೊರತೆಯಿರುವ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ಸರ್ಕಾರವು ಕೆಲವು ನಿಯಮಗಳನ್ನು ಸೂಚಿಸಿದ ಕೆಲವೇ ದಿನಗಳಲ್ಲಿ ಈ ತೀರ್ಪು ಬರುತ್ತದೆ. ಪ್ರತ್ಯೇಕ ವಿಚಾರಣೆಯಲ್ಲಿ, ನ್ಯಾಯಾಲಯವು ನಿಯಮಗಳನ್ನು ಜಾರಿಗೊಳಿಸಲು ನಿಬಂಧನೆಗಳ ಕೊರತೆಯಿದೆ ಎಂದು ಹೇಳಿದೆ ಮತ್ತು ಅದರ ನಂತರ ಕೇಂದ್ರವು ನಿಯಮಗಳನ್ನು ಪರಿಷ್ಕರಿಸಲು ಒಪ್ಪಿಕೊಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News