ನವದೆಹಲಿ: ಕೊವಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗಗಳಿಗಾಗಿ ಮಕ್ಕಳ ತಪಾಸಣೆ ನಾಳೆ ದೆಹಲಿಯ ಏಮ್ಸ್‌ನಲ್ಲಿ ಪ್ರಾರಂಭವಾಗಲಿದೆ, ಪಾಟ್ನಾದ ಏಮ್ಸ್‌ನಲ್ಲಿ ಇದೇ ರೀತಿಯ ಪ್ರಯೋಗಗಳು ಪ್ರಾರಂಭವಾದ ಕೆಲವು ದಿನಗಳ ನಂತರ ಈಗ ನಾಳೆ ದೆಹಲಿಯಲ್ಲಿ ಆರಂಭಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ- 5G ನೆಟ್ ವರ್ಕ್ ವಿರೋಧಿಸಿ ಅರ್ಜಿ ಸಲ್ಲಿಸಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ.ಗಳ ದಂಡ
ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಎರಡು ಮತ್ತು 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ತಯಾರಿಸಿದ COVID-19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಿದೆ. ವೈರಸ್ ವಿರುದ್ಧ ಸಾಕಷ್ಟು ಜನರಿಗೆ ಲಸಿಕೆ ನೀಡದಿದ್ದಲ್ಲಿ, ಮೂರನೇ ಅಲೆಯು ಕೊರೊನಾವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಂತೆಯೇ ವಿನಾಶವನ್ನು ತರಬಹುದು ಮತ್ತು ಮಕ್ಕಳು ಅದರ ಪ್ರಮುಖ ಗುರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ- ಕನ್ನಡದ ಹಿರಿಯ ನಟಿ ಬಿ.ಜಯಾ ಇನ್ನಿಲ್ಲ, ಕಂಬನಿ ಮಿಡಿದ ಚಿತ್ರರಂಗ
ಆದಾಗ್ಯೂ, ಭಾರತದಲ್ಲಿ ಬಳಸುತ್ತಿರುವ ಕೋವಾಕ್ಸಿನ್ (Covaxin), ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳನ್ನು ಇದುವರೆಗೆ ಮಕ್ಕಳ ಬಳಕೆಗೆ ಅನುಮೋದನೆ ನೀಡಿಲ್ಲ. ಎರಡು ಮತ್ತು 18 ವರ್ಷದೊಳಗಿನ ಮಕ್ಕಳ ಮೇಲೆ ಹಂತ 2/3 ಪ್ರಯೋಗಗಳನ್ನು ನಡೆಸಲಾಗುವುದು ಎಂದು ಹಿರಿಯ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಕಳೆದ ತಿಂಗಳು ಹೇಳಿದ್ದರು.
ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ಕೆಲವು ವಯಸ್ಸಿನ ಮಕ್ಕಳಲ್ಲಿ ಬಳಸಲು ಫಿಜರ್-ಬಯೋಟೆಕ್ ಲಸಿಕೆಯನ್ನು ಅಧಿಕೃತಗೊಳಿಸಿದೆ. 3 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಚೀನಾದ ಸಂಸ್ಥೆ ಸಿನೋವಾಕ್ ತಯಾರಿಸಿದ COVID-19 ಲಸಿಕೆಯ ಕೊರೊನಾವಾಕ್ ಅನ್ನು ತುರ್ತು ಬಳಕೆಗೆ ಚೀನಾ ಅನುಮೋದಿಸಿದೆ. ಆದಾಗ್ಯೂ, ಹೆಚ್ಚಿನ ದೇಶಗಳು ಇನ್ನೂ ಕೂಡ ಮಕ್ಕಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ಹಾಕಿಲ್ಲ ಎನ್ನಲ್ಲಾಗಿದೆ.
ಇದನ್ನೂ ಓದಿ-Happy Birthday Mani Ratnam: ಕನ್ನಡದ ಪಲ್ಲವಿ ಅನುಪಲ್ಲವಿ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟಿದ್ದ ಮಣಿರತ್ನಂ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ