ತಾಯಿ ಭೇಟಿಯಾಗಲು ಮೆಹಬೂಬಾ ಮುಫ್ತಿ ಮಗಳಿಗೆ ಅನುಮತಿ ನೀಡಿದ ಸುಪ್ರೀಂ

ಸುಪ್ರೀಂ ಕೋರ್ಟ್ ಪ್ರಕಾರ, ಇಲ್ತಿಜಾ ಅವರು ಶ್ರೀನಗರಕ್ಕೆ ಯಾವಾಗ ಬೇಕಾದರೂ ಭೇಟಿ ನೀಡಬಹುದು ಮತ್ತು ಆಡಳಿತದ ಅನುಮತಿಯ ನಂತರ ತಾಯಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಬಹುದು. ಕಳೆದ ವಾರದ ಆರಂಭದಲ್ಲಿ, ಮೆಹಬೂಬಾ ಮುಫ್ತಿ ಅವರ ತಾಯಿ ಮತ್ತು ಸಹೋದರಿ ಅವರನ್ನು ಭೇಟಿಯಾಗಿದ್ದರು.

Last Updated : Sep 5, 2019, 12:55 PM IST
ತಾಯಿ ಭೇಟಿಯಾಗಲು ಮೆಹಬೂಬಾ ಮುಫ್ತಿ ಮಗಳಿಗೆ ಅನುಮತಿ ನೀಡಿದ ಸುಪ್ರೀಂ title=

ನವದೆಹಲಿ: ಶ್ರೀನಗರದಲ್ಲಿ ಗೃಹಬಂಧನದಲ್ಲಿರುವ ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾಗಲು ಅವರ ಪುತ್ರಿ ಇಲ್ತಿಜಾ ಮುಫ್ತಿಗೆ ಸುಪ್ರೀಂಕೋರ್ಟ್ ಗುರುವಾರ ಅನುಮತಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ, ಭದ್ರತಾ ಕಾರಣಗಳಿಗಾಗಿ ಗೃಹಬಂಧನದಲ್ಲಿರುವ ಪಿಡಿಪಿ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಅವರ ಮಗಳು ಇಲ್ತಿಜಾ ಮುಫ್ತಿ ಸುಪ್ರೀಂ ಮೆಟ್ಟಿಲೇರಿದ್ದರು. ಇಲ್ತಿಜಾ ಮುಫ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ  ಆಲಿಸಿದ ಸುಪ್ರೀಂ ಕೋರ್ಟ್, ತಾಯಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಲು ಶ್ರೀನಗರಕ್ಕೆ ಹೋಗಲು ಅನುಮತಿ ನೀಡಿದೆ. ಸುಪ್ರೀಂ ಕೋರ್ಟ್ ಪ್ರಕಾರ, ಇಲ್ತಿಜಾ ಅವರು ಶ್ರೀನಗರಕ್ಕೆ ಯಾವಾಗ ಬೇಕಾದರೂ ಭೇಟಿ ನೀಡಬಹುದು ಮತ್ತು ಆಡಳಿತದ ಅನುಮತಿಯ ನಂತರ ತಾಯಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಬಹುದು. 

ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ತನ್ನ ತಾಯಿಯನ್ನು ಭೇಟಿಯಾಗಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೆಹಬೂಬಾ ಮುಫ್ತಿಯನ್ನು ಶ್ರೀನಗರದ ಚಶ್ಮಶಾಹಿ ರೆಸಾರ್ಟ್‌ನಲ್ಲಿ ಇರಿಸಲಾಗಿದೆ. ಗುರುವಾರ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಎ.ಬಾಬ್ಡೆ ಮತ್ತು ನ್ಯಾಯಮೂರ್ತಿ ಎಸ್.ಎ.ನಜೀರ್ ಅವರ ನ್ಯಾಯಪೀಠವು ಅವರ ಅರ್ಜಿಯ ವಿಚಾರಣೆ ನಡೆಸಿತು. ಮೇಲಿನ ಆದೇಶ ನೀಡಿದೆ.

Trending News