/kannada/photo-gallery/englands-legendary-test-batsman-joe-root-will-break-sachin-tendulkar-4-world-records-249475 ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!  ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌! 249475

ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಗಳಿಗೆ ಸದ್ಯದಲ್ಲೇ ಮರಣದಂಡನೆ

ನಿರ್ಭಯ ಗ್ಯಾಂಗ್ ರೇಪ್ ಅಪರಾಧಿಗಳು ಏಳು ದಿನಗಳೊಳಗೆ ರಾಷ್ಟ್ರಪತಿಗಳ ಮುಂದೆ ಅನುಕಂಪದ ಅರ್ಜಿ  ಸಲ್ಲಿಸದಿದ್ದರೆ ಶೀಘ್ರದಲ್ಲೇ ಮರಣದಂಡನೆ ವಿಧಿಸಲಾಗುತ್ತದೆ ಎಂದು ತಿಹಾರ್ ಜೈಲು ಅಧಿಕಾರಿಗಳು ಗುರುವಾರ ಅಧಿಕೃತ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

Last Updated : Oct 31, 2019, 06:41 PM IST
ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಗಳಿಗೆ ಸದ್ಯದಲ್ಲೇ ಮರಣದಂಡನೆ title=
ಸಾಂದರ್ಭಿಕ ಚಿತ್ರ

ನವದೆಹಲಿ: ನಿರ್ಭಯ ಗ್ಯಾಂಗ್ ರೇಪ್ ಅಪರಾಧಿಗಳು ಏಳು ದಿನಗಳೊಳಗೆ ರಾಷ್ಟ್ರಪತಿಗಳ ಮುಂದೆ ಅನುಕಂಪದ ಅರ್ಜಿ ಸಲ್ಲಿಸದಿದ್ದರೆ ಶೀಘ್ರದಲ್ಲೇ ಮರಣದಂಡನೆ ವಿಧಿಸಲಾಗುತ್ತದೆ ಎಂದು ತಿಹಾರ್ ಜೈಲು ಅಧಿಕಾರಿಗಳು ಗುರುವಾರ ಅಧಿಕೃತ ನೋಟಿಸ್‌ನಲ್ಲಿ ತಿಳಿಸಿದ್ದಾರೆ. 

'ನಾಲ್ವರು ಆರೋಪಿಗಳಲ್ಲಿ ಮೂವರು ತಿಹಾರ್ ಜೈಲಿನಲ್ಲಿ ದಾಖಲಾಗಿದ್ದರೆ, ನಾಲ್ಕನೇ ಅಪರಾಧಿ ಮಂಡೋಲಿಯ ಜೈಲು ಸಂಖ್ಯೆ 14 ರಲ್ಲಿದ್ದಾರೆ. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯದ ಮರಣದಂಡನೆಯನ್ನು ಎತ್ತಿಹಿಡಿದಿದೆ' ಎಂದು ತಿಹಾರ್ ಜೈಲು ಮಹಾನಿರ್ದೇಶಕ ಸಂದೀಪ್ ಗೋಯೆಲ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. 

ಮರಣದಂಡನೆ ಮತ್ತು ಪರಿಶೀಲನಾ ಅರ್ಜಿಯನ್ನು ಪ್ರಶ್ನಿಸಿ ಅಪರಾಧಿಗಳಿಗೆ ಅರ್ಜಿಯನ್ನು ಸಲ್ಲಿಸಲು ಕಾನೂನು ಅನುಮತಿಸುತ್ತದೆ, ಆದರೆ ಇದುವರೆಗೆ ಯಾವುದೇ ಅಪರಾಧಿಗಳು ರಾಷ್ಟ್ರಪತಿ ಮುಂದೆ ಮರುಪರಿಶೀಲನೆ ಅರ್ಜಿಯನ್ನು ಕೋರಿಲ್ಲ ಎನ್ನಲಾಗಿದೆ.ಮರಣದಂಡನೆ ಶಿಕ್ಷೆ ಒಳಗಾಗಿರುವ ಅಪರಾಧಿಗಳು ಅನುಕಂಪದ ಅರ್ಜಿಯಾಗಿ ರಾಷ್ಟ್ರಪತಿ ಮುಂದೆ ಹೋಗಬಹುದು, ಆದರೆ ಇದುವರೆಗೆ ಅಪರಾಧಿಗಳು ಯಾವುದೇ ಮನವಿಯನ್ನು ಮಾಡಿಲ್ಲ ಎನ್ನಲಾಗಿದೆ.