ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಸಿದ್ಧವಾಯ್ತು ಆಕಾಂಕ್ಷಿಗಳ ಪಟ್ಟಿ....!

ಕಾಂಗ್ರೆಸ್ ಜಿ-23 ನಾಯಕರಾದ ಪೃಥ್ವಿರಾಜ್ ಚವಾಣ್, ಆನಂದ್ ಶರ್ಮಾ ಮತ್ತು ಭೂಪಿಂದರ್ ಸಿಂಗ್ ಹೂಡಾ ಅವರು ಮಂಗಳವಾರ ಗುಲಾಂ ನಬಿ ಆಜಾದ್ ಅವರನ್ನು ಭೇಟಿ ಮಾಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.

Written by - Zee Kannada News Desk | Last Updated : Aug 30, 2022, 10:44 PM IST
  • ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಚವಾಣ್ ಅವರು ಗಾಂಧಿಯವರ ಅಭ್ಯರ್ಥಿಗೆ ಸವಾಲು ಹಾಕುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತವೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಸಿದ್ಧವಾಯ್ತು ಆಕಾಂಕ್ಷಿಗಳ ಪಟ್ಟಿ....! title=
file photo

ನವದೆಹಲಿ: ಕಾಂಗ್ರೆಸ್ ಜಿ-23 ನಾಯಕರಾದ ಪೃಥ್ವಿರಾಜ್ ಚವಾಣ್, ಆನಂದ್ ಶರ್ಮಾ ಮತ್ತು ಭೂಪಿಂದರ್ ಸಿಂಗ್ ಹೂಡಾ ಅವರು ಮಂಗಳವಾರ ಗುಲಾಂ ನಬಿ ಆಜಾದ್ ಅವರನ್ನು ಭೇಟಿ ಮಾಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚಿಗಷ್ಟೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಗುಲಾಂ ನಬಿ ಅಜಾದ್ ಶೀಘ್ರದಲ್ಲಿಯೇ ತಮ್ಮದೇ ಪಕ್ಷವನ್ನು ಆರಂಭಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದರಿಂದಾಗಿ ಆಕಾಂಕ್ಷಿಗಳ ಪಟ್ಟಿ ಈಗ ಬೆಳೆಯುತ್ತಾ ಹೋಗುತ್ತಿದೆ.ಅಕ್ಟೋಬರ್ 17 ರಂದು ನಡೆಯಲಿರುವ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಜಿ-23 ನಾಯಕರು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ತೆರೆಗೆ ಬರಲಿದೆ ಶಿವಣ್ಣ - ಪ್ರಭುದೇವ ಅಭಿನಯದ ಚಿತ್ರ , ಭಟ್ರ ನಿರ್ದೇಶನದಲ್ಲಿ ಭರದಿಂದ ಸಾಗಿದೆ ಚಿತ್ರೀಕರಣ

ಅದರಲ್ಲೂ ಪ್ರಮುಖವಾಗಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಕೂಡ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ, ಇನ್ನೊಂದೆಡೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಚವಾಣ್ ಅವರು ಗಾಂಧಿಯವರ ಅಭ್ಯರ್ಥಿಗೆ ಸವಾಲು ಹಾಕುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತವೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರ ಮುಂಚೂಣಿಯ ಓಟಗಾರರಾಗಿ ಹೊರಹೊಮ್ಮುವುದರೊಂದಿಗೆ, ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಆಯ್ಕೆಯೆಂದು ಪರಿಗಣಿಸಲ್ಪಟ್ಟಿದ್ದಾರೆ,ಒಂದು ವೇಳೆ ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಗೆ ಮರಳದಿದ್ದರೆ ಗಾಂಧಿ ಬಣದಿಂದ ಗೆಹಲೋಟ್ ಗೆ ಮಣೆ ಹಾಕುವ ಸಾಧ್ಯತೆ ಅಧಿಕ ಎನ್ನಲಾಗುತ್ತಿದೆ.

2000 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೊನೆಯ ಬಾರಿ ಚುನಾವಣೆ ನಡೆದಾಗ ಜಿತೇಂದ್ರ ಪ್ರಸಾದ ಅವರು ಸೋನಿಯಾ ಗಾಂಧಿಗೆ ಸವಾಲು ಹಾಕಿದ್ದರು ಆದರೆ ಸೋತಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News