ಕೃಷಿ ತಾಜ್ಯದ ಬೆಂಕಿ ಬಗ್ಗೆ ನಿಗಾವಹಿಸಲು ಸುಪ್ರೀಂ ನಿಂದ ಸಮಿತಿ ರಚನೆ

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೃಷಿ ಬೆಂಕಿಯ ಬಗ್ಗೆ ನಿಗಾ ಇಡಲು ಸುಪ್ರೀಂ ಕೋರ್ಟ್ ತನ್ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ನೇತೃತ್ವದ ಏಕ ಸದಸ್ಯರ ಸಮಿತಿಯನ್ನು ಶುಕ್ರವಾರ ರಚಿಸಿತು.ದಸರಾ ರಜೆಯ ನಂತರ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

Last Updated : Oct 16, 2020, 02:18 PM IST
ಕೃಷಿ ತಾಜ್ಯದ ಬೆಂಕಿ ಬಗ್ಗೆ ನಿಗಾವಹಿಸಲು ಸುಪ್ರೀಂ ನಿಂದ ಸಮಿತಿ ರಚನೆ  title=
Photo Courtesy: PTI (file photo)

ನವದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೃಷಿ ಬೆಂಕಿಯ ಬಗ್ಗೆ ನಿಗಾ ಇಡಲು ಸುಪ್ರೀಂ ಕೋರ್ಟ್ ತನ್ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ನೇತೃತ್ವದ ಏಕ ಸದಸ್ಯರ ಸಮಿತಿಯನ್ನು ಶುಕ್ರವಾರ ರಚಿಸಿತು.ದಸರಾ ರಜೆಯ ನಂತರ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

ದೆಹಲಿ ಮತ್ತು ಪರಿಸರ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರದ ಎಲ್ಲ ಅಧಿಕಾರಿಗಳು ನ್ಯಾಯಮೂರ್ತಿ ಲೋಕೂರ್ ಸಮಿತಿಗೆ ವರದಿ ಸಲ್ಲಿಸಬೇಕೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಆದೇಶಿಸಿದೆ.

ಸೋಶಿಯಲ್ ಮೀಡಿಯಾ ನಿಯಂತ್ರಣ; ಕೇಂದ್ರದ ಪ್ರತಿಕ್ರಿಯೆ ಕೋರಿದ ಸುಪ್ರೀಂ

ಲೋಕೂರ್ ಸಮಿತಿಗೆ ತಾಜ್ಯ ಬೆಂಕಿ ಸಾಧ್ಯತೆ ಇರುವ ಕ್ಷೇತ್ರಗಳ ಮೇಲೆ ನಿಗಾವಹಿಸಲು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯಂತಹ ದಳಗಳನ್ನು ನಿಯೋಜಿಸಬಹುದು ಎಂದು ಅವರು ಹೇಳಿದರು. ಈ ಮೊಬೈಲ್ ತಂಡಗಳು ಇಂತಹ ಕೃಷಿ ತಾಜ್ಯ ಬೆಂಕಿಯ ಬಗ್ಗೆ ಮಾಹಿತಿ ನೀಡಲಿದ್ದು, ಅದರ ಆಧಾರದ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.

ಇಬ್ಬರು ಯುವ ಪರಿಸರ ಕಾರ್ಯಕರ್ತರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ನಲ್ಲಿ ಈ ಆದೇಶ ಬಂದಿದ್ದು, ತಾಜ್ಯ ಸುಡುವುದನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನ್ಯಾಯಾಲಯದ ಮೇಲ್ವಿಚಾರಣೆಯ ಹೊರತಾಗಿಯೂ,ಇದನ್ನು ತಡೆಯಲು ರಾಜ್ಯಗಳು ಸಾಕಷ್ಟು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇಬ್ಬರು ಕಾರ್ಯಕರ್ತರನ್ನು ಪ್ರತಿನಿಧಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ಈ ವರ್ಷ ಕೃಷಿ ಬೆಂಕಿ ಐದು ಪಟ್ಟು ಹೆಚ್ಚಾಗಿದೆ ಮತ್ತು ನ್ಯಾಯಾಲಯವು ಮತ್ತೆ ತೆರೆದಾಗ ಈ ಸಮಸ್ಯೆಯನ್ನು ತಡೆಗಟ್ಟಲು ತಕ್ಷಣ ಆದೇಶದ ಅಗತ್ಯವಿದೆ . ಈ ಉದ್ದೇಶಕ್ಕಾಗಿ ನ್ಯಾಯಮೂರ್ತಿ ಲೋಕೂರ್ ಅವರನ್ನು ನೇಮಕ ಮಾಡುವಂತೆ ಅವರು ಸಲಹೆ ನೀಡಿದರು.

Trending News