ಪ್ಲಾಸ್ಟಿಕ್ ನಿಷೇಧ, ನೀರಿನ ಬಾಟಲ್ ಹಿಂದಿರುಗಿಸುವಂತೆ ರೈಲ್ವೆಯ ಹೊಸ ನಿಯಮ

ಭಾರತೀಯ ರೈಲ್ವೆ ಈಗ ಅಕ್ಟೋಬರ್ 2 ರಿಂದ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರುವಂತೆ ಬುಧವಾರ ಎಲ್ಲಾ ರೈಲ್ವೆ ಘಟಕಗಳಿಗೆ ನಿರ್ದೇಶನ ನೀಡಿದೆ.

Last Updated : Aug 21, 2019, 06:57 PM IST
ಪ್ಲಾಸ್ಟಿಕ್ ನಿಷೇಧ, ನೀರಿನ ಬಾಟಲ್ ಹಿಂದಿರುಗಿಸುವಂತೆ ರೈಲ್ವೆಯ ಹೊಸ ನಿಯಮ  title=

ನವದೆಹಲಿ: ಭಾರತೀಯ ರೈಲ್ವೆ ಈಗ ಅಕ್ಟೋಬರ್ 2 ರಿಂದ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರುವಂತೆ ಬುಧವಾರ ಎಲ್ಲಾ ರೈಲ್ವೆ ಘಟಕಗಳಿಗೆ ನಿರ್ದೇಶನ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನೀಡಿದ ಸಲಹೆಯನ್ನು ಜಾರಿಗೆ ತರಲು ಮುಂದಾಗಿರುವ ಭಾರತೀಯ ರೇಲ್ವೆ, ಈಗ ಸುತ್ತೋಲೆ ಮೂಲಕ ಸೂಚನೆಯನ್ನು ಹೊರಡಿಸಿದ್ದು, ಅದನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎನ್ನಲಾಗಿದೆ.ಈ ನಿಯಮದಿಂದಾಗಿ ರೈಲ್ವೆ ಮಾರಾಟಗಾರರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಸ್ಥಗಿತಗೊಳಿಸಬೇಕು, ಮರು ಬಳಕೆ ಮಾಡಬಹುದಾದ ಚೀಲಗಳನ್ನು ಬಳಸಬೇಕಾಗುತ್ತದೆ. ಇನ್ನೊಂದೆಡೆಗೆ ಈಗ ಐಆರ್‌ಸಿಟಿಸಿ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲಿಗಳನ್ನು ಹಿಂದಿರುಗಿಸುವ ಮತ್ತು ಪ್ಲಾಸ್ಟಿಕ್ ಬಾಟಲ್ ಪುಡಿಮಾಡುವ ಯಂತ್ರಗಳನ್ನು ತ್ವರಿತವಾಗಿ ಒದಗಿಸುವ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯದ ಉತ್ಪಾದನೆ ಮತ್ತು ಅದರ ಪರಿಸರ ಸ್ನೇಹಿ ವಿಲೇವಾರಿಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ರೈಲ್ವೆ ಕ್ರಮವನ್ನು ಜಾರಿಗೆ ತರಲು ಸಂಬಂಧ ಪಟ್ಟ ವಿಭಾಗಗಳಿಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿತಗೊಳಿಸಲು ಅಕ್ಟೋಬರ್ 2 ರಂದು ಪ್ರತಿಜ್ಞೆಯನ್ನು ನೀಡಬೇಕೆಂದು ರೈಲ್ವೆ ಸಚಿವಾಲಯ ತನ್ನ ರೈಲ್ವೆ ಘಟಕಗಳಿಗೆ ಸೂಚನೆ ನೀಡಿದೆ. ಇನ್ನು ಪ್ಲಾಸಿಕ್ ನಿಷೇಧದ ಕುರಿತಾಗಿ ರೈಲ್ವೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ)ಕಾರ್ಯಗಳನ್ನು ಹಮ್ಮಿಕೊಳ್ಳಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

Trending News