ಶೀಘ್ರವೇ ಲಕ್ಷ ದಾಟಲಿರುವ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ

ಈಗ ಹೊಸದಾಗಿ ನಿನ್ನೆ ಒಂದೇ ದಿನ 5,242 ಜನರಲ್ಲಿ‌ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಇದರಿಂದಾಗಿ ದೇಶದಲ್ಲಿ ‌ಅತಿಹೆಚ್ಚು‌ ಕೊರೊನಾ ಸಂಖ್ಯೆ ದಾಖಲಾದ ಕರಾಳದಿನ ಎಂಬ ಕುಖ್ಯಾತಿ ನಿನ್ನೆಯ ಪಾಲಾಗಿದೆ.

Written by - Yashaswini V | Last Updated : May 18, 2020, 11:29 AM IST
ಶೀಘ್ರವೇ ಲಕ್ಷ ದಾಟಲಿರುವ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ title=
File Image

ನವದೆಹಲಿ: ಜಾಗತಿಕ ಪಿಡುಗಾಗಿ ಪರಿಪರಿಯಾಗಿ ಕಾಡುತ್ತಿರುವ ಕೊರೋನಾವೈರಸ್ (Coronavirus)  ಅನ್ನು ಕೊನೆಗಾಣಿಸಲು ಭಾರತ ಹಲವಾರು ರೀತಿಯ ಕಸರತ್ತು ನಡೆಸುತ್ತಿದೆ. ಆದರೆ ದಿನದಿಂದ ದಿನಕ್ಕೆ ‌ಕಡಿಮೆ ಆಗಬೇಕಿದ್ದ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ‌. ಹೀಗೆ ಮುಂದುವರೆದರೆ ಶೀಘ್ರವೇ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಲಕ್ಷವನ್ನೂ ದಾಟಲಿದೆ.

ಹೌದು, ಭಾರತ ದಿನೇ‌ದಿನೆ ಕೊರೋನಾ ವೈರಸ್  ಕೊವಿಡ್-19 (Covid-19)  ಹರಡುವಿಕೆ ವಿಷಯದಲ್ಲಿ ಇಂಥ ಕಹಿ ಸುದ್ದಿಗಳನ್ನೇ ಉಣಬಡಿಸುತ್ತಿದೆ. ಈಗಾಗಲೇ ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಿದೆ. ಈಗ ಹೊಸದಾಗಿ ನಿನ್ನೆ ಒಂದೇ ದಿನ 5,242 ಜನರಲ್ಲಿ‌ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಇದರಿಂದಾಗಿ ದೇಶದಲ್ಲಿ ‌ಅತಿಹೆಚ್ಚು‌ ಕೊರೊನಾ ಸಂಖ್ಯೆ ದಾಖಲಾದ ಕರಾಳದಿನ ಎಂಬ ಕುಖ್ಯಾತಿ ನಿನ್ನೆಯ ಪಾಲಾಗಿದೆ.

ಹಿಂದೆ ಮೇ 10ರಂದು 4,213  ಪ್ರಕರಣಗಳು ಕಂಡುಬಂದಿದ್ದೇವ ದಿನವೊಂದರಲ್ಲಿ ಕಂಡುಬಂದ ಅತಿಹೆಚ್ಚು ಪ್ರಕರಣಗಳಾಗಿದ್ದವು. ಈಗ ಇದೇ ಮೊದಲ ಬಾರಿಗೆ ಭಾರತದಲ್ಲಿ ‌ದಿನವೊಂದರಲ್ಲಿ 5,242 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ 96,169ಕ್ಕೆ ಏರಿಕೆ ಆಗಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ  ಪ್ರಕಾರ ನಿನ್ನೆ ಒಂದೇ ದಿನ ಕೊರೊನಾದಿಂದ 157 ಜನ‌ ಮೃತಪಟ್ಟಿದ್ದು ದೇಶದಲ್ಲಿ ಈವರೆಗೆ ಕೊರೊನಾದಿಂದ ಸತ್ತವರ ಸಂಖ್ಯೆ 3,029ಕ್ಕೆ ಏರಿಕೆಯಾಗಿದೆ.

ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳನ್ನು ನೋಡುತ್ತಿದ್ದರೆ ಭಾರತ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ಸಿಗಲಿದೆ. ಮೇ 6ರಿಂದ ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನವೊಂದರಲ್ಲಿ ಮೂರು ಸಾವಿರ ಮೀರಲು ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಕೆಳಮುಖವಾಗಿಲ್ಲ. ಬೇಕಿದ್ದರೆ ಈ ಅಂಕಿಅಂಶಗಳನ್ನು ನೋಡಿ...

ದಿನಾಕವಾರು ಪತ್ತೆಯಾದ ಕೊರೋನಾ ಪ್ರಕರಣಗಳ ಸಂಖ್ಯೆ

  • ಮೇ 6ರಂದು 3,561,
  • ಮೇ 7ರಂದು 3,390,
  • ಮೇ 8ರಂದು 3,320,
  • ಮೇ 9ರಂದು 3,277,
  • ಮೇ 10ರಂದು 4,213,
  • ಮೇ 11ರಂದು 3,064,
  • ಮೇ 12ರಂದು 3,525,
  • ಮೇ 13ರಂದು 3,722,
  • ಮೇ 14ರಂದು 3,967,
  • ಮೇ 15ರಂದು 3,970,
  • ಮೇ 16ರಂದು 4,987,
  • ಮೇ 17ರಂದು 5,242.

ಮೇಲಿನ ಅಂಕಿ ಅಂಶಗಳ ಪ್ರಕಾರ ನಿರಂತರವಾಗಿ ಕೊರೊನಾ ವೈರಸ್ ಹರಡುವಿಕೆ ಏರುಮುಖವಾಗಿ ಸಾಗುತ್ತಿರುವುದು ಸ್ಪಷ್ಟವಾಗಿ ಗೊತ್ತಾಗಲಿದೆ. ಮೇ 16ರಂದು 4,987 ಪ್ರಕರಣಗಳು ಮತ್ತು ಮೇ 17ರಂದು 5,242 ಪ್ರಕರಣಗಳು ವರದಿಯಾಗಿದ್ದು ಭಾರತದಲ್ಲಿ ಕೊರೊನಾ ವೈರಸ್ ಇಷ್ಟೇ ವ್ಯಾಪಕವಾಗಿ ಹರಡಿದರೆ ನಾಳೆಯೋ ನಾಳಿದ್ದೋ ಲಕ್ಷದ ಗಡಿ ದಾಟಲಿದೆ.

Trending News