ನವ ದೆಹಲಿ: ಉತ್ತರ ಪ್ರದೇಶದ ಬುಲಂದಶಹರ್ನಲ್ಲಿ ತಂದೆಯೇ ಹಾಲಲ್ಲಿ ನಿದ್ದೆ ಮಾತ್ರೆ ಹಾಕುವ ಮೂಲಕ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹಾಲಲ್ಲಿ ನಿದ್ದೆ ಮಾತ್ರೆ ಹಾಕಿ ಮಗಳು ಮಲಗಿದ ನಂತರ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ. ಈ ಘಟನೆಯು ಬುಲಂದ್ ಶಹರ್ ಸಮೀಪದ ಭೋಪುರ್ ಹಳ್ಳಿಯಲ್ಲಿ ಸಂಭವಿಸಿದೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಹುಡುಗಿ ತನ್ನ ತಾಯಿ ಮತ್ತು ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದಳು ಆ ಸಮಯದಲ್ಲಿ ತಂದೆಯೇ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆಕೆ ದೂರು ಪತ್ರದಲ್ಲಿ ಅತ್ಯಾಚಾರ ಬಗ್ಗೆ ತಿಳಿಸಿದ್ದಾರೆ. ಈ ಘಟನೆಯು ಬುಧವಾರ ನಡೆದಿದ್ದು ಹುಡುಗಿಯ ಪ್ರಕಾರ, ಅವಳ ತಂದೆ ಅವಳಿಗೆ ಹಾಲು ಕುಡಿಯಲು ನೀಡಿದರು. ಅದರಲ್ಲಿ ಅವರು ನಿದ್ದೆ ಗುಳಿಗೆ ಮಿಶ್ರಣ ಮಾಡಿದ್ದರು ಎಂದು ತಿಳಿಸಿದ್ದಾರೆ. ಕಾಮುಕ ತಂದೆ ವಿರುದ್ಧ ದೂರು ದಾಖಲಿಸಿದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡಲು ಪ್ರಾರಂಭಿಸಿದ್ದಾರೆ.